Site icon Vistara News

ʼ19.20.21ʼ | ಮಂಸೋರೆ ಹೊಸ ಚಿತ್ರ ಶೂಟಿಂಗ್‌ ಕಂಪ್ಲೀಟ್‌

ಮಂಸೋರೆ

ಬೆಂಗಳೂರು : ಕನ್ನಡ ಚಲನಚಿತ್ರರಂಗದಲ್ಲಿ ಅತ್ಯಂತ ಹೆಸರುವಾಸಿ ನಿರ್ದೇಶಕ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಮಂಸೋರೆ ಕೂಡ ಒಬ್ಬರು. ʼAct-1978ʼ ಸಿನಿಮಾದ ಮೂಲಕ ಖ್ಯಾತಿಯನ್ನು ಪಡೆದ ಮಂಸೋರೆ ʼಅಬ್ಬಕ್ಕʼ ಎನ್ನುವ ಮುಂದಿನ ಸಿನಿಮಾವನ್ನು ಮಾಡಲು ಮುಂದಾಗಿದ್ದಿದ್ದರು. ಇದು 16 ನೇ ಶತಮಾನದ ತುಳುವ ರಾಣಿ ಅಬ್ಬಕ್ಕ ಚೌಟಾ ಅವರ ಶೌರ್ಯ ಮತ್ತು ಸಮಯವನ್ನು ಆಧರಿಸಿದ ಚಿತ್ರವಾಗಿದೆ ಎಂದು ಹೇಳಿಕೊಂಡಿದ್ದರು.

ಕೋರೊನಾ ಕಾರಣಾಂತರದಿಂದ ರಾಣಿ ಅಬ್ಬಕ್ಕ ಚಿತ್ರವನ್ನು ಸ್ವಲ್ಪ ಹೋಲ್ಡ್‌ ಮಾಡಿದ್ದಾರೆ. ʼAct-1978 ಸಿನಿಮಾ ಟೈಟಲ್‌ನಲ್ಲಿ ಅಂಕಿಗಳೇ ಇದ್ದವು. ಅದೇನೊ ಅಂಕಿಗಳ ಟೈಟಲ್‌ ಮಂಸೋರೆಗೆ ಹಿಡಿಸಿಬಿಟ್ಟಿದೆ. ಈಗ ಅಂಕಿಗಳದ್ದೇ ಟೈಲ್‌ ಹೊಂದಿರುವ ಸಿನಿಮಾ ನಿರ್ಮಿಸುತ್ತಿದ್ದಾರೆ. ಸಿನಿಮಾ ಹೆಸರು ʼ19.20.21ʼ. ಹೌದು. ಸಿನಿಮಾ ಹೆಸರೇ ಹತ್ತೊಂಭತ್ತು ಇಪ್ಪತ್ತು ಇಪ್ಪತ್ತೊಂದು. ಸಿನಿಮಾ ಚಿತ್ರೀಕರಣ ಆರಂಭ ಮಾಡುತ್ತೇವೆ ಎಂದು ಈ ಹಿಂದೆ ಅನೌನ್ಸ್‌ ಮಾಡಿದ್ದರು. ಇದೀಗ ಸದ್ದಿಲ್ಲದೇ ಚಿತ್ರತಂಡ  ʼ19.20.21ʼ ಸಿನಿಮಾ ಚಿತ್ರೀಕರಣವನ್ನು ಮುಗಿಸಿದೆ. ಶಿರ್ಷಿಕೆಯೇ ಜನರನ್ನು ಸೆಳೆಯುತ್ತಿದ್ದು, ನೈಜ ಘಟನೆ ಆಧಾರಿತ ಆಸಕ್ತಿದಾಯಕ ಮಹತ್ವವನ್ನು ಹೊಂದಿದೆ ಎಂದು ಹೇಳಿಕೊಂಡಿದ್ದಾರೆ.

ʼAct 1978ʼ ನಿರ್ಮಾಪಕ ದೇವರಾಜ್‌ ಮತ್ತು ಆರ್‌. ಸತ್ಯ ಹೆಗಡೆ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ವೀರೆಂದ್ರ ಮಲ್ಲಣ್ಣ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಈ ಸಿನಿಮಾದ ಕುರಿತು ನಿರ್ದೇಶಕ ಮಂಸೋರೆ ಮಾತನಾಡಿ, ʼಸತತ 51 ದಿನಗಳ ಕಾಲ ಬಿಸಿಲು, ಚಳಿ, ಮಳೆ ಗಾಳಿ ಲೆಕ್ಕಿಸದೇ , ಹವಮಾನದ ವೈಪರೀತ್ಯಗಳ ನಡುವೆ, ನಾವು ಹೇಳಬೇಕು ಎಂದು ಬಯಸಿ, ಈ ನೆಲದ ಕತೆಯೊಂದನ್ನು ಸಿನಿಮಾ ಮಾಡಬೇಕು ಎನ್ನುವ ಆಸೆಯನ್ನು ಹೊಂದು ಮೊದಲ ಹಂತವನ್ನು ಪೂರ್ಣಗೊಳಿಸಿದ್ದೇವೆ, ಸಂತಸವಾಗುತ್ತದೆʼ ಎಂದಿದ್ದಾರೆ.

