ಬೆಂಗಳೂರು: ಬಾಲಿವುಡ್ ನಟಿ ನೀನಾ ಗುಪ್ತಾ ಅವರ ಪುತ್ರಿ, ನಟಿ, ಫ್ಯಾಷನ್ ಡಿಸೈನರ್ ಮಸಾಬಾ ಗುಪ್ತಾ (Masaba Gupta) ಅವರು ಬಹುಕಾಲದ ಗೆಳೆಯ, ನಟ ಸತ್ಯದೀಪ್ ಮಿಶ್ರಾ (SATYADEEP MISRA) ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸೋಷಿಯಲ್ ಮೀಡಿಯಾ ಮೂಲಕ ಸಂತಸದ ಸುದ್ದಿ ಹಂಚಿಕೊಂಡಿದ್ದಾರೆ. ಮದುವೆಯ ಕೆಲವು ಸುಂದರವಾದ ಚಿತ್ರಗಳನ್ನು ಸಹ ಪೋಸ್ಟ್ ಮಾಡಿದ್ದಾರೆ.
ಮಸಾಬಾ ಗುಪ್ತಾ ಯಾರು?
ಮುಂಬಯಿಯ ಹೌಸ್ ಆಫ್ ಮಸಾಬಾ ಬ್ರ್ಯಾಂಡ್ ಖ್ಯಾತ ಡಿಸೈನರ್ ಮಸಾಬಾ ಗುಪ್ತಾ ಬಾಲಿವುಡ್ ನಟ-ನಟಿಯರಿಗೆ ಡ್ರೆಸ್‌ಗಳನ್ನು ಡಿಸೈನ್ ಮಾಡುವುದು ಮಾತ್ರವಲ್ಲ, ಕೋಟ್ಯಧಿಪತಿಗಳ ವೆಡ್ಡಿಂಗ್ ಕಾಸ್ಟ್ಯೂಮ್‌ಗಳನ್ನು ಪ್ಯಾಕೇಜ್ ರೂಪದಲ್ಲಿ ಸಿದ್ಧಪಡಿಸುವಲ್ಲಿ ನಿಸ್ಸಿಮರು. ಹಿರಿಯ ನಟಿ ನೀನಾ ಗುಪ್ತಾ ಅವರ ಮಗಳಾದ ಮಸಾಬಾ, ಈಗಾಗಲೇ ಖಾಸಗಿ ವಾಹಿನಿಯಲ್ಲಿ ಅವರ ಲೈಫ್‌ಸ್ಟೈಲ್ ಕುರಿತಂತೆ ಪ್ರಸಾರವಾದ ವೆಬ್‌ಸಿರೀಸ್‌ನಲ್ಲೂ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಈಗಾಗಲೇ ಮೊದಲೊಂದು ಮದುವೆಯಾಗಿ ವಿಚ್ಛೇದನ ಪಡೆದಿದ್ದ ಮಸಾಬಾ ಅವರದ್ದು ಎರಡನೇ ಮದುವೆ. ಪತಿ ಸತ್ಯದೀಪ್ ಮಿಶ್ರಾಗೂ ಕೂಡ ಇದು ಎರಡನೇ ಮದುವೆ. ಈ ಮೊದಲು ಅವರು ನಟಿ ಅದಿತಿ ಹೈದರ್ ಅವರನ್ನು ಮದುವೆಯಾಗಿ ಡಿವೋರ್ಸ್ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: Vasishta Simha and Haripriya: ವೈವಾಹಿಕ ಜೀವನಕ್ಕೆ ಕಾಲಿಟ್ಟ ಸಿಂಹಪ್ರಿಯಾ
ಮಾಧ್ಯಮದವೊಂದಕ್ಕೆ ಮಸಾಬಾ ಗುಪ್ತಾ ಮದುವೆ ಕುರಿತು ಮಾತನಾಡಿದ್ದು ʻʻನಾವು ಸರಳವಾಗಿ ಕಾನೂನುಬದ್ಧವಾಗಿ ವಿವಾಹವಾಗಿದ್ದೇವೆ. ಕುಟುಂಬದ ಆತ್ಮೀಯರಿಗಷ್ಟೇ ಆಹ್ವಾನ ನೀಡಲಾಗಿತ್ತು. ಸಿಂಪಲ್ ಆಗಿಯೇ ವಿವಾಹವಾಗಬೇಕೆಂಬ ಆಸೆಯಾಗಿತ್ತು. ಇಂದು ಕನಸು ನನಸಾಗಿದೆ. ಕೇವಲ 80-85 ಆತ್ಮೀಯರಿಗಷ್ಟೇ ಪಾರ್ಟಿ ಇಟ್ಟುಕೊಂಡಿದ್ದೇವೆʼʼಎಂದು ಮಾಹಿತಿ ಹಂಚಿಕೊಂಡರು.
ಇದನ್ನೂ ಓದಿ: Sagar Biligowda: ವೈವಾಹಿಕ ಜೀವನಕ್ಕೆ ಕಾಲಿಟ್ಟ ʻಸತ್ಯʼ ಧಾರಾವಾಹಿಯ ಅಮುಲ್ ಬೇಬಿ ಕಾರ್ತಿಕ್
ಸಿನಿಮಾ ಸೆಟ್‌ನಲ್ಲಿ ಮೊದಲ ಭೇಟಿ
ಸತ್ಯದೀಪ್ ಮಿಶ್ರಾ ಅವರೊಂದಿಗಿನ ಸಂಬಂಧದ ಕುರಿತು ಮಾತನಾಡಿದ ನಟಿʻʻ ನಾನು ಅವರನ್ನು ಮಸಾಬಾ ಚಿತ್ರದ ಸೆಟ್‌ನಲ್ಲಿ ಮೊದಲು ಭೇಟಿಯಾದೆ. ಅವರು ಸೀಸನ್ 1ರಲ್ಲಿ ನನ್ನ ಮಾಜಿ ಗಂಡನ ಪಾತ್ರವನ್ನು ನಿರ್ವಹಿಸುತ್ತಿದ್ದರು. ನಮ್ಮ ಕಂಫರ್ಟ್ ಜೋನ್‌ನಲ್ಲಿ ಇಬ್ಬರಲ್ಲಿಯೂ ಆತ್ಮೀಯತೆ ಹೆಚ್ಚಾಯ್ತು. ನಾವಿಬ್ಬರೂ ಸರಳವಾದ ವಿಷಯಗಳನ್ನು ಇಷ್ಟಪಡುತ್ತೇವೆʼʼಎಂದರು.