ಬೆಂಗಳೂರು: ಸುಮಾರು ಒಂದು ದಶಕದಿಂದ ತಮಿಳು ಮತ್ತು ತೆಲುಗು ಚಿತ್ರರಂಗದಿಂದ ನಾಪತ್ತೆಯಾಗಿದ್ದ ಮೀರಾ ಜಾಸ್ಮಿನ್ (Meera Jasmine) ‘ವಿಮಾನಂ’ ಎಂಬ ದ್ವಿಭಾಷಾ ಚಿತ್ರದೊಂದಿಗೆ ಕಮ್‌ಬ್ಯಾಕ್ ಆಗಿದ್ದಾರೆ. ʻಮೌರ್ಯʼ, ʻಅರಸುʼ ಮೂಲಕ ಕನ್ನಡಿಗರ ಮನಸ್ಸು ಗೆದ್ದಿದ್ದ ನಟಿ ಮೀರಾ ಜಾಸ್ಮಿನ್ ಅವರ ಜನುಮದಿನ(ಫೆ.15). ಈ ವಿಶೇಷ ದಿನದಂದು ಜೀ ಸ್ಟುಡಿಯೋಸ್ ಟ್ವೀಟ್ ಮೂಲಕ ಚಿತ್ರದ ಹೆಸರನ್ನು ಅನಾವರಣಗೊಳಿಸಿದೆ.
2004ರ ‘ಅಮ್ಮಾಯಿ ಬಾಗುಂಡಿ’ ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟರು ಮೀರಾ ಜಾಸ್ಮಿನ್. 2013 ರ ರೋಮ್ಯಾನ್ಸ್ ಡ್ರಾಮಾ ಚಿತ್ರ ‘ಗುಡುಂಬಾ ಶಂಕರ್’ ನಲ್ಲಿ ಪವರ್‌ಸ್ಟಾರ್ ಪವನ್ ಕಲ್ಯಾಣ್ ಅವರೊಂದಿಗೆ ಅವರ ಹಾಡುಗಳು ಇಂದಿಗೂ ಟಾಲಿವುಡ್‌ನಲ್ಲಿ ಎವರ್‌ಗ್ರೀನ್ ಹಿಟ್ ಆಗಿವೆ. ಅವರ ಕೊನೆಯ ತೆಲುಗು ಚಿತ್ರ ‘ಮೋಕ್ಷ’ ಮತ್ತು ನಂತರ ಅವರು 2014 ರಲ್ಲಿ ಮದುವೆಯಾಗಿ ಟಾಲಿವುಡ್ ತೊರೆದರು. ಬಳಿಕ ಮಲಯಾಳಂ ಮತ್ತು ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡರು.
ಇದನ್ನೂ ಓದಿ: Sidhika Sharma: ಯಾರು ಈ ಟಾಲಿವುಡ್ ತಾರೆ, ಸಿದ್ಧಿಕಾ ಶರ್ಮಾ?
ಇದನ್ನೂ ಓದಿ: Kabza Film: ಆಂಧ್ರ-ತೆಲಂಗಾಣ ವಿತರಣಾ ಹಕ್ಕು ಮಾರಾಟ: ಟಾಲಿವುಡ್ ನಟ ನಿತಿನ್ ಸಾಥ್
ಇದೀಗ ‘ವಿಮಾನಂ’ ಮೂಲಕ ಟಾಲಿವುಡ್‌ಗೆ ಮತ್ತೆ ಮರಳಿದ್ದಾರೆ. ಈ ಚಿತ್ರಕ್ಕೆ ಕಿರಣ್ ಕೊರ್ರಪಾಟಿ ಮತ್ತು ಜೀ ಸ್ಟುಡಿಯೊಗಳು ಜಂಟಿಯಾಗಿ ಬಂಡವಾಳ ಹೂಡುತ್ತಿವೆ. ತೆಲಗು ಹಾಗೂ ತಮಿಳಿನಲ್ಲಿ ಈ ಸಿನಿಮಾ ತೆರೆಗೆ ಬರುತ್ತಿದೆ. ಚಿತ್ರದಲ್ಲಿ ಸಮುದ್ರಕನಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಮುಂದಿನ ದಿನಗಳಲ್ಲಿ ತಾರಾಗಣ ಮತ್ತು ತಂಡದ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಸುವುದಾಗಿ ಮಾಹಿತಿ ಹಂಚಿಕೊಂಡಿದೆ ಚಿತ್ರತಂಡ. ಜಾಸ್ಮಿನ್ ಅವರು ತಮಿಳಿನಲ್ಲಿ ಅಭಿನಿಯಿಸಿದ ʻರನ್ʼ ಮತ್ತು ʻಬಾಲ ʼ2 ಚಿತ್ರಗಳು ಯಶಸ್ಸು ಕಂಡವು. ಅಂದಿನಿಂದ ತೆಲುಗಿನಲ್ಲೂ ನಟಿ ಅಭಿಮಾನಿಗಳನ್ನು ಹೊಂದಿದ್ದಾರೆ.