Site icon Vistara News

Dhruva Sarja: ಬರೋಬ್ಬರಿ 9 ಕೋಟಿ ರೂ.ಗೆ ಮಾರಾಟ ಆಯ್ತು ʻಮಾರ್ಟಿನ್‌ʼ ಆಡಿಯೊ ರೈಟ್ಸ್‌!

Martin Movie

ಬೆಂಗಳೂರು: ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ (Dhruva Sarja) ಅಭಿನಯದ ʻಮಾರ್ಟಿನ್‌ʼ ಟೀಸರ್‌ ಈಗಾಗಲೇ ಬಿಡುಗಡೆಗೊಂಡಿದ್ದು ನೋಡುಗರು ಮೆಚ್ಚಿದ್ದಾರೆ. ಅದ್ಧೂರಿ ಬಜೆಟ್‌ ಮತ್ತು ಮೇಕಿಂಗ್‌ನಿಂದಾಗಿ ಸದ್ದು ಮಾಡುತ್ತಿರುವ ಸಿನಿಮಾ ‘ಮಾರ್ಟಿನ್ (‘MARTIN’ TEASER) ಬಗ್ಗೆ ಹೊಸ ಸುದ್ದಿಯೊಂದು ರಿವೀಲ್‌ ಆಗಿದೆ. ಈ ಚಿತ್ರದ ಆಡಿಯೊ ಹಕ್ಕು 9 ಕೋಟಿ ರೂಪಾಯಿಗೆ ಮಾರಾಟ ಆಗಿದೆ ಎನ್ನಲಾಗಿದೆ. ಜನಪ್ರಿಯ ಆಡಿಯೋ ಸಂಸ್ಥೆ ‘ಸರೆಗಮ..’ ‘ಮಾರ್ಟಿನ್’ ಚಿತ್ರದ ಆಡಿಯೋ ಹಕ್ಕನ್ನು ಖರೀದಿ ಮಾಡಿದೆ.

ಈ ಬಗ್ಗೆ ಮಾಧ್ಯಮವೊಂದಕ್ಕೆ ನಿರ್ಮಾಪಕ ಉದಯ್ ಮಾತನಾಡಿ ʻʻ‘ನನಗೆ ತಿಳಿದಂತೆ ಇಷ್ಟು ದೊಡ್ಡ ಮೊತ್ತಕ್ಕೆ ಯಾವ ಸಿನಿಮಾದ ಆಡಿಯೋ ಹಕ್ಕೂ ಮಾರಾಟ ಆಗಿಲ್ಲ. ಈ ವಿಚಾರ ನಮಗೆ ಖುಷಿ ತಂದಿದೆ’ ಎಂದಿದ್ದಾರೆ. ಈಗಾಗಲೇ ಸಿನಿಮಾ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಭರದಿಂದ ಸಾಗುತ್ತಿದೆ. ಕ್ಲೈಮ್ಯಾಕ್ಸ್‌ನ ಆ್ಯಕ್ಷನ್‌ ದೃಶ್ಯಗಳಿಗೆ ರಾಮ್‌-ಲಕ್ಷ್ಮಣ್‌ ಮತ್ತು ರವಿವರ್ಮ ಸಾಹಸ ನಿರ್ದೇಶನ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಒಂದು ಸಿನಿಮಾದ ಕ್ಲೈಮ್ಯಾಕ್ಸ್‌ಗಾಗಿ ಮೂರು ಸಾಹಸ ನಿರ್ದೇಶಕರು ಕೆಲಸ ಮಾಡಿರುವುದು ಎಂದು ಹೇಳಲಾಗುತ್ತಿದೆ.

