ಬೆಂಗಳೂರು: ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಪುತ್ರ ಮನೋರಂಜನ್ ರವಿಚಂದ್ರನ್ (Manoranjan Ravichandran) ಅವರು ಸಂಗೀತಾ ದೀಪಕ್ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ಯಾಲೇಸ್ ಗ್ರೌಂಡ್ನ ವೈಟ್ ಪೇಟಲ್ಸ್ನಲ್ಲಿ ವಿಜೃಂಭಣೆಯ ವಿವಾಹ ಕಾರ್ಯಕ್ರಮ ನೆರವೇರಿತು.
ಆತ್ಮೀಯರಿಗಾಗಿ ಆಗಸ್ಟ್ 22ರಂದು ರವಿಚಂದ್ರನ್ ಅವರು ಮಗನ ಮದುವೆಯ ಆರತಕ್ಷತೆಯನ್ನು ಆಯೋಜಿಸಿದ್ದಾರೆ. ಆ ಆರತಕ್ಷತೆಗೆ ದೊಡ್ಡ ಮಟ್ಟದಲ್ಲಿ ಜನರು ಬರುವ ನಿರೀಕ್ಷೆಯಿದೆ. ಶನಿವಾರ (ಆ.20) ನಡೆದ ಆರತಕ್ಷತೆ ಕಾರ್ಯಕ್ರಮದಲ್ಲಿ ಡಾ. ಶಿವರಾಜ್ಕುಮಾರ್, ಅಕುಲ್ ಬಾಲಾಜಿ, ಹಂಸಲೇಖ ದಂಪತಿ, ರಾಘವೇಂದ್ರ ರಾಜ್ಕುಮಾರ್ ದಂಪತಿ ಭಾಗವಹಿಸಿದ್ದರು.
ಇದನ್ನೂ ಓದಿ | Ravichandran | ಮಗನ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಕ್ರೇಜಿಸ್ಟಾರ್ದ್ದೇ ಫೋಟೊ!
ಈ ಹಿಂದೆ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಮಗನ ಮದುವೆ ಬಗ್ಗೆ ʻʻಮಗಳ ಮದುವೆ ತರಹ ಆಡಂಬರವಾಗಿ ಮಾಡುವುದಿಲ್ಲ. ಸರಳವಾಗಿ ಮಾಡುತ್ತೇವೆ. ಹೆಣ್ಣಿನ ಕಡೆಯವರಿಗೂ ಆಡಂಬರ ಇಷ್ಟವಿಲ್ಲʼʼ ಎಂದು ಹೇಳಿದ್ದರು. ನಟಿ ಉಮಾಶ್ರೀ, ಹಂಸಲೇಖ, ರಾಕ್ ಲೈನ್ ವೆಂಕಟೇಶ್, ನಟ ಶಿವರಾಜ್ ಕುಮಾರ್ ಸೇರಿದಂತೆ ಹಲವು ಗಣ್ಯರು ಹಾಗೂ ಸ್ಯಾಂಡಲ್ವುಡ್ ನಟ ನಟಿಯರು ಭಾಗಿಯಾಗಿದ್ದರು.
2017ರಲ್ಲಿ ಸಾಹೇಬ, 2021ರಲ್ಲಿ ಮುಗಿಲುಪೇಟೆ, ಬೃಹಸ್ಪತಿ ಮತ್ತು ಪ್ರಾರಂಭ ಸೇರಿದಂತೆ ಹಲವು ಸಿನಿಮಾಗಳಲ್ಲಿ ಮನೋರಂಜನ್ ನಟಿಸಿದ್ದಾರೆ. 2019ರಲ್ಲಿ ರವಿಚಂದ್ರನ್ ಅವರ ಮಗಳ ಮದುವೆ ಅದ್ಧೂರಿಯಾಗಿ ನೆರವೇರಿತ್ತು. ಕಿರಿಯ ಪುತ್ರ ವಿಕ್ರಮ್ ರವಿಚಂದ್ರನ್ ಈಗತಾನೇ ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡಿದ್ದಾರೆ. ಅವರು ನಟಿಸಿದ ತ್ರಿವಿಕ್ರಮ ಇತ್ತೀಚೆಗೆ ತೆರೆ ಕಂಡಿತ್ತು.
ಇದನ್ನೂ ಓದಿ | Manoranjan Ravichandran | ಸಪ್ತಪದಿ ತುಳಿಯಲಿರುವ ಕ್ರೇಜಿ ಸ್ಟಾರ್ ಪುತ್ರ ಮನು- ಸಂಗೀತ!