Site icon Vistara News

Meghana Raj: ಸ್ನೇಹಿತರ ಜತೆ ಎಂಜಾಯ್‌ ಮಾಡಿದ ಮೇಘನಾ ರಾಜ್‌- ರಾಯನ್‌; ಫೋಟೊಗಳು ವೈರಲ್‌!

Meghana Raj ooty trip photos

ನಟಿ ಮೇಘನಾ ರಾಜ್‌ (Meghana Raj) ಅಭಿನಯದ ʼತತ್ಸಮ ತದ್ಭವʼ ಅಪಡೇಟ್‌ಗಳ ಬೆನ್ನಲ್ಲೇ ನಿರ್ಮಾಪಕ ಪನ್ನಗಭರಣ, ಪ್ರಜ್ವಲ್ ದೇವರಾಜ್ ಫ್ಯಾಮಿಲಿ ಸೇರಿದಂತೆ ಊಟಿಯಲ್ಲಿ ಎಂಜಾಯ್ ಮಾಡಿದ್ದಾರೆ.

ಇದೀಗ ಮೇಘನಾ ರಾಜ್ ಸೋಷಿಯಲ್‌ ಮೀಡಿಯಾದಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಮೇಘನಾ- ರಾಯನ್, ಪ್ರಜ್ವಲ್ ದಂಪತಿ, ಪನ್ನಗಭರಣ ದಂಪತಿ, ಊಟಿಯಲ್ಲಿ ಸುಂದರ ತಾಣಗಳಿಗೆ ಭೇಟಿ ನೀಡಿದ್ದಾರೆ.

ನಟಿ ಮೇಘನಾ ರಾಜ್‌ ಸಿನಿರಂಗದಿಂದ ದೂರ ಉಳಿದಿದ್ದರು. ಮತ್ತೆ ʼತತ್ಸಮ ತದ್ಭವʼ ಸಿನಿಮಾ ಮೂಲಕ ಕಮ್‌ಬ್ಯಾಕ್‌ ಆಗಿದ್ದು, ಅವರ ಫ್ಯಾನ್ಸ್‌ ಸಂತಸ ವ್ಯಕ್ತಪಡಿಸಿದ್ದಾರೆ.

ಇದೊಂದು ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ಇದರಲ್ಲಿ ಮೇಘನಾ ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆ. ಅವರಿಗೆ ಜತೆಯಾಗಿ ನಟ ಪ್ರಜ್ವಲ್‌ ದೇವರಾಜ್‌ ನಟಿಸಿದ್ದಾರೆ. ಹಿರಿಯ ನಟಿ ಶ್ರುತಿ ಕೂಡ ಮನೋವೈದ್ಯರ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸಿನಿಮಾಗೆ ಜೀವ ತುಂಬಿದ್ದಾರೆ. ಇದೊಂದು ಸಸ್ಪೆನ್ಸ್‌ ಕ್ರೈಂ ಜಾನರ್‌ನ ಸಿನಿಮಾ ಎಂದು ಸಿನಿತಂಡ ಮಾಹಿತಿ ಕೊಟ್ಟಿದೆ.

ತತ್ಸಮ ತದ್ಭವ ಸಿನಿಮಾಕ್ಕೆ ಪನ್ನಗ ಭರಣ ಹಾಗೂ ಸ್ಫೂರ್ತಿ ಅನಿಲ್‌ ಅವರು ಬಂಡವಾಳ ಸುರಿದಿದ್ದಾರೆ. ವಿಶಾಲ್‌ ಆತ್ರೇಯ ಅವರು ಸಿನಿಮಾಕ್ಕೆ ಆಕ್ಷನ್‌ ಕಟ್‌ ಹೇಳುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

Exit mobile version