ಬೆಂಗಳೂರು : ನಟಿ ನೀನಾ ಗುಪ್ತಾ ಅವರ ಮಗಳು ಮಸಾಬಾ ಗುಪ್ತಾ (Masaba Gupta) ಮತ್ತು ಸತ್ಯದೀಪ್ ಸರಳವಾಗಿ ವಿವಾಹವಾಗಿದ್ದಾರೆ. ಮಸಾಬಾ ಅವರದ್ದು ಇದು ಎರಡನೇ ಮದುವೆ. ಪತಿ ಸತ್ಯದೀಪ್ ಮಿಶ್ರಾಗೂ ಕೂಡ ಇದು ಎರಡನೇ ಮದುವೆ.
ಸರಳ ಮದುವೆಯಾಗಿರುವುದರ ಕುರಿತು ನಟಿ ಹೇಳಿದ್ದೇನು?
ಮಸಾಬ ಗುಪ್ತಾ ಮತ್ತು ಸತ್ಯದೀಪ್ ಅವರು ಸರಳವಾಗಿ ವಿವಾಹವಾಗಿದ್ದಾರೆ. ನಟಿ ಈ ಬಗ್ಗೆ ಮಾತನಾಡಿ “ಇಂದು ತುಂಬ ಸ್ಮರಣೀಯ ದಿನ. ಈ ದಿನ ನಮ್ಮ ಆತ್ಮೀಯರೊಟ್ಟಿಗೆ ಸಂಭ್ರಮಿಸುವ ಕ್ಷಣವಾಗಿದೆ. ನಾವು ನಮ್ಮ ಕುಟುಂಬ ಮತ್ತು ಪ್ರೀತಿಪಾತ್ರರ ಉಪಸ್ಥಿತಿಯಲ್ಲಿರಲು ಬಯಸುತ್ತೇವೆ. ಇದು ನಿಜವಾಗಿಯೂ ನಮ್ಮಿಬ್ಬರ ಖಾಸಗಿ ಕ್ಷಣವಾಗಿದೆ. ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ನಾವು ಅದನ್ನು ಆನಂದಿಸಲು ಬಯಸುತ್ತೇವೆ. ಕೆಲವೊಮ್ಮೆ ಕೆಲವರು ಮಾಡುವ ತಪ್ಪು ಏನೆಂದರೆ ನೀವು ಜನರನ್ನು ಮೆಚ್ಚಿಸಲು, ತೋರಿಕೆಗೆ ಅದ್ಧೂರಿಯಾಗಿ ಮದುವೆ ಆಗಬೇಕಿಲ್ಲ. ನಿಮಗೆ ಅದರ ಮೌಲ್ಯ ತಿಳಿದಿದ್ದರೆ ಸಾಕು. ನಮಗೆ ಅದ್ಯಾವುದೂ ಬೇಕಾಗಿಲ್ಲ. ಆದ್ದರಿಂದ ಸರಳವಾಗಿ ಮದುವೆಯಾದೆವುʼʼಎಂದು ದಂಪತಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Star Dress Shopping : ಮಾರಾಟಕ್ಕಿವೆ ಬಾಲಿವುಡ್ ನಟಿ ಕತ್ರೀನಾ ಕೈಫ್ ಡಿಸೈನರ್‌ವೇರ್ಸ್
ಮದುವೆಗೆ ಹಾಜರಾದ ತಂದೆ ವಿವಿಯನ್ ರಿಚರ್ಡ್
ತನ್ನ ಜೀವನದಲ್ಲಿ ಇದೇ ಮೊದಲ ಬಾರಿಗೆ ತನ್ನ ಮಲತಂದೆ, ತನ್ನ ತಂದೆ, ತಾಯಿ, ಅತ್ತೆ, ಮಾವ ಎಲ್ಲರೂ ಒಟ್ಟಿಗೆ ಇದ್ದು ನಮಗೆ ಆಶೀವರ್ದಿಸಿದ್ದಾರೆ. ಇದು ನನ್ನ ಜೀವನದ ಅಮೂಲ್ಯ ಕ್ಷಣವಾಗಿದೆ ಎಂದು ಹೇಳಿದ್ದಾರೆ.
