Site icon Vistara News

Kannada New Movie: ಮನೋಜ್ ಪಿ ನಡಲುಮನೆ ನಿರ್ದೇಶನದ ‘ಮೇರಿ’ಟ್ರೈಲರ್‌ ಔಟ್‌

Kannada New Movie Meri Trailer Out

ಬೆಂಗಳೂರು: ‘ಆನ’ ಸಿನಿಮಾ ಮೂಲಕ ಗುರುತಿಸಿಕೊಂಡಿರುವ ಮನೋಜ್ ಪಿ ನಡಲುಮನೆ ನಿರ್ದೇಶನದ ಎರಡನೇ ಸಿನಿಮಾ ‘ಮೇರಿ’ (Kannada New Movie) ಟ್ರೈಲರ್‌ ಬಿಡುಗಡೆಯಾಗಿದೆ. ‘ಮೇರಿ’ ಪಶ್ಚಿಮ ಘಟ್ಟದ ಗ್ರಾಮಾಂತರ ಠಾಣೆಯಲ್ಲಿ ನಡೆಯುವ ಕಥೆಯನ್ನು ಒಳಗೊಂಡಿದೆ. ಫೆಬ್ರವರಿ 24ರಂದು ಸಿನಿಮಾ ಬಿಡುಗಡೆಯಾಗುತ್ತಿದೆ.

ವಿಕಾಶ್ ಉತ್ತಯ್ಯ, ಅನೂಷ ಕೃಷ್ಣ, ಚೇತನ್ ವಿಕ್ಕಿ, ತೇಜಸ್ವಿನಿ ಶರ್ಮಾ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಸಂದೀಪ್ ನೀನಾಸಂ, ಭಾರ್ಗವ್ ವೆಂಕಟೇಶ್, ಸುಶಾಂತ್, ದೀಪಕ್ ಗೌಡ ಒಳಗೊಂಡ ಕಲಾವಿದರ ಬಳಗ ಚಿತ್ರದಲ್ಲಿದೆ. ನಿರ್ದೇಶಕ ಮನೋಜ್ ಪಿ ನಡುಲುಮನೆ ಮಾತನಾಡಿ “‘ಮೇರಿ’ ಒಂದು ತಂಡದ ಪರಿಶ್ರಮ. ಥ್ರಿಲ್ಲರ್ ಸಬ್ಜೆಕ್ ಸಿನಿಮಾ. ಪೊಲೀಸ್ ಠಾಣೆಯಲ್ಲಿ ನಡೆಯುವ ಘಟನೆ ಚಿತ್ರದಲ್ಲಿದೆ. ಚಿಕ್ಕಮಗಳೂರಿನ ಜಿಲ್ಲೆಯ ಕಾಡು ಮಧ್ಯದಲ್ಲಿರುವ ಒಂದು ಗ್ರಾಮದ ಪೊಲೀಸ್ ಠಾಣೆಗೆ ಹೊಸದಾಗಿ ಅಪಾಯಿಂಟ್ ಆದ ಎಸ್ಐ ಮುಂದೆ ಒಂದು ಹುಡುಗಿ ತನ್ನ ಮೇಲೆ ರೇಪ್ ಆಗಿದೆ ಎಂದು ಹೇಳಿದಾಗ ಆ ದಿನ ಏನೇನು ಘಟನೆ ನಡೆಯುತ್ತದೆ ಎನ್ನುವುದೇ ಈ ಸಿನಿಮಾದ ಎಳೆʼʼಎಂದರು.

ಇದನ್ನೂ ಓದಿ: Kannada New Movie: ಫೆಬ್ರವರಿ 24ಕ್ಕೆ ಶ್ರೀ ಸಂಭ್ರಮ ನಿರ್ದೇಶನದ ‘ಸಂಭ್ರಮ’ ಸಿನಿಮಾ ತೆರೆಗೆ

ಇದನ್ನೂ ಓದಿ: Kannada New Movie: ಯುವನಟ ಅನೂಪ್ ರೇವಣ್ಣ ಜನುಮದಿನದಂದು ‘ಹೈಡ್ ಆ್ಯಂಡ್ ಸೀಕ್’ ಪೋಸ್ಟರ್ ಲಾಂಚ್

ನಟ ವಿಕಾಶ್ ಉತ್ತಯ್ಯ ಲೀಡ್ ಆಗಿ ಮಿಂಚಿದ್ದಾರೆ. ವಿನೋದ್ ಭಾರತಿ ಛಾಯಾಗ್ರಹಣ, ಸೂರಜ್ ಜೋಯ್ಸ್ ಸಂಗೀತ ನಿರ್ದೇಶನ, ನಾಗೇಂದ್ರ ಉಜ್ಜನಿ ಸಂಕಲನ ಚಿತ್ರಕ್ಕಿದೆ. ಡಿಕೆಎಸ್ ಸ್ಟುಡಿಯೋಸ್ ಬ್ಯಾನರ್ ನಡಿ ರನ್ವಿತ್ ಶಿವಕುಮಾರ್, ಹರೀಶ್ ಜಿ.ಬಿ ಮೇರಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

Exit mobile version