Site icon Vistara News

Megastar Chiranjeevi: ಮೆಗಾ ಸ್ಟಾರ್ ಚಿರಂಜೀವಿಗೆ ಕ್ಯಾನ್ಸರ್‌! ಈ ಸುದ್ದಿ ನಿಜನಾ? ಆತಂಕದಲ್ಲಿ ಅಭಿಮಾನಿಗಳು

Megastar Chiranjeevi

ಬೆಂಗಳೂರು: ಮೆಗಾಸ್ಟಾರ್ ಚಿರಂಜೀವಿ (Megastar Chiranjeevi:) ಅವರಿಗೆ ಕ್ಯಾನ್ಸರ್ ಇದೆ ಎಂಬ ಸುದ್ದಿಗಳು ಹಲವು ದಿನಗಳಿಂದ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಚಿರಂಜಿವಿ ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿತ್ತು. ಚಿರಂಜೀವಿ ಅವರಿಗೆ ಏನಾಗಿತ್ತು ಎಂದು ಬೇಸರಕ್ಕೊಳಗಾಗಿದ್ದರು. ಇದೇ ಸಮಯಕ್ಕೆ ತೆಲುಗು ಮಾಧ್ಯಮಗಳಲ್ಲಿ ಬಂದ ಹಲವು ಸುದ್ದಿಗಳು ಈ ಆತಂಕವನ್ನು ಹೆಚ್ಚಿಸಿದವು ಈ ಬಗ್ಗೆ ಸ್ವತಃ ನಟ ಚಿರಂಜೀವಿ ಅವರು ಸ್ಪಷ್ಟನೆ ನೀಡಿದ್ದಾರೆ(Fact Check).

ಚಿರಂಜೀವಿ ಅವರಿಗೆ ಕ್ಯಾನ್ಸರ್ ಊತ ಉಂಟಾಗಿತ್ತು ಹಾಗೂ ಅವರು ಸಮಯಕ್ಕೆ ಸರಿಯಾದ ಚಿಕಿತ್ಸೆ ಪಡೆದು ಸರಿಪಡಿಸಿಕೊಂಡರು ಎಂದೆಲ್ಲಾ ಸುದ್ದಿಗಳನ್ನು ಮಾಧ್ಯಮಗಳು ಪ್ರಕಟಿಸಿದ್ದವು. ಈ ಕುರಿತಾದ ಸುದ್ದಿಗಳು ಹೆಚ್ಚಾಗಿ ಹರಿದಾಡಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ಚಿರಂಜೀವಿ ಟ್ವೀಟ್ ಮಾಡುವ ಮೂಲಕ ಈ ಎಲ್ಲಾ ಸುದ್ದಿಗಳಿಗೆ ಉತ್ತರ ನೀಡಿದ್ದಾರೆ.

