ಬೆಂಗಳೂರು : ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಪುತ್ರ ಮನೋರಂಜನ್ (Manoranjan Ravichandran) ಅವರು ಭಾನುವಾರ (ಆ.21) ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಕ್ರೇಜಿ ಸ್ಟಾರ್ ಅವರ ಮನೆಯಲ್ಲಿ ಶನಿವಾರ (ಆ.21) ಬೆಂಗಳೂರಿನ ಅರಮನೆ ಮೈದಾನದಲ್ಲಿ ಮನು- ಸಂಗೀತ ಆರತಕ್ಷತೆ ಕಾರ್ಯಕ್ರಮ ನೆರವೇರಿದ್ದು ರವಿಚಂದ್ರನ್ ಅವರ ಆಪ್ತರು ಮತ್ತು ಕುಟುಂಬದವರಿಗಷ್ಟೇ ಅವಕಾಶವಿತ್ತು. ಮನೋರಂಜನ್ ಅವರು ವೈದ್ಯಕೀಯ ಹಿನ್ನೆಲೆಯಲ್ಲಿ ಇರುವ ಸಂಗೀತಾ ದೀಪಕ್ ಅವರನ್ನು ವಿವಾಹವಾಗುತ್ತಿದ್ದಾರೆ ಎನ್ನಲಾಗಿದೆ.
ಆರತಕ್ಷತೆಯಲ್ಲಿ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ದಂಪತಿ ಹಾಗೂ ಹಂಸಲೇಖ ದಂಪತಿ, ಖುಷ್ಬು ಹಾಗೂ ಮಾಸ್ಟರ್ ಆನಂದ್, ಅಕುಲ್ ಬಾಲಾಜಿ, ಸಿ ಟಿ ರವಿ ಹಾಗೂ ಸ್ಯಾಂಡಲ್ ವುಡ್ನ ನಟ ನಟಿಯರು ಆಗಮಿಸಿ ನವದಂಪತಿಗೆ ಹಾರೈಸಿದರು. ಇಂದು ಭಾನುವಾರ (ಆ.21) ಮನು ರವಿಚಂದ್ರನ್ ಅವರು ಮಾಂಗಲ್ಯ ಧಾರಣೆ ಮಾಡಲಿದ್ದಾರೆ.
ಇದನ್ನೂ ಓದಿ | Ravichandran | ಮಗನ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಕ್ರೇಜಿಸ್ಟಾರ್ದ್ದೇ ಫೋಟೊ!
ಹೇಗಿದೆ ತಯಾರಿ ?
ಕ್ರೇಜಿ ಸ್ಟಾರ್ ಪುತ್ರ ಮನೋರಂಜನ್ ರವಿಚಂದ್ರನ್ ಅವರ ಮದುವೆ ಇಂದು ನಡೆಯಲಿದೆ ಬೆಂಗಳೂರಿನ ಅರಮನೆ ಆವರಣದಲ್ಲಿ ಶುಭ ಕಾರ್ಯ ನೆರವೇರಲಿದೆ. ಮದುವೆ ಮುಹೂರ್ತ ಬೆಳಗ್ಗೆ 7:30 ರಿಂದ 9ಗಂಟೆಯೊಳಗೆ ನಿಗದಿಯಾಗಿದೆ.ಪ್ಯಾಲೇಸ್ ಗ್ರೌಂಡ್ನ ವೈಟ್ ಪೇಟಲ್ಸ್ನಲ್ಲಿ ವಿಜೃಂಭಣೆಯ ವಿವಾಹ ಕಾರ್ಯಕ್ರಮ ನಡೆಯಲಿದ್ದು, ವಿವಾಹ ಮಂಟಪವನ್ನು ಹೂವುಗಳಿಂದ ಅಲಂಕರಿಸಲಾಗಿದೆ.
2017ರಲ್ಲಿ ಸಾಹೇಬ, 2021ರಲ್ಲಿ ಮುಗಿಲುಪೇಟೆ, ಬೃಹಸ್ಪತಿ ಮತ್ತು ಪ್ರಾರಂಭ ಸೇರಿದಂತೆ ಹಲವು ಸಿನಿಮಾಗಳಲ್ಲಿ ಮನೋರಂಜನ್ ನಟಿಸಿದ್ದಾರೆ. 2019ರಲ್ಲಿ ರವಿಚಂದ್ರನ್ ಅವರ ಮಗಳ ಮದುವೆ ಅದ್ಧೂರಿಯಾಗಿ ನೆರವೇರಿತ್ತು. ಕಿರಿಯ ಪುತ್ರ ವಿಕ್ರಮ್ ರವಿಚಂದ್ರನ್ ಈಗತಾನೇ ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡಿದ್ದಾರೆ. ಅವರು ನಟಿಸಿದ ತ್ರಿವಿಕ್ರಮ ಇತ್ತೀಚೆಗೆ ತೆರೆ ಕಂಡಿತ್ತು.
ಇದನ್ನೂ ಓದಿ | ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರಾ ಮನೋರಂಜನ್ ರವಿಚಂದ್ರನ್? ಏನಿದು ಇನ್ವಿಟೇಶನ್?