Site icon Vistara News

Actor Kishore | ʻಮೈಂಡ್‌ಲೆಸ್‌ʼ ನನ್ನ ಪದವಲ್ಲ, ರೈತರ ವಿಚಾರ ಚರ್ಚೆಯಾಗಿದ್ದರೆ ಖುಷಿ ಆಗುತ್ತಿತ್ತು: ನಟ ಕಿಶೋರ್‌

Actor Kishore

ಬೆಂಗಳೂರು : ‘ಕಾಂತಾರ’ ಚಿತ್ರದಲ್ಲಿ ಅರಣ್ಯ ಅಧಿಕಾರಿಯ ಪಾತ್ರವನ್ನು ನಿರ್ವಹಿಸಿದ ನಟ ಕಿಶೋರ್ (Actor Kishore) ಅವರು ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ʻಕೆಜಿಎಫ್‌ ʼಸಿನಿಮಾವನ್ನು ನೋಡಿಲ್ಲ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಇದು ನನ್ನ ಪ್ರಕಾರದ ಸಿನಿಮಾ ಅಲ್ಲ ಎಂದು ಕೆಜಿಎಫ್‌ ಕುರಿತಾಗಿ ಹೇಳಿಕೆ ನೀಡಿದ್ದರು. ಈ ವಿಚಾರ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗಳಾಗಿವೆ. ʻಮೈಡ್‌ಲೆಸ್‌’ ಎಂದು ಹೇಳಿದ್ದಾಗಿಯೂ ವರದಿ ಆಗಿತ್ತು. ಆದರೆ ಅದಕ್ಕೆ ನಟ ಕಿಶೋರ್ ಸ್ಪಷ್ಟನೆ ನೀಡಿದ್ದಾರೆ.

ರೈತರ ಸಮಸ್ಯೆಗಳ ಬಗ್ಗೆ ಮಾತನಾಡಿದಾಗ ಇಷ್ಟು ಚರ್ಚೆಯಾಗಿದ್ದರೆ ತೃಪ್ತಿಯಿರುತ್ತಿತ್ತು

ನಟ ಕಿಶೋರ್ ಹೇಳಿಕೆಗೆ ಭಾರಿ ಅಸಮಾಧಾನ ವ್ಯಕ್ತವಾಗಿತ್ತು. ಯಶ್ ಅಭಿಮಾನಿಗಳು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ನಟ ಕಿಶೋರ್ “ಚರ್ಚಿಸಲು, ಚಿಂತಿಸಲು ನಿಜವಾದ ಸಮಸ್ಯೆಗಳು ಹಲವಿರುವಾಗ ನನ್ನ ಲೋಕಾಭಿರಾಮದ ಯಾವುದೋ ಮಾತು ಚರ್ಚೆಗೆ ಗ್ರಾಸವಾಗುವುದೋ, ಜನರ ಸಮಯ ಹಾಳುಮಾಡುವುದೋ ನನ್ನ ಮಟ್ಟಿಗೆ ಅಕ್ಷಮ್ಯ. ಆದರೂ ಅದಕ್ಕಾಗಿ ಕ್ಷಮೆಯಿರಲಿ. ನಾನು ರೈತರ ಸಮಸ್ಯೆಗಳ ಬಗ್ಗೆ ಮಾತನಾಡಿದಾಗ ಇಷ್ಟು ಚರ್ಚೆಯಾಗಿದ್ದರೆ ತೃಪ್ತಿಯಿರುತ್ತಿತ್ತು. ಅದೇನೇ ಇರಲಿ ರಶ್ಮಿಕಾ ವಿಷಯದ ಚರ್ಚೆಯಲ್ಲಿ, ಆಯ್ಕೆಯ ಸ್ವಾತಂತ್ರದ ಮಾತುಗಳ ನಡುವೆ ಹೇಗೋ ಸುಳಿದ ಈ ಮಾತುಗಳಲ್ಲಿ ಯಾರ ಮನಸ್ಸನ್ನೂ ನೋಯಿಸುವ ಉದ್ದೇಶವಿರಲಿಲ್ಲʼʼ ಎಂದಿದ್ದಾರೆ.