ʻʻಸ್ವಲ್ಪ ಸಮಯದ ಹಿಂದೆ ನಾನು ಕ್ಯಾನ್ಸರ್ ಕೇಂದ್ರವನ್ನು ಉದ್ಘಾಟಿಸುವಾಗ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯತೆಯ ಬಗ್ಗೆ ಮಾತನಾಡಿದ್ದೆ. ನಿಯಮಿತವಾಗಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರೆ ಕ್ಯಾನ್ಸರ್ ಬರದಂತೆ ತಡೆಯಬಹುದು ಎಂದು ಹೇಳಿದ್ದೆ. ಕ್ಯಾನ್ಸರ್ ರಹಿತ ಊತವನ್ನು ಪತ್ತೆ ಹಚ್ಚಿ ತೆಗೆಯಲಾಗಿದೆ ಎಂದು ಹೇಳಿದ್ದೆ. ‘ಮೊದಲು ಪರೀಕ್ಷೆ ಮಾಡದೇ ಇದ್ದಿದ್ದರೆ ಕ್ಯಾನ್ಸರ್ ಆಗಿಬಿಡುತ್ತಿತ್ತು’ ಎಂದು ಮಾತ್ರ ಹೇಳಿದ್ದೆ. ಅದಕ್ಕೇ ಎಲ್ಲರೂ ಮುಂಜಾಗ್ರತೆ ವಹಿಸಿ ವೈದ್ಯಕೀಯ ಪರೀಕ್ಷೆ/ಸ್ಕ್ರೀನಿಂಗ್ ಮಾಡಿಸಿಕೊಳ್ಳಬೇಕು’ ಎಂದು ಮಾತ್ರ ಹೇಳಿದ್ದೆ. ಆದರೆ ಕೆಲವು ಮಾಧ್ಯಮ ಸಂಸ್ಥೆಗಳು ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ‘ನನಗೆ ಕ್ಯಾನ್ಸರ್ ಬಂದಿದೆ’ ಮತ್ತು ‘ಚಿಕಿತ್ಸೆಯಿಂದ ನಾನು ಬದುಕುಳಿದೆ’ ಎಂದು ಸುದ್ದಿ ಪ್ರಕಟಿಸಿದವು. ಅವರೆಲ್ಲರಿಗೂ ಈ ಸ್ಪಷ್ಟನೆ. ಅಂತಹ ಪತ್ರಕರ್ತರಿಗೂ ಒಂದು ಮನವಿ. ವಿಷಯ ಅರ್ಥವಾಗದೆ ಅಸಂಬದ್ಧವಾಗಿ ಬರೆಯಬೇಡಿ. ಈ ಕಾರಣದಿಂದಾಗಿ, ಅನೇಕ ಜನರು ಭಯಭೀತರಾಗಿದ್ದಾರೆ ಮತ್ತು ನೋವಿಗೊಳಗಾಗಿದ್ದಾರೆʼʼಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Chiranjeevi | ಮೆಗಾಸ್ಟಾರ್ ಚಿರಂಜೀವಿ ಅಭಿನಯದ ʻವಾಲ್ತೇರ್‌ ವೀರಯ್ಯʼ ಮೊದಲ ದಿನದ ಕಲೆಕ್ಷನ್‌ ಎಷ್ಟು?

ಚಿರಂಜೀವಿ (Megastar Chiranjeevi) ಸದ್ಯ ತಮ್ಮ ಮುಂಬರುವ ಚಿತ್ರ ಭೋಲಾ ಶಂಕರ್ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಮಾರ್ಚ್ 1ರಂದು, ಮೆಗಾಸ್ಟಾರ್ ಚಿರಂಜೀವಿ ʻಭೋಲಾ ಶಂಕರ್ʼ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನಾವರಣಗೊಳಿಸಿದ್ದರು. ಈ ಸಿನಿಮಾ ಆಗಸ್ಟ್ 11ರಂದು ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ.
ಭೋಲಾ ಶಂಕರ್ ಸಿನಿಮಾವನ್ನು ಮೆಹರ್ ರಮೇಶ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ಚಿರಂಜೀವಿ, ತಮನ್ನಾ ಮತ್ತು ಕೀರ್ತಿ ಸುರೇಶ್ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರದ ಕಥೆಯನ್ನು ಶಿವ ಮತ್ತು ಆದಿ ನಾರಾಯಣ ಬರೆದಿದ್ದು, ಮಾಮಿದಲ ತಿರುಪತಿ ಸಂಭಾಷಣೆ ಬರೆದಿದ್ದಾರೆ.

ರಘು ಬಾಬು, ಮುರಳಿ ಶರ್ಮಾ, ರವಿಶಂಕರ್, ವೆನ್ನೆಲ ಕಿಶೋರ್, ಸುಶಾಂತ್ ಮತ್ತು ತುಳಸಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ದಡ್ಲಿ ಛಾಯಾಗ್ರಹಣ, ಮಾರ್ತಾಂಡ್ ಕೆ ವೆಂಕಟೇಶ್ ಸಂಕಲನ ಮತ್ತು ಮಹತಿ ಸ್ವರ ಸಾಗರ್ ಸಂಗೀತ ಚಿತ್ರಕ್ಕಿದೆ.

Exit mobile version