Site icon Vistara News

Megastar Chiranjeevi: ʻಭೋಲಾ ಶಂಕರ್ʼ ಸಿನಿಮಾದ ಫೋಟೊಗಳು ಲೀಕ್‌; ನಟ ಚಿರಂಜೀವಿ ಹೇಳಿದ್ದೇನು?

Megastar Chiranjeevi 'leaks' pics from Bholaa Shankar

ಬೆಂಗಳೂರು: ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಸದ್ಯ ತಮ್ಮ ಮುಂಬರುವ ಚಿತ್ರ ಭೋಲಾ ಶಂಕರ್ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಹಾಡಿನ ಚಿತ್ರೀಕರಣಕ್ಕಾಗಿ ನಟ ಸ್ವಿಟ್ಜರ್ಲೆಂಡ್‌ಗೆ ಹಾರಿದ್ದಾರೆ. ಮೇ 23ರಂದು, ನಟ ಚಿರಂಜೀವಿ ತಮ್ಮ ಟ್ವೀಟ್‌ನಲ್ಲಿ ಹಾಡಿನ ಚಿತ್ರೀಕರಣದ ಫೋಟೊವೊಂದನ್ನು ಪೋಸ್ಟ್‌ ಮಾಡಿದ್ದಾರೆ. ಹಾಡು ಚೆನ್ನಾಗಿ ಮೂಡಿಬಂದಿದೆ ಎಂದು ನಟ ತಮ್ಮ ಬರೆದುಕೊಂಡಿದ್ದಾರೆ. ಭೋಲಾ ಶಂಕರ್ ತಮಿಳಿನ ವೇದಲಂ ಚಿತ್ರದ ರಿಮೇಕ್ ಆಗಿದೆ.

ಮಾರ್ಚ್ 1ರಂದು, ಮೆಗಾಸ್ಟಾರ್ ಚಿರಂಜೀವಿ ʻಭೋಲಾ ಶಂಕರ್ʼ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನಾವರಣಗೊಳಿಸಿದ್ದರು. ಈ ಸಿನಿಮಾ ಆಗಸ್ಟ್ 11ರಂದು ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ.

ಮೇ 23ರಂದು ತಮ್ಮ ಟ್ವೀಟ್‌ನಲ್ಲಿ ಮೆಗಾಸ್ಟಾರ್ ಚಿರಂಜೀವಿ ಅವರು ಭೋಲಾ ಶಂಕರ್ ಕುರಿತು ಅಪ್‌ಡೇಟ್‌ ಹಂಚಿಕೊಂಡರು. “ಭೋಲಾ ಶಂಕರ್‌ ಸಿನಿಮಾ ಹಾಡಿನ ಚಿತ್ರೀಕರಣವು ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ನಡೆದಿದ್ದು ತುಂಬಾ ಖುಷಿಯಾಗಿದೆ. ಹಾಡು ಎಲ್ಲಾ ಅಭಿಮಾನಿಗಳಿಗೆ ಇಷ್ಟವಾಗುತ್ತದೆ. ನಾವು ಶೀಘ್ರದಲ್ಲೇ ಇನ್ನಷ್ಟು ಅಪ್‌ಡೇಟ್‌ಗಳನ್ನು ಹಂಚಿಕೊಳ್ಳುತ್ತೇವೆ. ಅಲ್ಲಿಯವರೆಗೆ, ಇದು ಲೀಕ್‌ ಫೋಟೊಗಳುʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Rashmika Mandanna: ರಶ್ಮಿಕಾ ಮಂದಣ್ಣ-ನಿತಿನ್‌ ಹೊಸ ಸಿನಿಮಾಗೆ ಮೆಗಾ ಸ್ಟಾರ್​ ಚಿರಂಜೀವಿ ಚಾಲನೆ

ಚಿರಂಜೀವಿ ಟ್ವೀಟ್‌

https://twitter.com/KChiruTweets/status/1660973513342332928?s=20

ಭೋಲಾ ಶಂಕರ್ ಸಿನಿಮಾವನ್ನು ಮೆಹರ್ ರಮೇಶ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ಚಿರಂಜೀವಿ, ತಮನ್ನಾ ಮತ್ತು ಕೀರ್ತಿ ಸುರೇಶ್ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರದ ಕಥೆಯನ್ನು ಶಿವ ಮತ್ತು ಆದಿ ನಾರಾಯಣ ಬರೆದಿದ್ದು, ಮಾಮಿದಲ ತಿರುಪತಿ ಸಂಭಾಷಣೆ ಬರೆದಿದ್ದಾರೆ.

ರಘು ಬಾಬು, ಮುರಳಿ ಶರ್ಮಾ, ರವಿಶಂಕರ್, ವೆನ್ನೆಲ ಕಿಶೋರ್, ಸುಶಾಂತ್ ಮತ್ತು ತುಳಸಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ದಡ್ಲಿ ಛಾಯಾಗ್ರಹಣ, ಮಾರ್ತಾಂಡ್ ಕೆ ವೆಂಕಟೇಶ್ ಸಂಕಲನ ಮತ್ತು ಮಹತಿ ಸ್ವರ ಸಾಗರ್ ಸಂಗೀತ ಚಿತ್ರಕ್ಕಿದೆ.

Exit mobile version