Site icon Vistara News

Meenakshi Seshadri | ನಿರ್ದೇಶಕ ರಾಜ್‌ಕುಮಾರ್ ಸಂತೋಷಿ ಸಂಬಂಧದ ಕುರಿತು ನಟಿ ಮೀನಾಕ್ಷಿ ಶೇಷಾದ್ರಿ ಹೇಳಿದ್ದೇನು?

Meenakshi Seshadri

ಬೆಂಗಳೂರು: 1980ರ ದಶಕದ ಅತ್ಯಂತ ಭರವಸೆಯ ನಾಯಕಿಯರಲ್ಲಿ ಒಬ್ಬರಾದ ಮೀನಾಕ್ಷಿ ಶೇಷಾದ್ರಿ (Meenakshi Seshadri) ಅವರು ಬಾಲಿವುಡ್‌ಗೆ ಮತ್ತೆ ಬರಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಇತ್ತೀಚೆಗೆ ಜಾಕಿ ಶ್ರಾಫ್ ಮತ್ತು ಪೂನಂ ಧಿಲ್ಲೋನ್ ಅವರ ಜತೆ ರಿಯುನಿಯನ್‌ ಪಾರ್ಟಿಯಲ್ಲಿ ನಟಿ ಕಾಣಿಸಿಕೊಂಡಿದ್ದರು. ʻದಾಮಿನಿʼ ಮತ್ತು ʻಘಾತಕ್‌ʼ ಮುಂತಾದ ಚಿತ್ರಗಳ ಮೂಲಕ ತಮ್ಮ ನಟನಾ ಕೌಶಲವನ್ನು ಸಾಬೀತುಪಡಿಸಿದ್ದರವರು. ಇದೀಗ ಅವರು ʻನಾನು ಮತ್ತು ಸಂತೋಷಿ ಬೇರ್ಪಟ್ಟ ನಂತರ ಮದುವೆಯಾಗಿ ಮತ್ತು ಗೌರವಾನ್ವಿತ ಜೀವನ ನಡೆಸುತ್ತಿದ್ದೇವೆʼʼ ಎಂದು ಹೇಳಿಕೊಂಡಿದ್ದಾರೆ.

ಮೀನಾಕ್ಷಿ ಅವರು ಗಾಯಕ ಕುಮಾರ್ ಸಾನು ಮತ್ತು ಚಲನಚಿತ್ರ ನಿರ್ದೇಶಕ, ನಿರ್ಮಾಪಕ ರಾಜ್‌ಕುಮಾರ್ ಸಂತೋಷಿ ಅವರೊಂದಿಗೆ ಸಂಬಂಧದಲ್ಲಿದ್ದರು ಎಂದು ಈ ಹಿಂದೆ ಸುದ್ದಿಯಾಗಿತ್ತು. 1990ರಲ್ಲಿ ದಾಮಿನಿ ಚಿತ್ರೀಕರಣದ ವೇಳೆ ರಾಜ್‌ಕುಮಾರ್ ಸಂತೋಷಿ ಮತ್ತು ಮೀನಾಕ್ಷಿ ಅವರು ಮದುವೆಯಾಗುತ್ತಿದ್ದಾರೆ ಎಂಬ ವದಂತಿಗಳಿದ್ದವು. ಇದೀಗ ಸಂದರ್ಶನವೊಂದರಲ್ಲಿ ನಟಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ | Bipasha Basu | ಹೆಣ್ಣು ಮಗುವಿಗೆ ಜನ್ಮ ನೀಡಿದ ಬಾಲಿವುಡ್‌ ನಟಿ ಬಿಪಾಶಾ ಬಸು

ʻʻಈ ಹಿಂದೆ ನಾನು ಮತ್ತು ರಾಜ್‌ಕುಮಾರ್ ಸಂತೋಷಿ ಈ ವಿಚಾರದ ಬಗ್ಗೆ ಸಾರ್ವಜನಿಕವಾಗಿ ಮಾತನಾಡಬಾರದು ಎಂದು ನಿರ್ಧಾರ ಮಾಡಿದ್ದೇವು. ಈಗ ನಾವು ನಮ್ಮದೇ ಆದ ಗೌರವಯುತವಾದ ಜೀವನವನ್ನು ನಡೆಸುತ್ತಿದ್ದೇವೆ. ಈ ಎಲ್ಲ ವದಂತಿಗಳನ್ನು ಮರೆತು ಸಿನಿಮಾ ಬಗ್ಗೆ ಆಸಕ್ತಿ ತೋರುತ್ತಿದ್ದೇನೆʼʼ ಎಂದು ಹೇಳಿಕೆ ನೀಡಿದ್ದಾರೆ. 1995ರಲ್ಲಿ ಅಮೆರಿಕ ಮೂಲದ ಉದ್ಯಮಿ ಹರೀಶ್ ಅವರನ್ನು ಮದುವೆ ಆಗಿದ್ದಾರೆ ಮೀನಾಕ್ಷಿ ಶೇಷಾದ್ರಿ.

ಇದನ್ನೂ ಓದಿ | Sara Ali Khan | ಬಾಲಿವುಡ್‌ ನಟಿ ಸಾರಾ ಜತೆ ಡೇಟಿಂಗ್ ; ಶುಬ್ಮನ್‌ ಗಿಲ್ ಕೊಟ್ಟ ಉತ್ತರ ಹೀಗಿದೆ

Exit mobile version