Site icon Vistara News

Manushi Chhillar | ಬೆಂಗಳೂರು ಮೂಲದ ಉದ್ಯಮಿ ಜತೆ ವಿಶ್ವ ಸುಂದರಿ ಮಾನುಷಿ ಚಿಲ್ಲರ್‌ ಡೇಟಿಂಗ್‌?

Manushi Chhillar (dating nikhil kanath )

ಬೆಂಗಳೂರು: ವಿಶ್ವ ಸುಂದರಿ, ನಟಿ ಮಾನುಷಿ ಚಿಲ್ಲರ್‌ (Manushi Chhillar) ಇದೀಗ ಅವರ ಡೇಟಿಂಗ್‌ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಬೆಂಗಳೂರು ಮೂಲದ ಉದ್ಯಮಿ ನಿಖಿಲ್‌ ಕಾಮತ್‌ ಜತೆ ಮಾನುಷಿ ಅವರು ಮದುವೆಯಾಗಲಿದ್ದಾರೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಗಾಸಿಪ್‌ಗಳು ಹರಿದಾಡುತ್ತಿವೆ.

ಬಾಲಿವುಡ್‌ನಲ್ಲಿ ನಟ ಅಕ್ಷಯ್‌ ಕುಮಾರ್‌ ಜತೆ ಸಾಮ್ರಾಟ್‌ ಪೃಥ್ವಿರಾಜ್‌ ಚಿತ್ರದಲ್ಲಿ ನಾಯಕಿಯಾಗಿ ಮಾನುಷಿ ಚಿಲ್ಲರ್‌ ಕಾಣಿಸಿಕೊಂಡಿದ್ದರು. ಆದರೆ ಈ ಸಿನಿಮಾ ಅಷ್ಟಾಗಿ ಕಲೆಕ್ಷನ್‌ ಮಾಡಿರಲಿಲ್ಲ. ಈಗಾಗಲೇ ಬಾಲಿವುಡ್‌ನಲ್ಲಿ ಸಾಕಷ್ಟು ಸಿನಿಮಾಗಳು ಮಾನುಷಿ ಚಿಲ್ಲರ್‌ ಅವರಿಗೆ ಅರಸಿ ಬರುತ್ತಿವೆ. ಈ ನಡುವೆ ಬೆಂಗಳೂರು ಮೂಲದ ಉದ್ಯಮಿ ನಿಖಿಲ್‌ ಕಾಮತ್‌ ಜತೆ ಮಾನುಷಿ ಚಿಲ್ಲರ್‌ ಡೇಟಿಂಗ್‌ ಮಾಡುತ್ತಿದ್ದು, ಒಬ್ಬರನೊಬ್ಬರು ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿಗಳು ಬಿಟೌನ್‌ನಲ್ಲಿ ಹರಿದಾಡುತ್ತಿವೆ. ಈಗಾಗಲೇ ಜೋಡಿ ಒಟ್ಟಿಗೆ ನೆಲೆಸಿದೆ. ಎಂಗೇಜ್‌ ಕೂಡ ಆಗಿದ್ದಾರೆ. ಸದ್ಯದಲ್ಲೆ ಹಸೆಮಣೆ ಏರಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ | Akshay Kumar | ಅತಿ ಹೆಚ್ಚು ತೆರಿಗೆ ಪಾವತಿಗಾಗಿ ಸಮ್ಮಾನ್‌ ಪ್ರಮಾಣ ಪತ್ರ ಪಡೆದ ನಟ

ನಿಖಿಲ್‌ ಕಾಮತ್‌ ಅವರು ಬೆಂಗಳೂರು ಮೂಲದವಾರಿದ್ದು ಈಗಾಗಲೇ ಅವರಿಗೆ ಮದುವೆ ಆಗಿತ್ತು ಎನ್ನಲಾಗಿದೆ. 2019ರ ವೇಳೆ ಇಟಲಿಯಲ್ಲಿ ಅಮಂಡಾ ಪುರವಂಕರ ಜತೆ ವಿವಾಹವಾಗಿದ್ದರು. ಕಾರಣಾಂತರದಿಂದ ಡಿವೋರ್ಸ್‌ ಪಡೆದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ | Prithviraj Trailer: ಸೂಪರ್ ಸ್ಟಾರ್ ಜತೆ ಅಭಿನಯಿಸಲಿದ್ದಾರೆ Miss World…


Exit mobile version