Site icon Vistara News

MI 7 Collection : ಮೊದಲನೇ ದಿನವೇ ಕೋಟಿ ಕೋಟಿ ಗಳಿಸಿ ದಾಖಲೆ ಬರೆದ ಮಿಷನ್‌ ಇಂಪಾಸಿಬಲ್‌ 7

MI 7 Collection

ಮುಂಬೈ: ಹಾಲಿವುಡ್‌ ನಟ ಟಾಮ್‌ ಕ್ರೂಸ್‌ ನಟನೆಯ ‘ಮಿಷನ್‌ ಇಂಪಾಸಿಬಲ್‌’ ಸಿನಿಮಾದ ಏಳನೇ ಭಾಗವಾದ Mission: Impossible – Dead Reckoning Part One ಸಿನಿಮಾ ಬುಧವಾರ ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಸಿನಿಮಾ ಮೊದಲ ದಿನದಂದು ಭಾರತದಲ್ಲಿ ಬರೋಬ್ಬರಿ 12.50 ಕೋಟಿ ರೂ. (MI 7 Collection) ಬಾಚಿಕೊಂಡಿದ್ದು, ದಾಖಲೆಯನ್ನು ನಿರ್ಮಿಸಿದೆ.

ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ MI 7 ಸಿನಿಮಾದ ದೇಶದಲ್ಲಿ ಮೊದಲನೇ ದಿನ 12.50 ಕೋಟಿ ರೂ. ಗಳಿಸಿಕೊಂಡಿದೆ. ಸದ್ಯದಲ್ಲೇ ಸಿನಿಮಾ ದೇಶದಲ್ಲಿ 100 ಕೋಟಿ ರೂ. ಗಳಿಸಲಿದೆ ಎಂದೂ ವರದಿಯಲ್ಲಿ ಹೇಳಲಾಗಿದೆ. ಅಂದ ಹಾಗೆ ಕೆಲವು ವಾರಗಳ ಹಿಂದೆ ಬಿಡುಗಡೆಯಾಗಿದ್ದ ಫಾಸ್ಟ್‌ ಎಕ್ಸ್‌ ಸಿನಿಮಾ ಕೂಡ ಮೊದಲನೇ ದಿನದಂದು ಭಾರತದಲ್ಲಿ 12.50 ಕೋಟಿ ರೂ. ಗಳಿಸಿತ್ತು ಎಂದು ವರದಿಯಿದೆ.

ಇದನ್ನೂ ಓದಿ: Viral News : ಸಹಾಯಕ್ಕಾಗಿ ಕೂಗುತ್ತಿದ್ದ ಮಹಿಳೆಯ ಧ್ವನಿ ಹುಡುಕಿ ಬಂದ ಪೊಲೀಸರಿಗೆ ಶಾಕ್‌! ಆಗಿದ್ದೇ ಬೇರೆ…
ಈ ಹಿಂದೆ ಹಾಲಿವುಡ್‌ನ ಮಿಷನ್‌ ಇಂಪಾಸಿಬಲ್‌ ಸಿನಿಮಾದ ನಾಲ್ಕನೇ ಭಾಗವು ಬಿಡುಗಡೆಯಾದ ದಿನದಂದು ದೇಶದಲ್ಲಿ 10 ಕೋಟಿ ರೂ. ಗಳಿಸಿಕೊಂಡಿತ್ತು. ಹಾಗೆಯೇ ಆಂಟ್-ಮ್ಯಾನ್ ಮತ್ತು ವಾಸ್ಪ್: ಕ್ವಾಂಟುಮೇನಿಯಾ ಸಿನಿಮಾಗಳು ಬಿಡುಗಡೆಯಾದ ದಿನದಂದು ತಲಾ 9 ಕೋಟಿ ರೂ. ಗಳಿಸಿದ್ದವು. ಇದೀಗ ಬಿಡುಗಡೆಯಾದ MI 7 ಸಿನಿಮಾ ಈ ಸಿನಿಮಾಗಳ ದಾಖಲೆಯನ್ನು ಮುರಿದು ಮುನ್ನುಗಿದೆ.

ವೆರೈಟಿ ಮೀಡಿಯಾ ವರದಿಯ ಪ್ರಕಾರ ಈ ಸಿನಿಮಾ ವಿಶ್ವಾದ್ಯಂತ ಬಿಡುಗಡೆಯಾದ ದಿನದಂದು 250 ಮಿಲಿಯನ್‌ ಡಾಲರ್‌ ಗಳಿಸಬಹುದು ಎನ್ನಲಾಗಿತ್ತು. ಅದರಲ್ಲಿ ಉತ್ತರ ಅಮೆರಿಕ ವಲಯದಲ್ಲಿಯೇ 95 ಮಿಲಿಯನ್‌ ಡಾಲರ್‌ ಗಳಿಕೆಯಾದರೆ ಉಳಿದ ಭಾಗಗಳಲ್ಲಿ 160 ಮಿಲಿಯನ್‌ ಡಾಲರ್‌ ಗಳಿಕೆಯಾಗಬಹುದು ಎಂದು ನಿರೀಕ್ಷೆಯನ್ನು ಮಾಡಲಾಗಿತ್ತು.

MI 1 ಸಿನಿಮಾ 1996ರಲ್ಲಿ ಬಿಡುಗಡೆಯಾಗಿತ್ತು. ಆಗಲೇ ಆ ಸಿನಿಮಾ ಭಾರತದಲ್ಲಿ 2 ಕೋಟಿ ರೂ. ಗಳಿಸುವಲ್ಲಿ ಯಶಸ್ವಿಯಾಗಿತ್ತು. 2000ನೇ ಇಸವಿಯಲ್ಲಿ ಬಿಡುಗಡೆಯಾದ MI 2 ಸಿನಿಮಾ ದೇಶದಲ್ಲಿ 7 ಕೋಟಿ ರೂ. ಗಳಿಸಿಕೊಂಡಿತು. 2006ರಲ್ಲಿ ಬಿಡುಗಡೆಯಾದ MI 3 ಸಿನಿಮಾ 10 ಕೋಟಿ ರೂ. ಗಳಿಸಿತು. ಸಿನಿಮಾದ ನಾಲ್ಕನೇ ಭಾಗ 2011ರಲ್ಲಿ ಬಿಡುಗಡೆಯಾಗಿ ದೇಶದಲ್ಲಿ 46 ಕೋಟಿ ಗಳಿಸುವಲ್ಲಿ ಯಶಸ್ವಿಯಾಯಿತು. ಐದನೇ ಭಾಗ 2015ರಲ್ಲಿ ಬಿಡುಗಡೆಯಾಗಿ ದೇಶಾದ್ಯಂತ 54 ಕೋಟಿ ರೂ. ಗಳಿಸಿತು. MI 6 2018ರಲ್ಲಿ ಬಿಡುಗಡೆಯಾಗಿ 80 ಕೋಟಿ ರೂ. ಗಳಿಸಿತು.

Exit mobile version