Site icon Vistara News

Manoranjan Ravichandran | ಮನೋರಂಜನ್‌ ವಿವಾಹೋತ್ಸವ: ಹೇಗಿದೆ ಕ್ರೇಜಿ ಸ್ಟಾರ್‌ ಡ್ಯಾನ್ಸ್‌!

Manoranjan Ravichandran

ಬೆಂಗಳೂರು: ಕ್ರೇಜಿ ಸ್ಟಾರ್‌ ರವಿಚಂದ್ರನ್‌ ಅವರ ಪುತ್ರ ಮನೋರಂಜನ್‌ (Manoranjan Ravichandran) ಅವರು ಭಾನುವಾರ (ಆ.21) ಸಂಗೀತಾ ದೀಪಕ್ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಹಿಂದೆ ಕ್ರೇಜಿ ಸ್ಟಾರ್‌ ರವಿಚಂದ್ರನ್‌ ಅವರು ಹೇಳಿಕೆ ನೀಡಿದಂತೆ ಅವರ ಪುತ್ರನ ಮದುವೆ ಸರಳವಾಗಿಯೇ ನೆರವೇರಿದೆ.

ಮದುವೆಯ ಸಂಭ್ರಮದಲ್ಲಿ ರವಿಚಂದ್ರನ್‌ ಅವರು ಕುಟುಂಬದವರೊಂದಿಗೆ ಸಖತ್‌ ಸ್ಟೆಪ್‌ ಹಾಕಿದ್ದಾರೆ. ಮದುವೆ ಬಗ್ಗೆ ಮಾತನಾಡಿದ ಮನೋರಂಜನ್‌ ʻʻಸಂಗೀತಾ ನಮಗೆ ದೂರದ ಸಂಬಂಧಿ ಆಗಬೇಕು. ಇದು ಆರೆಂಜ್ಡ್‌ ಮ್ಯಾರೇಜ್‌. ನಮ್ಮ ಕುಟುಂಬದಲ್ಲಿನ ಹುಡುಗರು ಸಾಮಾನ್ಯವಾಗಿ 27 ವರ್ಷದ ಒಳಗೆ ಮದುವೆ ಆಗುತ್ತಾರೆ. ಆದರೆ ನನಗೆ ಈಗ 34 ವರ್ಷ. ತಡವಾಗಿ ಮದುವೆ ಆಗಿದ್ದೇನೆʼʼ ಎಂದರು.

ಇದನ್ನೂ ಓದಿ | Manoranjan Ravichandran | ಸಪ್ತಪದಿ ತುಳಿಯಲಿರುವ ಕ್ರೇಜಿ ಸ್ಟಾರ್‌ ಪುತ್ರ ಮನು- ಸಂಗೀತ!

ಮದುವೆಯಲ್ಲಿ ನಟಿ ಉಮಾಶ್ರೀ, ಹಂಸಲೇಖ, ರಾಕ್ ಲೈನ್ ವೆಂಕಟೇಶ್, ನಟ ಶಿವರಾಜ್‌ ಕುಮಾರ್‌ ಸೇರಿದಂತೆ ಹಲವು ಗಣ್ಯರು, ಸ್ಯಾಂಡಲ್‌ವುಡ್‌ ನಟ – ನಟಿಯರು ಭಾಗಿಯಾಗಿದ್ದರು. ಮೂಲಗಳ ಪ್ರಕಾರ ಚಿತ್ರರಂಗದವರು ಮತ್ತು ಆತ್ಮೀಯರಿಗಾಗಿ ಆಗಸ್ಟ್‌ 22ರಂದು ರವಿಚಂದ್ರನ್‌ ಅವರು ಮಗನ ಮದುವೆಯ ಆರತಕ್ಷತೆಯನ್ನು ಆಯೋಜಿಸಿದ್ದಾರೆ ಎನ್ನಲಾಗಿದೆ.

2019ರಲ್ಲಿ ಮಗಳು ಗೀತಾಂಜಲಿ ಅವರ ಮದುವೆಯನ್ನು ರವಿಚಂದ್ರನ್‌ ಅದ್ಧೂರಿಯಾಗಿ ನೆರವೇರಿಸಿದ್ದರು. ಆ ಮದುವೆಗೆ ಸೂಪರ್‌ ಸ್ಟಾರ್‌ ರಜನಿಕಾಂತ್‌, ಚಿರಂಜೀವಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಆಗಮಿಸಿದ್ದರು.

2017ರಲ್ಲಿ ಸಾಹೇಬ, 2021ರಲ್ಲಿ ಮುಗಿಲುಪೇಟೆ, ಬೃಹಸ್ಪತಿ ಮತ್ತು ಪ್ರಾರಂಭ ಸೇರಿದಂತೆ ಹಲವು ಸಿನಿಮಾಗಳಲ್ಲಿ ಮನೋರಂಜನ್‌ ನಟಿಸಿದ್ದಾರೆ. ಕಿರಿಯ ಪುತ್ರ ವಿಕ್ರಮ್‌ ರವಿಚಂದ್ರನ್‌ ಈಗತಾನೇ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದಾರೆ. ಅವರು ನಟಿಸಿದ ತ್ರಿವಿಕ್ರಮ ಇತ್ತೀಚೆಗೆ ತೆರೆ ಕಂಡಿತ್ತು.

ಇದನ್ನೂ ಓದಿ | Manoranjan Ravichandran | ಸಂಗೀತಾಗೆ ಮಾಂಗಲ್ಯಧಾರಣೆ ಮಾಡಿದ ಮನೋರಂಜನ್: ಇಲ್ಲಿದೆ ವಿಡಿಯೊ!

Exit mobile version