ಬೆಂಗಳೂರು: ತೆಲುಗು ನಟಿ ಮೀನಾ ಸಾಗರ್ (Meena Sagar) ಪತಿ ನಿಧನದ ನಂತರ ಸಿನಿಮಾದಲ್ಲಿ ಅಷ್ಟಾಗಿ ಕಾಣಿಸಿಕೊಂಡಿಲ್ಲ. ಇದರಿಂದಾಗಿ ಮೀನಾ ಕ್ರಮೇಣ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಕೆಲವು ದಿನಗಳಿಂದ ಅವರ ಎರಡನೇ ಮದುವೆಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಗಾಸಿಪ್‌ಗಳು ಹರಿದಾಡುತ್ತಿವೆ. ಧನುಷ್ ಜತೆ ನಟಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ ಎಂಬ ವದಂತಿಗಳ ಬಗ್ಗೆ ಸಾಕಷ್ಟು ಕೋಪಗೊಂಡಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ಈ ವಿಷಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಮೀನಾ ಸಂದರ್ಶನದಲ್ಲಿ ಮಾತನಾಡಿ ʻʻವಿದ್ಯಾಸಾಗರ್ ನಿಧನದಿಂದ ಇನ್ನೂ ಹೊರಬಂದಿಲ್ಲ. ಸೋಷಿಯಲ್ ಮೀಡಿಯಾ ಬಳಕೆದಾರರು ಎರಡನೇ ಮದುವೆಯ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡಿದ್ದಾರೆ. ಮಗಳ ಭವಿಷ್ಯ ನನ್ನ ಆದ್ಯತೆಯಾಗಿದೆʼʼ ಎಂದು ಅವರು ಹೇಳಿದರು.
ಮೀನಾ ಅವರ ಈ ಸ್ಪಷ್ಟೀಕರಣ ಕೊನೆಗೂ ಎರಡನೇ ಮದುವೆಯ ವದಂತಿಗಳಿಗೆ ಫುಲ್‌ಸ್ಟಾಪ್ ಇಟ್ಟಿದ್ದಾರೆ. ಪತಿಯ ಸಾವಿನ ನಂತರ ನಟಿಯ ಮನೆಯವರು ಮದುವೆಯಾಗುವಂತೆ ಮೀನಾ ಅವರಿಗೆ ಒತ್ತಡ ಹೇರುತ್ತಿದ್ದಾರೆ. ಆದರೆ ಮಗಳ ಭವಿಷ್ಯಕ್ಕಾಗಿ ನಟಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ವೈರಲ್ ಆಗಿತ್ತು.
ಇದನ್ನೂ ಓದಿ: Actor Dhanush: ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದಾರಾ ಧನುಷ್- ಬಹುಭಾಷಾ ನಟಿ ಮೀನಾ?
ಬೈಲ್ವಾನ್ ರಂಗನಾಥನ್ ಹೇಳಿದ್ದೇನು?
ಮೀನಾ ಹಾಗೂ ಧನುಷ್ ಇಬ್ಬರು ಒಂಟಿ ಜೀವನ ನಡೆಸುತ್ತಿದ್ದಾರೆ. ಮುಂಬರುವ ಜುಲೈನಲ್ಲಿ ಇಬ್ಬರೂ ಮದುವೆಯಾಗುತ್ತಾರೆ. ಅದು ವರ್ಕೌಟ್ ಆಗಲಿಲ್ಲ ಅಂದ್ರೆ ಇಬ್ಬರೂ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿರಲಿದ್ದಾರೆ ಎಂದು ಹೇಳಿಕೊಂಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರ ಚರ್ಚೆಗೆ ಗ್ರಾಸವಾಗಿತ್ತು.
ಜೆಎಂ ಸರವಣನ್ ನಿರ್ದೇಶನದ ರೌಡಿ ಬೇಬಿ ಚಿತ್ರದಲ್ಲಿ ಮೀನಾ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಅಭಿಷೇಕ್ ಫಿಲ್ಮ್ಸ್ ನಿರ್ಮಿಸಿರುವ ರೌಡಿ ಬೇಬಿ ಪ್ರಸ್ತುತ ನಿರ್ಮಾಣ ಹಂತದಲ್ಲಿದೆ. ಆದರೆ ಯಾವುದೇ ಮಾಹಿತಿ ಬಹಿರಂಗಗೊಂಡಿಲ್ಲ.