ಮರಾಠಿ ಸಿನಿಮಾರಂಗದ ಖ್ಯಾತ ನಟ, ನಿರ್ದೇಶಕ ರವೀಂದ್ರ ಮಹಾಜನಿ (Ravindra Mahajani) ಅವರು ಪುಣೆಯ ತಾಲೇಗಾಂವ್ ದಭಾಡೆಯಲ್ಲಿರುವ Xrbia ಸೊಸೈಟಿಯ ಅಪಾರ್ಟ್‌ಮೆಂಟ್‌ನಲ್ಲಿ ಜುಲೈ 14ರಂದು ಶವವಾಗಿ ಪತ್ತೆಯಾಗಿದ್ದಾರೆ. ಪೊಲೀಸರ ಪ್ರಕಾರ, ಮುಂಬೈ ನಿವಾಸಿ ರವೀಂದ್ರ ಮಹಾಜನಿ (gashmeer mahajani) ಸುಮಾರು ಎಂಟು ತಿಂಗಳಿಂದ ಅಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರು ಎನ್ನಲಾಗಿದೆ. ಏಕಾಂಗಿ ಇದ್ದ ಕಾರಣ ಖಿನ್ನತೆ ಜಾರಿದ್ದರು ಎನ್ನಲಾಗಿದೆ. ಜುಲೈ 14ರ ಸಂಜೆ 4.30ರ ಸುಮಾರಿಗೆ ಅಪಾರ್ಟ್‌ಮೆಂಟ್‌ನಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ನೆರೆಹೊರೆಯವರು ಪೊಲೀಸರನ್ನು ಸಂಪರ್ಕಿಸಿದ್ದಾರೆ. ಇವರು ಮರಾಠಿ ಖ್ಯಾತ ಮಟ ಗಶ್ಮೀರ್ (ravindra mahajani son) ಮಹಾಜನಿ ತಂದೆ.
ಕೂಡಲೇ, ತಾಳೆಗಾಂವ್ ಎಂಐಡಿಸಿ ಪೊಲೀಸ್ ಠಾಣೆಯ ತಂಡವು ಸ್ಥಳಕ್ಕೆ ಆಗಮಿಸಿದ್ದಾರೆ. ಅಪಾರ್ಟ್‌ಮೆಂಟ್ ಒಳಗಿನಿಂದ ಬೀಗ ಹಾಕಿರುವುದು ಕಂಡುಬಂದಿದೆ. ಸ್ಥಳೀಯರ ಸಮ್ಮುಖದಲ್ಲಿ ಪೊಲೀಸರು ಬಾಗಿಲು ಒಡೆದು ಒಳ ನುಗ್ಗಿ ನೋಡಿದಾಗ ಮಹಜನಿಯ ಶವ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಮಹಾಜನಿ ಎಂದು ಅಪಾರ್ಟ್‌ಮೆಂಟ್ ಮಾಲೀಕರು ಗುರುತಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶವನೋಡಿದ ಪೊಲೀಸರು ಎರಡು ಮೂರು ದಿನಗಳ ಮೊದಲೇ ನಿಧನರಾಗಿದ್ದಾರೆ ಎಂದು ಶಂಕಿಸಲಾಗಿದೆ.
ಬಳಿಕ ನಟನ ನಿಧನದ ಸುದ್ದಿಯನ್ನು ಪೊಲೀಸರು ಅವರ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ. ಸಾವಿನ ಕಾರಣವನ್ನು ಖಚಿತಪಡಿಸಲು ಅವರ ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ.
ಇದನ್ನೂ ಓದಿ: Actor Aditya Singh Rajput: ನಟ, ಮಾಡೆಲ್ ಆದಿತ್ಯ ಸಿಂಗ್ ರಜಪೂತ್ ಶವವಾಗಿ ಪತ್ತೆ
Ravindra Mahajani a veteran actor of Marathi industry
— Kavita ⭐️ (@Kavimehere) July 15, 2023
🙏#TejRan https://t.co/hohTqvgCDY
ಮುಂಬೈಚಾ ಫೌಜ್ದರ್ (Mumbaicha Fauzdar) (1984) ಮತ್ತು ಕಲಾತ್ ನಕಲತ್ (Kalat Nakalat) (1990) ನಂತಹ ಸಿನಿಮಾಗಳಿಗೆ ಹೆಸರುವಾಸಿಯಾಗಿದ್ದರು. 1970 ರ ದಶಕದಿಂದ ಅನೇಕ ವರ್ಷಗಳ ಕಾಲ ಮರಾಠಿ ಚಲನಚಿತ್ರೋದ್ಯಮದಲ್ಲಿ ಸಕ್ರಿಯರಾಗಿದ್ದರು. ಕೊನೆಯದಾಗಿ ಹಿಂದಿಯಲ್ಲಿ ಪಾಣಿಪತ್ ((2019)) ಸಿನಿಮಾದಲ್ಲಿ ನಟಿಸಿದ್ದರು. ಮಗ ಗಶ್ಮೀರ್ (ravindra mahajani son) ಮಹಾಜನಿ ಕೂಡ ನಟರಾಗಿದ್ದಾರೆ.