ಸ್ಪೆಷಲ್ ಆಗಿತ್ತು ವಧು, ವರರ ಔಟ್‌ಫಿಟ್
ಸೆಲೆಬ್ರಿಟಿ ಡಿಸೈನರ್ ಮಸಾಬಾ ಗುಪ್ತಾ ತಮ್ಮ ಲೆಹೆಂಗಾವನ್ನು ಅತ್ಯಂತ ಪ್ರೀತಿಯಿಂದಲೇ ಸಿದ್ಧಪಡಿಸಿದ್ದಾರೆ. ಪಾನ್ ಪತ್ತಿ ಥೀಮ್ ಲೆಹೆಂಗಾ ಇದಾಗಿದ್ದು, ಎರಡು ದುಪಟ್ಟಾ ಇದಕ್ಕೆ ಜತೆ ಮಾಡಲಾಗಿದೆ. ವಾಲ್ ಪ್ರಿಂಟ್ ಇರುವ ಲೈಮ್ ಗ್ರೀನ್ ಹಾಗೂ ರಾಣಿ ಪಿಂಕ್‌ನ ಸಿಕ್ವಿನ್ಸ್ ವಿನ್ಯಾಸ ಹೊಂದಿರುವುದು ಜತೆಯಾಗಿದೆ. ಕಸ್ಟಮೈಸ್ಡ್ ಬಾರ್ಡರ್ ಟ್ರೆಡಿಷನಲ್ ಡಿಸೈನ್‌ಗೆ ಸಾಕ್ಷಿಯಾಗಿದೆ. ಇನ್ನು ಈ ಲೆಹೆಂಗಾದೊಂದಿಗೆ ಧರಿಸಿರುವ ಹೇರ್ ಆಕ್ಸೆಸರೀಸ್‌ನಲ್ಲಿ ಸೂರ್ಯ ಹಾಗೂ ಚಂದ್ರನ ಕ್ಲಿಪ್‌ಗಳನ್ನು ಧರಿಸಲಾಗಿದೆ. ಇದೇ ವಿನ್ಯಾಸದ ಕಿವಿಯ ಹ್ಯಾಂಗಿಂಗ್ಸ್ ಹಾಗೂ ಲೆಯರ್ ನೆಕ್ಲೇಸ್‌ಗಳು ಮತ್ತಷ್ಟು ಆಕರ್ಷಣೀಯವಾಗಿವೆ. ಇದು ಎನರ್ಜಿಯ ಸಂಕೇತ ಎಂದು ಮಸಾಬಾ ಹೇಳಿಕೊಂಡಿದ್ದಾರೆ.
ಸದಾ ನ್ಯಾಚುರಲ್ ಆಗಿರುವಂತದ್ದನ್ನೇ ಮಸಾಬಾ ಪ್ರಿಫರ್ ಮಾಡುತ್ತಾರೆ. ಇನ್ನು ಮಸಾಬಾ ಜತೆಗೆ ನಟ, ಪತಿ ಸತ್ಯದೀಪ್ ಡಿಸೈನರ್‌ವೇರ್ ಕೂಡ ಪತ್ನಿ ಡಿಸೈನ್ ಮಾಡಿದ್ದನ್ನೇ ಧರಿಸಿದ್ದಾರೆ. ಇಬ್ಬರ ಡಿಸೈನರ್‌ವೇರ್‌ಗಳು ಪರ್ಫೆಕ್ಟ್ ಮ್ಯಾಚ್ ಆಗುವಂತಿದೆ.
ಇದನ್ನೂ ಓದಿ: Bollywood : ಬಾಲಿವುಡ್ ನಟಿ ರೇಖಾ ತಂದೆ-ತಾಯಿ ವಿವಾಹವನ್ನೇ ಆಗಿರಲಿಲ್ಲ!
ಕಲರ್ ಕೋಡ್ ಬಗ್ಗೆ ಮಾಹಿತಿ ಹಂಚಿಕೊಂಡ ಮಸಾಬಾ
ಮಸಾಬಾ ಅವರು ಹೌಸ್ ಆಫ್ ಮಸಾಬಾ ಕಲೆಕ್ಷನ್‌ಗಳಿಂದಲೇ ಬಟ್ಟೆಗಳನ್ನು ಸೆಲೆಕ್ಟ್ ಮಾಡಿದ್ದು, ಹಳದಿ ಬಣ್ಣ ಹೈಲೆಟ್ ಆಗುವಂತೆ ಔಟ್ ಫಿಟ್‌ಗಳನ್ನು ಮಾಡಿದ್ದಾರೆ. ದಂಪತಿ ಗುಲಾಬಿ ಬಣ್ಣದ ಉಡುಪನ್ನು ಧರಿಸಿದ್ದಾರೆ. ಪ್ರತಿಯೊಬ್ಬರ ಬಟ್ಟೆಗಳನ್ನು ಮಸಾಬಾ ವಿವರಿಸಿದ್ದರು. ʻʻಸತ್ಯದೀಪ್ ಬರ್ಫಿ ಪಿಂಕ್ ವಾಲ್‌ಫ್ಲವರ್ ಬಣ್ಣದ ಕುರ್ತಾ-ಪೈಜಾಮಾವನ್ನು ಧರಿಸಿದ್ದಾರೆ. ಪುರುಷರ ಉಡುಗೆಗೆ ಬಂದಾಗ, ಸರಳತೆಯಿಂದ ಕೂಡಿದೆ. ತಾಯಿ (ನೀನಾ ಗುಪ್ತಾ) ಸುಂದರವಾದ ಪುದೀನ ಹಸಿರು ಕ್ಯಾಂಡಿ ಮುದ್ರಿತ ಆರ್ಗನ್ಜಾ ಸೀರೆಯನ್ನು, ಕಸೂತಿ ಬಾರ್ಡರ್ ಒಳಗೊಂಡಿದೆ. ಪಲ್ಲುನಲ್ಲಿ ಗೋಟಾ ವರ್ಕ್ ಅನ್ನು ಧರಿಸಿದ್ದಾರೆ ಎಂದರು. ನನ್ನ ತಂದೆ ಬೀಜ್-ಹಳದಿ ಕುರ್ತಾ ಧರಿಸಿದ್ದಾರೆ. ಉಳಿದವರು ಸೀರೆಗಳು ಮತ್ತು ಕಫ್ತಾನ್‌ಗಳನ್ನು ಧರಿಸಿದ್ದಾರೆʼʼಎಂದು ಮಾಹಿತಿ ಹಂಚಿಕೊಂಡರು.