Site icon Vistara News

ಹುಡುಗರ ಲೈಂಗಿಕ ಸಾಮರ್ಥ್ಯವನ್ನು ಮ್ಯಾಗಿಗೆ ಹೋಲಿಸಿ, ‘ಎರಡೇ ನಿಮಿಷ’ ಎಂದ ನಟಿ!

regina cassandra

ತೆಲುಗು ಮತ್ತು ತಮಿಳು ನಟಿ ರೆಜಿನಾ ಕಸ್ಸಂದ್ರ (Regina Cassandra) ಸಂದರ್ಶನವೊಂದರಲ್ಲಿ ಡಬಲ್​ ಮೀನಿಂಗ್​ ಜೋಕ್​ ಮಾಡಿ ಸುದ್ದಿಯಲ್ಲಿದ್ದಾರೆ. ನಟಿಯರಾದ ರೆಜಿನಾ ಕಸ್ಸಂದ್ರ ಮತ್ತು ನಿವೇತಾ ಥೋಮಸ್​​ ಅವರು ಶಾಕಿನಿ-ಢಾಕಿಣಿ ಎಂಬ ತೆಲುಗು ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಈ ಸಿನಿಮಾವನ್ನು ಸುಧೀರ್​ ವರ್ಮಾ ನಿರ್ದೇಶನ ಮಾಡಿದ್ದು, 2023ರ ಸಂಕ್ರಾಂತಿಯೊಳಗೆ ಬಿಡುಗಡೆಯಾಗಲಿದೆ. ಸದ್ಯ ಇಬ್ಬರೂ ನಟಿಯರು ಸಿನಿಮಾ ಪ್ರಮೋಶನ್​​ನಲ್ಲಿ ತೊಡಗಿಕೊಂಡಿದ್ದಾರೆ.

ಶಾಕಿನಿ ಢಾಕಿಣಿ ಸಿನಿಮಾಕ್ಕೆ ಸಂಬಂಧಪಟ್ಟಂತೆ ಪತ್ರಕರ್ತನೊಬ್ಬ ಇಬ್ಬರೂ ನಟಿಯರನ್ನು ಸಂದರ್ಶನ ಮಾಡುತ್ತಿದ್ದ. ಆಗ ರೆಜಿನಾ ಕಸ್ಸಂದ್ರ ತುಂಬ ಬೋಲ್ಡ್​ ಆಗಿ ಮಾತನಾಡಿದ್ದು, ವಿಡಿಯೋ ವೈರಲ್​ ಆಗಿದೆ. ‘ನನಗೆ ಹುಡುಗರ ಬಗ್ಗೆ ಒಂದು ಜೋಕ್​ ಗೊತ್ತಿದೆ. ಆದರೆ ಅದನ್ನು ಇಲ್ಲಿ ಹೇಳಬಹುದೋ-ಬೇಡವೋ ಗೊತ್ತಿಲ್ಲ. ಆದರೂ ಹೇಳುತ್ತೇನೆ’ ಎಂದ ರೆಜಿನಾ, ‘ಹುಡುಗರ ಲೈಂಗಿಕ ಸಾಮರ್ಥ್ಯ ಮತ್ತು ಮ್ಯಾಗಿ ಎರಡೂ ಒಂದೇ. ಎರಡೇ ನಿಮಿಷದಲ್ಲಿ ಮುಗಿದು ಹೋಗುತ್ತದೆ’ ಎಂದು ಹೇಳಿದ್ದಾರೆ. ಇವರ ಈ ಮಾತಿಗೆ ನಿವೇತಾ ಥೋಮಸ್ ನಕ್ಕಿದ್ದಾರೆ. ರೆಜಿನಾ ಇಂಥ ಡಬಲ್​ ಅರ್ಥ ಬರುವ ಜೋಕ್​ ಮಾಡಿದ್ದು ಇದೇ ಮೊದಲೇನೂ ಅಲ್ಲ. ಹಿಂದೆಯೂ ಹೀಗೆ ಮಾಡಿ ಸುದ್ದಿಯಾಗಿದ್ದರು. ರೆಜಿನಾ ಕನ್ನಡದ ಸೂರ್ಯಕಾಂತಿ ಎಂಬ ಸಿನಿಮಾದಲ್ಲೂ ನಟಿಸಿದ್ದಾರೆ. ಇವರ ಈ ಮಾತುಗಳಿಗೆ ಅಪಾರ ಟೀಕೆ ವ್ಯಕ್ತವಾಗಿದೆ.

ಶಾಕಿನಿ ಢಾಕಿಣಿ ಎಂಬುದು ಕೊರಿಯನ್​ ಸಿನಿಮಾ ‘ಮಿಡ್​ನೈಟ್​ ರನ್ನರ್ಸ್​​​’ನ ಡಬ್ಬಿಂಗ್​. ಪೊಲೀಸ್ ಅಕಾಡೆಮಿಯ ಇಬ್ಬರು ವಿದ್ಯಾರ್ಥಿಗಳು ಮಾನವ ಅಕ್ರಮ ಸಾಗಣೆ ಜಾಲವನ್ನು ಬೇಧಿಸಿದ ಕತೆಯನ್ನು ಇದು ಒಳಗೊಂಡಿದೆ. ಇದೊಂದು ಕಾಮಿಡಿ ಮತ್ತು ಆ್ಯಕ್ಷನ್​ ಸಿನಿಮಾ. ಒಂದು ಬದಲಾವಣೆಯೆಂದರೆ ಮಿಡ್​ನೈಟ್​ ರನ್ನರ್ಸ್​​ನಲ್ಲಿ ಇಬ್ಬರು ಹುಡುಗರು ಮುಖ್ಯ ಪಾತ್ರದಲ್ಲಿ ಇದ್ದರು, ಆದರೆ ಈಗ ತೆಲುಗಿಗೆ ಡಬ್ಬಿಂಗ್​ ಆಗುವಾಗ ಇಬ್ಬರು ಹುಡುಗಿಯರನ್ನು ಮುಖ್ಯ ಭೂಮಿಕೆಯಲ್ಲಿ ಚಿತ್ರಿಸಲಾಗಿದೆ.

ಇದನ್ನೂ ಓದಿ: Dhamki vishwak | ಸ್ಯಾಂಡಲ್‌ವುಡ್‌ಗೆ ತೆಲುಗು ಸಿನಿಮಾ ಪ್ರತಿಭೆ: ದೀಪಾವಳಿಗೆ ‘ಧಮ್ಕಿ‘ ಫಸ್ಟ್‌ ಲುಕ್ !

Exit mobile version