Site icon Vistara News

Miss Shetty Mr Polishetty: ʻನವೀನ್ ಪೋಲಿಶೆಟ್ಟಿʼ ಅಭಿನಯಕ್ಕೆ ಮನಸೋತ ಪ್ರೇಕ್ಷಕರು!

Miss Shetty Mr Polishetty

ಬೆಂಗಳೂರು: ಅನುಷ್ಕಾ ಶೆಟ್ಟಿ (Anushka Shetty) ಮತ್ತು ನವೀನ್ ಪೋಲಿಶೆಟ್ಟಿ (Naveen Polishetty) ಕಾಂಬಿನೇಶನ್‌ ಸಿನಿಮಾ ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ’ (Miss Shetty Mr Polishetty) ಸೆಪ್ಟೆಂಬರ್‌ 7ರಂದು ಬಿಡುಗಡೆಯಾಗಿದೆ. ಅನುಷ್ಕಾ ಶೆಟ್ಟಿ ವೃತ್ತಿಯಲ್ಲಿ ಬಾಣಸಿಗರಾಗಿ ಕಾಣಿಸಿಕೊಂಡಿದ್ದು, ನವೀನ್ ಸ್ಟ್ಯಾಂಡ್ಅಪ್ ಕಾಮಿಡಿಯನ್ (standup comedian) ಆಗಿ ನಟಿಸಿದ್ದಾರೆ. ಇದೀಗ ಈ ಸಿನಿಮಾ ಬಗ್ಗೆ ಮೆಚ್ಚುಗೆ (Miss Shetty Mr Polishetty Twitter review) ವ್ಯಕ್ತವಾಗಿದೆ. ಟಾಲಿವುಡ್‌ ಸ್ಟಾರ್‌ಗಳು ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ.

ಚಿತ್ರದ ಬಗ್ಗೆ ಅಭಿಮಾನಿಯೊಬ್ಬರು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ, “ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ ಸಿನಿಮಾ ಈ ವರ್ಷದ ಅತ್ಯುತ್ತಮ ರೊಮ್ಯಾಂಟಿಕ್‌-ಕಾಮಿಡಿ ಸಿನಿಮಾ. ಮಹೇಶ್ ಬಾಬು ಪಿ ಅವರ ಬರವಣಿಗೆ ಮತ್ತು ನಿರ್ದೇಶನ ತುಂಬ ಅದ್ಭುತ. ನವೀನ್ ಹಾಸ್ಯ ಪ್ರತಿಭೆ! ಈ ಚಿತ್ರ ಅದ್ಭುತವಾಗಿದೆʼʼಎಂದು ಬರೆದುಕೊಂಡಿದ್ದಾರೆ.

ಇನ್ನೊಬ್ಬರು, ʻಕಳಪೆ ಸಂಗೀತ ಮತ್ತು ಬಿಜಿಎಂ (ಹಿನ್ನೆಲೆ ಸಂಗೀತ) ಹೊರತಾಗಿಯೂ, ಚೆನ್ನಾಗಿ ಸಿನಿಮಾ ನೋಡಿಸಿಕೊಂಡು ಹೋಗುತ್ತದೆ. ನವೀನ್ ಪೋಲಿಶೆಟ್ಟಿ ಅಭಿನಯ ಅಮೋಘ. ಅವರ ಕಾಮಿಡಿ ಟೈಮಿಂಗ್ ಅತ್ಯುತ್ತಮವಾಗಿದೆʼʼ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Anushka Shetty: ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ’ ಚಿತ್ರಕ್ಕೆ ‘ಸೂಪರ್ ಸ್ಟಾರ್’ ಅನುಷ್ಕಾ ಶೆಟ್ಟಿ ಪಡದೆ ಸಂಭಾವನೆ ಎಷ್ಟು?

ಮತ್ತೊಬ್ಬರು ʻʻದ್ವಿತೀಯಾರ್ಧ ಸಿನಿಮಾ ಚೆನ್ನಾಗಿದೆ. ಕ್ಲೈಮ್ಯಾಕ್ಸ್ ಭಾವನಾತ್ಮಕವಾಗಿದೆ. ಒಳ್ಳೆಯ ಚಿತ್ರʼʼ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ʻʻನನ್ನನ್ನು ಈ ಸಿನಿಮಾ ನಗುವಂತೆ ಮಾಡಿತು, ಪಾತ್ರಗಳಲ್ಲಿ ಮುಗ್ಧತೆಯೂ ಇತ್ತು. ಮುಖ್ಯವಾಗಿ ನವೀನ್‌. ಇಡೀ ತಂಡಕ್ಕೆ ನನ್ನ ಶುಭ ಹಾರೈಕೆʼʼಎಂದು ಬರೆದುಕೊಂಡಿದ್ದಾರೆ. ಮುರಳಿ ಶರ್ಮಾ, ಜಯಸುಧಾ ಮತ್ತು ತುಳಸಿ ಸೇರಿದಂತೆ ಇತರರು ನಟಿಸಿದ್ದಾರೆ. ಇದನ್ನು ಯುವಿ ಕ್ರಿಯೇಷನ್ಸ್ ನಿರ್ಮಿಸಿದ್ದು, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂನಲ್ಲಿ ಬಿಡುಗಡೆಯಾಗಿದೆ.

ರಾಧನ್ ಅವರ ಸಂಗೀತ ಸಂಯೋಜನೆ ಇದೆ. 3 ವರ್ಷಗಳ ನಂತರ ಮತ್ತೆ ತೆರೆಯ ಮೇಲೆ ಬಂದಿದ್ದಾರೆ ಸ್ವೀಟಿ ಅನುಷ್ಕಾ ಶೆಟ್ಟಿ. ಅವರು ಕಡೆಯದಾಗಿ 2020ರಲ್ಲಿ `ನಿಶಬ್ದಂ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಟ್ರೇಲರ್‌ಗೂ ಕೂಡ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು, ಹಾಸ್ಯಮಯ ಚಿತ್ರದ ಟ್ರೇಲರ್‌ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು.

ಈ ಸಿನಿಮಾ ನೋಡಿರುವ ಮೆಗಾಸ್ಟಾರ್‌ ಎಕ್ಸ್‌ (ಟ್ವಿಟರ್‌)ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ʼನಾನು ಮಿಸ್‌ ಶೆಟ್ಟಿ ಮಿಸ್ಟರ್‌ ಪೊಲಿಶೆಟ್ಟಿ ಸಿನಿಮಾ ನೋಡಿದೆ. ಇದೊಂದು ಅದ್ಭುತ ಕಾಮಿಡಿ ಸಿನಿಮಾ. ಸಿನಿಮಾದ ಆರಂಭದಿಂದ ಅಂತ್ಯದವರೆಗೆ ನನಗೆ ತುಂಬಾ ಇಷ್ಟ ಆಯ್ತುʼ ಎಂದು ಬರೆದುಕೊಂಡಿದ್ದರು.

Exit mobile version