ಬೆಂಗಳೂರು: ಅಮೆರಿಕದ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್ನಲ್ಲಿ ‘ಮೆಟ್ ಗಾಲಾ 2023’ (Met Gala 2023) ಅದ್ಧೂರಿಯಾಗಿ ನೆರವೇರಿದೆ. ಮೆಟ್ ಗಾಲಾ ವೇದಿಕೆ ಮೇಲೆ ಪ್ರಿಯಾಂಕಾ ಚೋಪ್ರಾ ಕಾಣಿಸಿಕೊಳ್ಳುತ್ತಿರುವುದು ನಾಲ್ಕನೇ ಬಾರಿಗೆ. ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಹಾಟೆಸ್ಟ್ ಮತ್ತು ಸ್ಟೈಲಿಶ್ ಜೋಡಿಗಳಾಗಿ ಕಾಣಿಸಿಕೊಂಡಿದ್ದಾರೆ. ಪಾರ್ಟಿಯ ಬಳಿಕ ಕಾರಿನಲ್ಲಿ ತೆರಳುತ್ತಿದ್ದಾಗ ನಿಕ್- ಪ್ರಿಯಾಂಕಾ ಅವರು ರ‍್ಯಾಪರ್ ಸಿಂಗರ್ ಆಗಿರುವ ಡೋಜಾ ಕ್ಯಾಟ್ ಅವರನ್ನು ಅನುಕರಿಸುವ ತಮಾಷೆಯ ವಿಡಿಯೊವನ್ನು ಹಂಚಿಕೊಂಡಿದ್ದಾರೆ.
ಈ ವಿಡಿಯೊವನ್ನು ನಿಕ್ ಜೊನಾಸ್ ಅವರು ಟಿಕ್ ಟಾಕ್‌ನಲ್ಲಿ ಅಧಿಕೃತವಾಗಿ ಹಂಚಿಕೊಂಡಿದ್ದಾರೆ. ವಿಡಿಯೊದಲ್ಲಿ ಸಂದರ್ಶಕರಾಗಿ ನಿಕ್ ಮಾತನಾಡಿದರೆ, ರ‍್ಯಾಪರ್ ಸಿಂಗರ್ ಆಗಿರುವ ಡೋಜಾ ಕ್ಯಾಟ್‌ರಾಗಿ ಪ್ರಿಯಾಂಕಾ ಚೋಪ್ರಾ ಅನುಕರಣೆ ಮಾಡಿದ್ದಾರೆ. ಅದರಲ್ಲಿ ಸಂದರ್ಶಕನಾಗಿ ನಿಕ್, ಪ್ರಿಯಾಂಕಾ ಚೋಪ್ರಾ ಅವರಿಗೆ ಉಡುಗೆ ಮತ್ತು ಅದರ ವಿವರಗಳ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಾರೆ. ಪ್ರಿಯಾಂಕಾ ಚೋಪ್ರಾ ಅವರು ಡೋಜಾ ಕ್ಯಾಟ್ ರೀತಿಯಲ್ಲಿಯೇ ‘ಮಿಯಾಂವ್’ ಎಂದು ಅನುಕರಣೆ ಮಾಡಿ ಉತ್ತರಿಸುತ್ತಾರೆ. ಈ ತಮಾಷೆಯ ವಿಡಿಯೊವನ್ನು ನಿಕ್-ಪಿಗ್ಗಿ ಅಭಿಮಾನಿಗಳ ಫ್ಯಾನ್ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದೆ. ಅಭಿಮಾನಿಗಳು ಅದನ್ನು ಇಷ್ಟಪಟ್ಟಿದ್ದಾರೆ. ಅನೇಕರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.
ರ‍್ಯಾಪರ್ ಸಿಂಗರ್ ಆಗಿರುವ ಡೋಜಾ ಕ್ಯಾಟ್ ಅವರು ಕಾರ್ಲ್ ಲಾಗರ್‌ಫೆಲ್ಡ್ ಅವರ ನೆಚ್ಚಿನ ಕ್ಯಾಟ್ ಚೌಪೆಟ್-ಥೀಮಿನ (cat Choupette-themed look) ಉಡುಪನ್ನು ಧರಿಸುವ ಮೂಲಕ ಗೌರವ ಸಲ್ಲಿಸಿದರು. ಬಿಳಿ ಗೌನ್‌ನಲ್ಲಿ, ಹಾಗೂ ಮುಖದ ಮೇಲೆ ಪ್ರಾಸ್ಥೆಟಿಕ್ಸ್ ಕೂಡ ಹೊಂದಿದ್ದರು. ರೆಡ್ ಕಾರ್ಪೆಟ್ ಮೇಲೆ ಸಂದರ್ಶನ ಮಾಡುವಾಗ ಅವರು ‘ಮಿಯಾಂವ್’ ಎಂತಲೇ ಉತ್ತರಿಸಿದ್ದಾರೆ.
ಇದನ್ನೂ ಓದಿ: Bangalore Ramp News: ಇಮ್ಯಾಜಿನೇಷನ್ ಫ್ಯಾಷನ್‌ಗೆ ತಕ್ಕಂತೆ ಮಾಡೆಲ್‌ಗಳ ರ್ಯಾಂಪ್ ವಾಕ್
ಡೋಜಾ ಕ್ಯಾಟ್‌ರನ್ನು ಮಿಮಿಕ್ರಿ ಮಾಡಿದ ನಿಕ್-ಪ್ರಿಯಾಂಕಾ
ನಿಕ್ ಜೋನಾಸ್ ಬಿಳಿ ಶರ್ಟ್, ಕಪ್ಪು ಪ್ಯಾಂಟ್, ಟೈ ಮತ್ತು ಜಾಕೆಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ರೆಡ್ ಕಾರ್ಪೆಟ್ ಮೇಲೆ ಒಬ್ಬರಿಗೊಬ್ಬರು ಪೋಸ್ ನೀಡುತ್ತಿರುವಾಗ ದಂಪತಿ ನಗುತ್ತಿರುವುದು ಕಾಣಬಹುದು. ಪ್ರಿಯಾಂಕಾ ಚೋಪ್ರಾ, ನಿಕ್ ಜೋನಾಸ್, ಆಲಿಯಾ ಭಟ್, ಬ್ರಾಡ್ಲಿ ಕೂಪರ್, ರಿಹಾನ್ನಾ, ಪೆನೆಲೋಪ್ ಕ್ರೂಜ್, ಲಿಲ್ ನಾಸ್ ಎಕ್ಸ್, ರಾಬರ್ಟ್ ಪ್ಯಾಟಿನ್ಸನ್ ಮತ್ತು ಇನ್ನೂ ಅನೇಕ ಪ್ರಮುಖ ಸೆಲೆಬ್ರಿಟಿಗಳು ಭಾಗವಹಿಸಿದ್ದರು.