ಇದನ್ನೂ ಓದಿ | Actor Kishore | ಟ್ವಿಟರ್ ಅಕೌಂಟ್ ಸಸ್ಪೆಂಡ್ ಬಗ್ಗೆ ಸ್ಷಷ್ಟನೆ ನೀಡಿದ ನಟ ಕಿಶೋರ್

ಮೈಂಡ್ ಲೆಸ್ ನನ್ನ ಪದವಲ್ಲ
ʻʻಬರೆದವರು ನನ್ನ ಯಾವ ಪದವನ್ನು ಸಮೀಕರಿಸಿ ಆ ಪದ ಬಳಸಿದರೋ, ಭಾಷಾಂತರದಲ್ಲಿ ಯಾವ ಪದದರ್ಥ ಏನಾಯ್ತೊ ಗೊತ್ತಿಲ್ಲ. ʻʻನೋಡಿಲ್ಲ”ದಿಂದ “ನೋಡುವುದಿಲ್ಲ” ದವರೆಗೆ ಅವರವರ ಇಷ್ಟದಂತೆ ಬರೆದಿದ್ದಾರಲ್ಲ ಹಾಗೆ.
ಒಂದು ಸಿನಿಮಾವನ್ನು ನೋಡದ ನಾನು ಅದನ್ನು ಈ ಥರದ ಪದಬಳಸಿ ತೀರ್ಪು ಕೊಡುವುದು ಸಾಧ್ಯವೂ ಇಲ್ಲ . ಮಾಡಿದರೆ ತಪ್ಪೂ ಸಹ. ಆದರೆ ಪ್ರೇಕ್ಷಕನಾಗಿ ಎಲ್ಲರಿಗೂ ಇರುವಂತೆ ಅಭಿರುಚಿ, ಆಯ್ಕೆಯ ಸ್ವಾತಂತ್ರ್ಯ ನನ್ನದು. ಯಾರೂ ಯಾರನ್ನೂ ಥಿಯೇಟರಿನ ಒಳಗೂ ತಳ್ಳಲಾಗದು, ಹೊರಗೂ ಸಹ. ನನ್ನ ಸಿನಿಮಾವಾದರೂ ಸರಿ, ಯಾವ ಸಿನಿಮಾದರೂ ಸರಿ”ಎಂದಿದ್ದಾರೆ.

KGF ಸಿನಿಮಾದ ಯಶಸ್ಸಿನ ಬಗ್ಗೆ ಸಂತೋಷವಿದೆ
ʻʻಒಟ್ಟಿನಲ್ಲಿ ನನ್ನ ಅಭಿರುಚಿಯೋ ಅಲ್ಲವೋ KGF ಸಿನಿಮಾದ ಯಶಸ್ಸಿನ ಬಗ್ಗೆ ಸಂತೋಷವಿದೆ ಹಾಗೂ ಆ ಯಶಸ್ಸಿನಿಂದ ನನ್ನಲ್ಲಿನ ಸಿನಿಮಾ ತಂತ್ರಜ್ಞ ಕಲಿತದ್ದು, ಕಲಿಯುವುದೂ ಸಾಕಷ್ಟಿದೆ. ನನ್ನ KGF ಕಲ್ಪನೆ ಬೇರೆಯೇ ಆದರೂ ಸಹʼʼ ಎಂದು ಪೋಸ್ಟ್‌ ಮಾಡಿದ್ದಾರೆ.

ಸಂದರ್ಶನದಲ್ಲಿ ನಟ ಹೇಳಿದ್ದೇನು?
ಸಂದರ್ಶನವವೊಂದರಲ್ಲಿ ಕಿಶೋರ್‌ ಮಾತನಾಡಿ ʻʻಯಶ್‌ ಅಭಿನಯದ ಕೆಜಿಎಫ್‌ ಸಿನಿಮಾವನ್ನು ನೋಡಿಲ್ಲ . ನನಗೆ ಗಂಭೀರವಾದ ವಿಷಯಗಳನ್ನು ಆಧರಿಸಿದ ಚಿತ್ರಗಳನ್ನು ಹೊಂದಿರುವ ಸಿನಿಮಾಗಳಂದರೆ ಇಷ್ಟ. ನನಗೆ ಸರಿಯೋ ತಪ್ಪೋ ಗೊತ್ತಿಲ್ಲ. ಆದರೆ ನಾನು ಕೆಜಿಎಫ್ 2 ಸಿನಿಮಾ ವೀಕ್ಷಿಸಿಲ್ಲ. ಇದು ನನ್ನ ಪ್ರಕಾರದ ಸಿನಿಮಾ ಅಲ್ಲ. ಇದು ವೈಯಕ್ತಿಕ ಆಯ್ಕೆಯಾಗಿದೆ. ನಾನು ಯಶಸ್ವಿಯಾಗದ ಸಣ್ಣ ಚಲನಚಿತ್ರವನ್ನು ನೋಡುತ್ತೇನೆ ʼʼಎಂದು ಹೇಳಿದ್ದಾರೆ.

ಇದನ್ನೂ ಓದಿ | Actor Kishore | ಕೆಜಿಎಫ್-2 ನೋಡಿಲ್ಲ, ಇದು ನನ್ನ ಪ್ರಕಾರದ ಸಿನಿಮಾ ಅಲ್ಲ ಎಂದ ಕಾಂತಾರ ನಟ ಕಿಶೋರ್!

Exit mobile version