ಬೆಂಗಳೂರು: ನಟಿ ಮೇಘನಾ ರಾಜ್ ಸರ್ಜಾ ಅವರ (Meghana Raj Sarja) ಇನ್ಸ್ಟಾಗ್ರಾಂ ಪೋಸ್ಟ್ವೊಂದು ಕುತೂಹಲ ಮೂಡಿಸಿತ್ತು. ಭಾನುವಾರ (ಫೆ.19) ಅವರು ಯಾವ ಪ್ರಶ್ನೆಗೆ ಉತ್ತರ ನೀಡಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲಿತ್ತು. ಇದೀಗ ನಟಿ ಮೇಘನರಾಜ್ ಮತ್ತೆ ಬೆಳ್ಳಿತೆರೆಗೆ ಎಂಟ್ರಿ ಕೊಡಲಿದ್ದಾರೆ. ʻತತ್ಸಮ ತದ್ಭವʼ ಸಿನಿಮಾ ಮೂಲಕ ತೆರೆಗೆ ಅಪ್ಪಳಿಸಲು ರೆಡಿಯಾಗಿದ್ದಾರೆ ಮೇಘನಾ ರಾಜ್.
ಚಿತ್ರದ ಫಸ್ಟ್ ಲುಕ್ ಹಂಚಿಕೊಂಡಿರುವ ಮೇಘನಾ ರಾಜ್, ಈ ಚಿತ್ರ ಮಲಯಾಳಂ ಹಾಗೂ ಕನ್ನಡದಲ್ಲಿ ಬಿಡುಗಡೆಯಾಗಲಿದೆ. ವಿಶಾಲ್ ಅತ್ರೇಯ ಅವರು ಈ ಸಿನಿಮಾಗೆ ಆಕ್ಷನ್ ಕಟ್ ಹೇಳಲಿದ್ದಾರೆ. ಪನ್ನಗ ಭರಣ, ಸ್ಪೂರ್ತಿ ಅನಿಲ್, ಚೇತನ್ ನಂಜುಡಯ್ಯ ನಿರ್ಮಾಣ ಮಾಡುತ್ತಿದ್ದಾರೆ. ವಾಸುಕಿ ವೈಭವ ಸಂಗೀತ, ಶ್ರೀನಿವಾಸ್ ರಾಮಯ್ಯ ಛಾಯಾಗ್ರಹಣ, ರವಿ ಆರಾಧ್ಯ ಅವರ ಸಂಕಲಲ ಈ ಚಿತ್ರಕ್ಕಿದೆ. ಸಿನಿಮಾ ಫಸ್ಟ್ ಲುಕ್ ನೋಡಿ ಅಭಿಮಾನಿಗಳು ಕಮೆಂಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: Meghana Raj Sarja: ಹತ್ತೂವರೆ ಆಗೋದನ್ನೇ ಕಾಯ್ತಿದ್ದಾರೆ ಮೇಘನಾ ರಾಜ್ ಅಭಿಮಾನಿಗಳು; ಏನು ಉತ್ತರ ನೀಡಬಹುದು ನಟಿ?
ಇಲ್ಲಿದೆ ಮೇಘನಾ ರಾಜ್ ಅಭಿನಯದ ʻತತ್ಸಮ ತದ್ಭವʼ ಫಸ್ಟ್ ಲುಕ್
ಮೇಘನಾ ರಾಜ್ ಪೋಸ್ಟ್‌ನಲ್ಲಿ ಏನಿತ್ತು?
ಶನಿವಾರ(ಫೆ.18) ರಾತ್ರಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ವೊಂದನ್ನು ಹಾಕಿದ್ದರು. ‘2020ರ ಒಂದು ಭಾನುವಾರ ನನ್ನ ಜೀವನದಲ್ಲಿ ಒಂದು ಊಹಿಸಲೂ ಸಾಧ್ಯವಾಗದ, ತೀಕ್ಷ್ಣ ಬದಲಾವಣೆ ಆಯಿತು. ಅಲ್ಲಿಂದ, ಇಲ್ಲಿಯವರೆಗೆ ಅನೇಕರು ಒಂದು ನಿರ್ದಿಷ್ಟವಾದ ಪಶ್ನೆಯನ್ನು ಕೇಳುತ್ತಿದ್ದಾರೆ. ಆ ಪ್ರಶ್ನೆಗೆ ಇಂದು (ಫೆ.19) ಭಾನುವಾರ ನಾನು ಉತ್ತರ ಕೊಡುತ್ತೇನೆ’ ಎಂಬುದು ಪೋಸ್ಟ್ನ ಸಾರಾಂಶವಾಗಿತ್ತು. ಮೇಘನಾ- ಚಿರು ಅಭಿಮಾನಿಗಳು ಸೇರಿ, ಅನೇಕಾನೇಕರು 10.30 ಆಗುವುದನ್ನು ಕಾಯುತ್ತಿದ್ದರು.
ಇದನ್ನೂ ಓದಿ: Actress Meghana Raj | ಕ್ರಿಸ್ಮಸ್ ದಿನ ಫ್ಯಾನ್ಸ್‌ಗೆ ಗುಡ್‌ನ್ಯೂಸ್ ಕೊಟ್ಟ ಮೇಘನಾ ರಾಜ್: ಏನದು?
ಮೇಘನಾ ರಾಜ್ ಬದುಕಲ್ಲಿ 2020 ಕೆಟ್ಟವರ್ಷ. ಅವರು ಐದು ತಿಂಗಳ ಗರ್ಭಿಣಿಯಾಗಿದ್ದಾಗಲೇ, ಪತಿ ಚಿರಂಜೀವಿ ಸರ್ಜಾರನ್ನು ಕಳೆದು ಕೊಂಡರು. 2020ರ ಜೂನ್ 7ರಂದು ಚಿರು ಹೃದಯಾಘಾತದಿಂದ ಮೃತಪಟ್ಟಿದ್ದರು. ಅದಾದ ಬಳಿಕ ಮಗ ರಾಯನ್ ಹುಟ್ಟಿದ. ಸದ್ಯ ಮೇಘನಾ, ತನ್ನ ಪುತ್ರ ರಾಯನ್ ಜತೆ ತಾಯಿ ಮನೆಯಲ್ಲೇ ಇದ್ದಾರೆ. ಮೇಘನಾ ರಾಜ್ ತಮ್ಮದೇ ಆದ ಒಂದು ಹೊಸ ಯೂಟ್ಯೂಬ್ ಚಾನೆಲ್ ಕೂಡ ಶುರು ಮಾಡಿದ್ದಾರೆ.