Site icon Vistara News

Megha Thakur | 21ನೇ ವರ್ಷಕ್ಕೆ ಖ್ಯಾತ ಇಂಡೋ-ಕೆನಡಿಯನ್ ಟಿಕ್‌ಟಾಕ್ ತಾರೆ ಮೇಘಾ ಠಾಕೂರ್‌ ನಿಧನ

Megha Thakur Dies At 21

ಬೆಂಗಳೂರು: ಖ್ಯಾತ ಇಂಡೋ-ಕೆನಡಿಯನ್ ಟಿಕ್‌ಟಾಕ್ ತಾರೆ ಮೇಘಾ ಠಾಕೂರ್‌ (Megha Thakur ) 21ನೇ ವರ್ಷಕ್ಕೆ ಹಠಾತ್‌ ನವೆಂಬರ್ 24ರಂದು ನಿಧನ ಹೊಂದಿದ್ದಾರೆ. ಮೇಘಾ ಠಾಕೂರ್ ಸಾವಿನ ಸುದ್ದಿಯನ್ನು ಆಕೆಯ ಪೋಷಕರು ಖಚಿತಪಡಿಸಿದ್ದಾರೆ.

ಟಿಕ್‌ ಟಾಕ್‌ನಲ್ಲಿ 9.30 ಲಕ್ಷ ಅನುಯಾಯಿಗಳನ್ನು ಮೇಘಾ ಠಾಕೂರ್‌ ಹೊಂದಿದ್ದರು. ಇನ್‌ಸ್ಟಾ ಖಾತೆಯಲ್ಲಿ 1 ಲಕ್ಷಕ್ಕೂ ಅಧಿಕ ಫಾಲೋವರ್ಸ್‌ ಹೊಂದಿದ್ದರು. ನವೆಂಬರ್ 24ರಂದು ನಿಧನರಾಗಿರುವುದಾಗಿ ಆಕೆಯ ಪೋಷಕರು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ | Actor Tabassum | ಫೂಲ್‌ ಖಿಲೆ ಹೈ ಗುಲ್ಶನ್‌ ಗುಲ್ಶನ್‌ ಖ್ಯಾತಿಯ ನಟಿ ತಬಸ್ಸುಮ್‌ ನಿಧನ

ಭಾವನಾತ್ಮಕ ಪೋಸ್ಟ್‌ ಹಂಚಿಕೊಂಡು ʻʻಮೇಘಾ ಠಾಕೂರ್ ಅವರು ನವೆಂಬರ್ 24, 2022 ರಂದು ಮುಂಜಾನೆ ಇದ್ದಕ್ಕಿದ್ದಂತೆ ಮತ್ತು ಅನಿರೀಕ್ಷಿತವಾಗಿ ನಿಧನರಾದರು. ಮಗಳು ಮೇಘಾ ಆತ್ಮವಿಶ್ವಾಸ ಮತ್ತು ಸ್ವತಂತ್ರ ಮನೋಭಾವದ ಯುವತಿಯಾಗಿದ್ದಳು. ಅವಳು ತನ್ನ ಸಾವಿನ ಬಗ್ಗೆ ಎಲ್ಲರಿಗೂ ತಿಳಿಯಬೇಕೆಂದು ಬಯಸಿದ್ದಳು. ಈ ಸಮಯದಲ್ಲಿ, ನಾವು ಮೇಘಾಗೆ ನಿಮ್ಮ ಪ್ರಾರ್ಥನೆ ಮತ್ತು ಸಂತಾಪವನ್ನು ಕೋರುತ್ತೇವೆ. ನಿಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಅವಳ ಮುಂದಿನ ಪ್ರಯಾಣದಲ್ಲಿ ಆಕೆಯೊಂದಿಗೆ ಇರುತ್ತದೆʼʼಎಂದು ಬರೆದುಕೊಂಡಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಕರ್ವಿ ಫಿಗರ್‌ನಿಂದ ಪ್ರಸಿದ್ಧಿ ಪಡೆದಿದ್ದರು. ಟಿಕ್‌ ಟಾಕ್‌ನಲ್ಲಿ ತಮ್ಮ ಅಭಿಮಾನಿಗಳನ್ನು ಸದಾ ಪ್ರೇರೆಪಿಸುತ್ತಿದ್ದರು. ಮೇಘಾ ಅವರು ಮಧ್ಯಪ್ರದೇಶದ ಇಂದೋರ್‌ಗೆ ಇವರು ಸೇರಿದವರಾಗಿದ್ದು, ತನ್ನ ಹೆತ್ತವರೊಂದಿಗೆ ಕೆನಡಾದ ಒಂಟಾರಿಯೊದ ಬ್ರಾಂಪ್ಟನ್‌ನಲ್ಲಿ ವಾಸಿಸುತ್ತಿದ್ದರು.

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಈ ಮಲಯಾಳಂ ಹೀರೊ ಅಭಿನಯ ಮಾಡಿದ್ದು 700ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ!

Exit mobile version