ಇದನ್ನೂ ಓದಿ | Director ಉಪೇಂದ್ರ Returns: ಪಾನ್‌ ಇಂಡಿಯಾ ಸಿನಿಮಾಕ್ಕೆ ಜೂ.3ರಂದು ಮುಹೂರ್ತ

ಸಿನಿಮಾ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ಇದನ್ನು ಸಾಧ್ಯವಾಗಿಸಿದ ನನ್ನೆಲ್ಲ ತಂಡಗಳಿಗೆ ಆಭಾರಿಯಾಗಿದ್ದೇನೆ. ಪ್ರತಿ ಊರಿನಲ್ಲಿ ಸಹಕರಿಸಿದ ಸಹಾಯ ಮಾಡಿದ ಸ್ನೇಹಿತರಿಗೆ ನಾನು ಚಿರಋಣಿ. ಚಿತ್ರೀಕರಣ ಯಶಸ್ವಿಯಾಗಿ ಪೂರ್ತಿಗೊಳ್ಳಲು ಶ್ರಮಿಸಿದ ನಿರ್ದೇಶಕರ ತಂಡಕ್ಕೂ ಸದಸ್ಯರಿಗೂ ಧನ್ಯವಾದʼ ಎಂದು ಬರೆದಿದ್ದಾರೆ.

ʼಹರಿವುʼ, ʼನಾಚಿತರಾಮಿʼ, ʼಆಕ್ಟ್‌ 1978ʼ ಸಿನಿಮಾಗಳ ಮೂಲಕ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕ ಮಂಸೋರೆ ಅವರ ನಾಲ್ಕನೇ ಚಿತ್ರ ಇದಾಗಿದೆ. ಯಲ್ಲಾಪುರ ಮತ್ತು ಧಾರವಾಡ, ಕರಾವಳಿ ಪ್ರಮುಖ ಸ್ಥಳಗಳಲ್ಲಿ ಚಿತ್ರೀಕರಣವಾಗುತ್ತಿದೆ.

ನಟ ಶೃಂಗ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಹೊಸ ಪ್ರಯತ್ನವೊಂದರ ಬೆನ್ನತ್ತಿ ಹೊರಟಿದ್ದೇವೆ. ಆದರೆ ಇದು ಕನಸಲ್ಲ. ಕಥೆಯಲ್ಲ. ಸತ್ಯ ಘಟನೆ ಆಧಾರಿತ. ಬಹಳ ಹಿಂದೇಯೇ ಸಿನಿಮಾ ಮಾಡಬೇಕು ಅಂದುಕೊಂಡಿದ್ದ ಒಂದು ಘಟನೆಯ ದೃಶ್ಯರೂಪ ಪಡೆದುಕೊಳ್ಳಲು ಈಗ ಕಾಲ ಕೂಡಿ ಬಂದಿದೆ. ಈ ವರ್ಷವೇ ಸಿನಿಮಾವನ್ನು ನಿಮ್ಮ ಮುಂದೆ ತರುವ ಆಶಯದೊಂದಿಗೆ, ಅತಿ ಶೀಘ್ರದಲ್ಲಿ ಚಿತ್ರೀಕರಣ ಪ್ರಾರಂಭ ಮಾಡುತ್ತೇವೆ. ಹತ್ತೊಂಬತ್ತು, ಇಪ್ಪತ್ತು, ಇಪ್ಪತ್ತೊಂದು ಎಲ್ಲರ ಬದುಕಿಗೆ ಬಹಳ ಮುಖ್ಯವಾದ ಸಂಖ್ಯೆಗಳು. ಅದು ಏನು? ಹೇಗೆ? ಎಂಬುದು ಸಿನಿಮಾ ನೋಡುವ ತನಕ ಉಳಿದಿರಲಿ ಎಂದು ಈ ಹಿಂದೆ ಮಂಸೋರೆ ಬರೆದುಕೊಂಡಿದ್ದರು.

ಇದನ್ನೂ ಓದಿ | ಈ ವರ್ಷ ಅತಿ ಹೆಚ್ಚು ಕಲೆಕ್ಷನ್‌ ಮಾಡಿದ ಸಿನಿಮಾ ಯಾವುದು ಗೊತ್ತೇ?

Exit mobile version