ಆಸ್ಕರ್ ವಿಜೇತೆ ಮಿಷೆಲ್ ಯೋ (Michelle Yeoh) ಮತ್ತು ಅವರ ದೀರ್ಘಕಾಲದ ಭಾವಿ ಪತಿ ಫಾರ್ಮುಲಾ ಒನ್ ಸರ್ಕ್ಯೂಟ್ ನಿಯಂತ್ರಿಸುವ ಇಂಟರ್ನ್ಯಾಷನಲ್ ಆಟೋಮೊಬೈಲ್ ಫೆಡರೇಶನ್‌ನ ಮಾಜಿ ಮುಖ್ಯಸ್ಥ ಜೊನ್ ಟೊಡ್ (Jean Todt ) ಜತೆ ಸುಮಾರು 19 ವರ್ಷಗಳ ನಿಶ್ಚಿತಾರ್ಥದ ಬಳಿಕ ಮದುವೆಯಾಗಿದ್ದಾರೆ. ಮದುವೆ ಸಮಾರಂಭದ ಕೆಲವು ಚಿತ್ರಗಳು ಇನ್‌ಸ್ಟಾದಲ್ಲಿ ವೈರಲ್ ಆಗಿವೆ. ಈ ವರ್ಷ ʻಎವೆರಿಥಿಂಗ್ ಎವೆರಿವೇರ್ ಆಲ್ ಅಟ್ ಒನ್ಸ್ʼ ನಲ್ಲಿನ ಪಾತ್ರಕ್ಕಾಗಿ ಆಸ್ಕರ್‌ನಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಫೀಮೇಲ್ ಲೀಡ್ ಕೆಟಗರಿಯಲ್ಲಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದ ಏಷ್ಯಾದ ಮೊದಲ ನಟಿ ಎಂಬ ಕೀರ್ತಿಗೆ ಪಾತ್ರವಾಗಿದ್ದರು. ಮಿಷೆಲ್ ಅವರು ಜೊನ್ ಟೊಡ್ ಅವರ ಜತೆ ಇಷ್ಟು ವರ್ಷಗಳ ಕಾಲ ವಾಸಿಸುತ್ತಿದ್ದರು.
1997ರಲ್ಲಿ ತೆರೆ ಕಂಡ ಟುಮಾರೋ ನೆವರ್ ಡೈಸ್ ಜೇಮ್ಸ್ ಬಾಂಡ್ ಸರಣಿಯ ಚಿತ್ರದಲ್ಲಿ ನಾಯಕ ಪಿಯರ್ಸ್ ಬ್ರಾನ್ಸನ್ ಅವರ ಎದುರು ಚೀನಾದ ಗೂಢಚರರಾಗಿ ಅಭಿನಯಿಸಿದರು. ಅಲ್ಲಿಂದ ಅವರು ಜಾಗತಿಕ ನಟಿಯಾಗಿ ಗುರುತಿಸಿಕೊಂಡರು. ‘ಕ್ರೌಚಿಂಗ್ ಟೈಗರ್, ಹಿಡನ್ ಡ್ರ್ಯಾಗನ್’ ಮತ್ತು ‘ಮೆಮೊಯಿರ್ಸ್ ಆಫ್ ಎ ಗೀಷಾ’ ಅವರ ಇತರ ಸೂಪರ್ ಡೂಪರ್ ಚಿತ್ರಗಳು. ಅಲ್ಲದೇ ಈ ಚಿತ್ರಗಳು ಅವರು ಭಾರೀ ಹೆಸರನ್ನು ತಂದುಕೊಟ್ಟವು.
ವಿವಾಹ ಸಮಾರಂಭವು ಜಿನೀವಾದಲ್ಲಿ ನಡೆದಿದೆ. ಮಿಷೆಲ್ ಯೋ ಮತ್ತು ಜೊನ್ ಟೊಡ್ ಸ್ನೇಹಿತರು ಮತ್ತು ಕುಟುಂಬ ಸಮ್ಮಖದಲ್ಲಿ ಮದುವೆಯಾದರು. ಈ ಜೋಡಿ ಶಾಂಘೈನಲ್ಲಿ 2004ರ ಜೂನ್ 4ರಂದು ಪರಸ್ಪರ ಭೇಟಿಯಾಗಿದೆ. 2004 ಜುಲೈ 26ರಂದು ಜೊನ್ ಟೊಡ್ ಅವರು ಯೋಹ್ ಅವರನ್ನು ಮದುವೆಯಾಗಲು ಪ್ರಸ್ತಾಪಿಸಿದರು. ಇದಕ್ಕೆ ನಟಿ ಒಪ್ಪಿಗೆಯನ್ನೂ ಸೂಚಿಸಿದ್ದರು.
ಇದನ್ನೂ ಓದಿ: Oscars 2023: ಅತ್ಯುತ್ತಮ ನಟಿ ಆಸ್ಕರ್ ಗೆದ್ದ ಏಷ್ಯಾದ ಮೊದಲ ನಟಿ ಮಿಷೆಲ್ ಯೋ, ಜೇಮ್ಸ್ ಬಾಂಡ್ ಸಿನಿಮಾದಲ್ಲಿ ನೋಡಿರ್ತಿರಿ!
1998 ರಲ್ಲಿ, ಜೊನ್ ಟೊಡ್ ಅವರನ್ನು ಭೇಟಿಯಾಗುವ ಮೊದಲು ನಟಿ ಅಮೇರಿಕನ್ ಹೃದ್ರೋಗ ತಜ್ಞ ಅಲನ್ ಹೆಲ್ಡ್ಮನ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಹಿಂದೆ 1988 ರಿಂದ 1991 ರವರೆಗೆ ಹಾಂಕಾಂಗ್ ಉದ್ಯಮಿ ಡಿಕ್ಸನ್ ಪೂನ್ ಅವರನ್ನು ವಿವಾಹವಾಗಿದ್ದರು. ಬಳಿಕ ನಟನೆಗೆ ಬ್ರೇಕ್ ಹಾಕಿದ್ದರು. ಅವರಿಗೆ ಮಕ್ಕಳು ಇರಲಿಲ್ಲ. ನಂತರ ಪತಿಯಿಂದ ವಿಚ್ಛೇದನ ಪಡೆದಿದ್ದರು.
ಆಸ್ಕರ್ ಪ್ರಶಸ್ತಿ ಗೆದ್ದ ಏಷ್ಯಾದ ಮೊದಲ ನಟಿ
ಅತ್ಯುತ್ತಮ ನಟಿ ಕೆಟಗರಿಯಲ್ಲಿ ಆಸ್ಕರ್ ಪ್ರಶಸ್ತಿ ಗೆಲ್ಲುವ ಮೂಲಕ ಮಿಷೆಲ್ ಯೋ (Michelle Yeoh) ಅವರು ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಫಿಮೇಲ್ ಲೀಡ್ ಕೆಟಗರಿಯಲ್ಲಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದ ಏಷ್ಯಾದ ಮೊದಲ ನಟಿ ಎಂಬ ಕೀರ್ತಿಗೆ ಪಾತ್ರವಾಗಿದ್ದಾರೆ. ಎವೆರಿಥಿಂಗ್ ಎವೆರಿವೇರ್ ಆಲ್ ಅಟ್ ಒನ್ಸ್ (Everything Everywhere All at Once) ಚಿತ್ರದ ಅಮೋಘ ಅಭಿನಯಕ್ಕಾಗಿ ಅವರಿಗೆ ಆಸ್ಕರ್ 2023 ಸಂದಿದೆ (Oscars 2023).