ಬೆಂಗಳೂರು: ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ರವಿಚಂದ್ರನ್ (Manoranjan Ravichandran) ಹಸೆಮಣೆ ಏರಲಿದ್ದಾರೆ ಎಂಬ ಮಾಹಿತಿ ಕೇಳಿ ಬಂದಿದೆ. ಆಗಸ್ಟ್ 21-22ರಂದು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ ಎನ್ನಲಾಗುತ್ತಿದೆ. ವೈದ್ಯಕೀಯ ಕ್ಷೇತ್ರದಲ್ಲಿರುವ ಯುವತಿ ಜತೆ ಸಪ್ತಪದಿ ತುಳಿಯಲಿದ್ದಾರೆ ಎಂದು ಕೇಳಿ ಬಂದಿದೆ.
ಮನು ನಟನೆಯ ಪ್ರಾರಂಭ ಸಿನಿಮಾ ಬಿಡುಗಡೆಯ ವೇಳೆ ಅವರ ಮದುವೆ ಇನ್ವಿಟೇಶನ್ ಕಾರ್ಡ್ ಹರಿದಾಡಿತ್ತು. ಆದರೆ, ಅದು ಸಿನಿಮಾ ಪ್ರಮೋಶನ್‌ಗಾಗಿ ಮಾಡಿದ ಪ್ರಚಾರ ತಂತ್ರ ಎನ್ನಲಾಗಿತ್ತು. ಮದುವೆ ಬಗ್ಗೆ ಮೇ ತಿಂಗಳಲ್ಲಿ ಮನೋರಂಜನ್ ಕ್ಲಾರಿಟಿ ನೀಡಿದ್ದರು. ಈಗ ರಿಯಲ್ ಲೈಫ್ ಇನ್ವಿಟೇಶನ್ ಕೊಡುವುದಕ್ಕೆ ರೆಡಿಯಾಗಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ | Vikrant Rona Movie | VR ಅಂದರೆ ವಿಕ್ರಾಂತ್ ರೋಣ ಅಲ್ಲ: V. ರವಿಚಂದ್ರನ್ ಅಂತೆ!
ರವಿಚಂದ್ರನ್ ಕುಟುಂಬ ಆಪ್ತ ರಘು ರಾಮ್ ಮದುವೆ ಬಗ್ಗೆ ಹರಿದಾಡುತ್ತಿರುವ ಸುದ್ದಿ ನಿಜ ಎಂದಿದ್ದಾರೆ ಎನ್ನುವ ಮಾಹಿತಿ ಕೂಡ ಇದೆ. ಮದುವೆ ಆಗಸ್ಟ್‌ನಲ್ಲಿ ನಿಗದಿಯಾಗಿದೆ. ಆದರೆ, ದಿನಾಂಕ ಮಾತ್ರ ಘೋಷಣೆ ಮಾಡಿಲ್ಲ ಎಂದು ತಿಳಿದು ಬಂದಿದೆ.
2017ರಲ್ಲಿ ಸಾಹೇಬ, 2021ರಲ್ಲಿ ಮುಗಿಲುಪೇಟೆ, ಬೃಹಸ್ಪತಿ ಮತ್ತು ಪ್ರಾರಂಭ ಸೇರಿದಂತೆ ಹಲವು ಸಿನಿಮಾಗಳಲ್ಲಿ ಮನೋರಂಜನ್ ನಟಿಸಿದ್ದಾರೆ. 2019ರಲ್ಲಿ ರವಿಚಂದ್ರನ್ ಅವರ ಮಗಳ ಮದುವೆ ಅದ್ಧೂರಿಯಾಗಿ ನೆರವೇರಿತ್ತು. ಕಿರಿಯ ಪುತ್ರ ವಿಕ್ರಮ್ ರವಿಚಂದ್ರನ್ ಈಗತಾನೇ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದಾರೆ. ಅವರು ನಟಿಸಿದ ತ್ರಿವಿಕ್ರಮ ಇತ್ತೀಚೆಗೆ ತೆರೆ ಕಂಡಿತ್ತು.
ಇದನ್ನೂ ಓದಿ| ಕ್ರೇಜಿಸ್ಟಾರ್ ಜನ್ಮದಿನಕ್ಕೆ ಸಿಕ್ತು ಭರ್ಜರಿ ಗಿಫ್ಟ್