ಮುಂಬೈ: ಈ ಬಾರಿಯ ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಿಂಚಿದ ಸಿನಿಮಾವೆಂದರೆ ಅದು ʼಎವೆರಿಥಿಂಗ್ ಎವರಿವೇರ್ ಆಲ್ ಅಟ್ ಒನ್ಸ್ʼ ಸಿನಿಮಾ. ಬರೋಬ್ಬರಿ ಏಳು ಆಸ್ಕರ್ ಗೆಲ್ಲುವ ಮೂಲಕ ಈ ಸಿನಿಮಾ ದಾಖಲೆ ಬರೆದಿತ್ತು. ಈ ಸಿನಿಮಾದ ನಟಿ ಮಿಚೆಲ್ ಯೋಹ್ (Michelle Yeoh) ಅವರು ಅತ್ಯುತ್ತಮ ನಟಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಅಂದ ಹಾಗೆ ಈ ಮಿಚೆಲ್ ಅವರಿಗೆ ಬಾಲಿವುಡ್ ಎಂದರೆ ಎಲ್ಲಿಲ್ಲದ ಪ್ರೀತಿಯಂತೆ. ಬಾಲಿವುಡ್‌ನ ಈ ಇಬ್ಬ ನಟನ ಜತೆ ನಟಿಸುವುದಕ್ಕೆ ಕನಸು ಕಟ್ಟಿದ್ದಾರಂತೆ.
ಇದನ್ನೂ ಓದಿ: Ram Charan: ಆಸ್ಕರ್ ಗೆದ್ದು ಭಾರತಕ್ಕೆ ಬರುತ್ತಿದ್ದಂತೆ ಸಚಿವ ಅಮಿತ್ ಶಾ ಭೇಟಿಯಾದ ರಾಮ್ ಚರಣ್
ಹೌದು. ಮಿಚೆಲ್ ಅವರಿಗೆ ಬಾಲಿವುಡ್ ಅತ್ಯಂತ ಇಷ್ಟವಾದ ಸಿನಿ ರಂಗವಂತೆ. ಬಾಲಿವುಡ್‌ನ ಹಲವಾರು ಸಿನಿಮಾಗಳನ್ನು ನೋಡಿ ಮೆಚ್ಚಿಕೊಂಡಿದ್ದಾರಂತೆ ಕೂಡ. ಅದರಲ್ಲೂ ನಟ ಆಮೀರ್ ಖಾನ್ ಕಂಡರೆ ಎಲ್ಲಿಲ್ಲದ ಪ್ರೀತಿಯಂತೆ. ಅವರೊಂದಿಗೆ ನಟಿಸಬೇಕು ಎನ್ನುವ ಆಸೆ ಕೂಡ ಇದೆ ಎಂದು ನಟಿ ಕೆಲ ತಿಂಗಳ ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ಮಿಚೆಲ್ ಹಾಗೂ ಆಮೀರ್ ಖಾನ್ ಅವರು ಪರಿಸರ ಸಂರಕ್ಷಣೆ ಕುರಿತಾದ ಎನ್‌ಜಿಒ ಒಂದಕ್ಕೆ ರಾಯಭಾರಿಗಳಾಗಿ ಕೆಲಸ ಮಾಡಿದ್ದಾರೆ. ಮಿಚೆಲ್ ಅವರು ಆಮಿರ್ ಅವರನ್ನು ಮಾನವೀಯ ಗುಣಗಳುಳ್ಳ ನಟ ಎಂದೂ ವ್ಯಾಖ್ಯಾನಿಸಿದ್ದಾರೆ. ಆಮಿರ್ ಅವರ ʼ3 ಈಡಿಯಟ್ಸ್ʼ ಸಿನಿಮಾ ನೋಡಿದ್ದೀರಾ ಎಂದು ಕೇಳಲಾಗಿದ್ದ ಪ್ರಶ್ನೆಗೆ ಉತ್ತರಿಸಿದ್ದ ನಟಿ, “ಖಂಡಿತವಾಗಿಯೂ. ಬಹುಶಃ ಆ ಸಿನಿಮಾವನ್ನು ನೋಡದವರು ಯಾರೂ ಇಲ್ಲವೆನಿಸುತ್ತದೆ” ಎಂದು ಹೇಳಿದ್ದರು.
ಇದನ್ನೂ ಓದಿ: MM Keeravani : ಆಸ್ಕರ್ ಗೆದ್ದ ಕೀರವಾಣಿಗೆ ಶುಭ ಹಾರೈಸಿದ ಖ್ಯಾತ ಪಿಯಾನಿಸ್ಟ್ ಕಾರ್ಪೆಂಟರ್; ಕಣ್ಣೀರಿಟ್ಟ ಸಂಗೀತ ನಿರ್ದೇಶಕ
ಆಮೀರ್ ಖಾನ್ ಅವರು ʼಲಾಲ್ ಸಿಂಗ್ ಚಡ್ಡಾʼ ಸಿನಿಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಹಾಲಿವುಡ್‌ನ ಟಾಮ್ ಹಾಂಕ್ ಅವರ ನಟನೆಯ ಪ್ರಸಿದ್ಧ ಸಿನಿಮಾವಾದ ʼಫಾರೆಸ್ಟ್ ಗಂಪ್ʼ ಸಿನಿಮಾದ ರಿಮೇಕ್ ಆಗಿತ್ತು. ಈ ಸಿನಿಮಾ ಹಲವಾರು ಕಾರಣಗಳಿಂದ ವಿವಾದಕ್ಕೆ ಸಿಲುಕಿಕೊಂಡಿತ್ತು.