ಮಾರ್ಟಿನ್ ಚಿತ್ರಕ್ಕೆ ಮಣಿ ಶರ್ಮಾ ಅವರ ಸಂಗೀತ ಮತ್ತು ಸತ್ಯ ಹೆಗಡೆ ಅವರ ಛಾಯಾಗ್ರಹಣವಿದೆ. ಇದೀಗ ಪಂಚ ಭಾಷೆಗಳಲ್ಲಿ, ಮಾರ್ಟಿನ್‌ ಸಿನಿಮಾದ ಟೀಸರ್‌ ಬಿಡುಗಡೆಗೊಂಡಿದೆ. ಈ ಸಿನಿಮಾದಲ್ಲಿ ಧ್ರುವ ಸರ್ಜಾ ಅವರಿಗೆ ವೈಭವಿ ಶಾಂಡಿಲ್ಯ ನಾಯಕಿಯಾಗಿ ನಟಿಸಿದ್ದಾರೆ. ಮಾರ್ಟಿನ್‌ ಸಿನಿಮಾದಲ್ಲಿ ಕನ್ನಡದ ಕಲಾವಿದರ ಜತೆಗೆ ಹಿಂದಿ, ತೆಲುಗು, ತಮಿಳು ಚಿತ್ರರಂಗದ ಕಲಾವಿದರು ನಟಿಸಿದ್ದಾರೆ. ಅಚ್ಯುತ್‌ ಕುಮಾರ್‌, ನಿಕಿತನ್‌ ಧೀರ್‌, ನವಾಬ್‌ ಶಾ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿದ್ದಾರೆ. ‘ಧೀರನ್‌ ಅಧಿಕಾರಂ ಒಂಡ್ರು’ತಮಿಳು ಚಿತ್ರದ ಮೂಲಕ ಗಮನ ಸೆಳೆದಿದ್ದ ನಟ ರೋಹಿತ್‌ ಪಾಠಕ್‌ ಸಹ ‘ಮಾರ್ಟಿನ್‌’ನಲ್ಲಿ ಬಹು ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Dhruva Sarja: ಜ್ಯೋತಿ ಬೆಳಗಿಸಿ, ರಾಮನ ಕೃಪೆಗೆ ಪಾತ್ರರಾಗೋಣ ಎಂದ ಧ್ರುವ ಸರ್ಜಾ!

ಸಾಲು ಸಾಲು ಸಿನಿಮಾಗಳಲ್ಲಿ ಧ್ರುವ ಬ್ಯುಸಿ

ನಿರ್ದೇಶಕ ಪ್ರೇಮ್‌ ಹಾಗೂ ಧ್ರುವ ಕಾಂಬಿನೇಶನ್‌ ಇರುವ ʻಕೆಡಿ’ ಸಿನಿಮಾ ಟೈಟಲ್ ಮೂಲಕ ಕ್ಯೂರಿಯಸ್ ಹುಟ್ಟು ಹಾಕಿದೆ. ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಸತ್ಯವತಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ರೆಟ್ರೊ ಲುಕ್‌ನಲ್ಲಿ ಶಿಲ್ಪಾ ಶೆಟ್ಟಿ ಮಿಂಚಿದ್ದು, ಚೆಂದದ ಸೀರೆಯುಟ್ಟು ಉದ್ದದ ಜಡೆ ಮುಂದಕ್ಕೆ ಬಿಟ್ಟು, ಕೂಲಿಂಗ್ ಗ್ಲ್ಯಾಸ್ ಧರಿಸಿ ರಾಯಲ್ ಆಗಿ ಕಾಣಿಸಿಕೊಂಡಿದ್ದರು.ಈ ಹಿಂದೆ ಚಿತ್ರತಂಡ ರವಿಚಂದ್ರನ್ ಅವರ ಲುಕ್‌ ಹಂಚಿಕೊಂಡಿತ್ತು. ರವಿಚಂದ್ರನ್ ಅವರ ಸಿನಿಮಾ ಫಸ್ಟ್ ಲುಕ್‌ನಲ್ಲಿ ಹಣೆಯಲ್ಲಿ ವಿಭೂತಿ, ಕಪ್ಪು ಶರ್ಟ್ ಮತ್ತು ಪ್ಯಾಂಟ್‌ನಲ್ಲಿ ಖಡಕ್ ಆಗಿ ಕಾಣಿಸಿಕೊಂಡಿದ್ದರು. ತಮ್ಮ ಬಲಗಾಲಿನಲ್ಲಿ ಕಾರಿನ ಡೋರ್ ಓಪನ್ ಮಾಡಿ ಪೋಸ್ ಕೊಟ್ಟಿದ್ದರು. ಎಂದೂ ಕಾಣಿಸಿಕೊಂಡಿರದ ಲುಕ್‌ನಲ್ಲಿ ರವಿಚಂದ್ರನ್ ಮಿಂಚಿದ್ದರು. ಅಷ್ಟೇ ಅಲ್ಲದೇ ಧ್ರುವ ಸರ್ಜಾ ಅವರು 23 ದಿನಗಳಲ್ಲಿ 18 ಕೆಜಿ ತೂಕ ಇಳಿಸಿಕೊಂಡಿದ್ದರು.

ಧ್ರುವ ಸರ್ಜಾ ರೈನಾ ಎಂಬ ಸಿನಿಮಾವನ್ನು ಅನೌನ್ಸ್‌ ಮಾಡಿದ್ದಾರೆ. ಮಾಸ್ ಲುಕ್‌ನಲ್ಲಿ ಧ್ರುವ ಸರ್ಜಾ ಕಂಡಿದ್ದಾರೆ. ಶಿವಾರ್ಜುನ್ ನಿರ್ದೇಶನ ಹಾಗೂ ಉದಯ ಮೆಹ್ತಾ ನಿರ್ಮಾಣ ಈ ಚಿತ್ರಕ್ಕಿದೆ.

Exit mobile version