Site icon Vistara News

Mission: Impossible: ಟಾಮ್ ಕ್ರೂಸ್ ನಟನೆಯ ಮಿಷನ್ ಇಂಪಾಸಿಬಲ್ 7 ಆನ್‌ಲೈನಲ್ಲಿ ಸೋರಿಕೆ!

Mission Impossible

ಬೆಂಗಳೂರು: ಮಿಷನ್ ಇಂಪಾಸಿಬಲ್ 7 ಅಥವಾ ಮಿಷನ್ ಇಂಪಾಸಿಬಲ್‌ ಡೆಡ್ ರಕೂನ್ ಪಾರ್ಟ್ 1 ಸಿನಿಮಾ (Mission: Impossible – Dead Reckoning Part One) ಜುಲೈ 12ರಂದು ವಿಶ್ವದ ಹಲವು ರಾಷ್ಟ್ರಗಳಲ್ಲಿ ಬಿಡುಗಡೆ ಆಗಿದೆ. ಟಾಮ್ ಕ್ರೂಸ್ (Tom Cruise) ನಟನೆಯ ಮಿಷನ್ ಇಂಪಾಸಿಬಲ್ ಸಿನಿಮಾಕ್ಕೆ ವಿಶ್ವದಾದ್ಯಂತ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಕ್ರಿಸ್ಟೊಫರ್ ಮೆಕ್ವೀರಿ (christopher mcquarrie) ನಿರ್ದೇಶನ ಮಿಷನ್ ಇಂಪಾಸಿಬಲ್ 7 ಭರ್ಜರಿ ಓಪನಿಂಗ್ ಪಡೆಯಲು ಸಿದ್ಧವಾಗಿದೆ. ಸಿನಿಮಾ ಘೋಷಣೆಯಾದಾಗಿನಿಂದ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿತ್ತು. ಆದರೆ ಇದೀಗ ಮಿಷನ್: ಇಂಪಾಸಿಬಲ್ ಡೆಡ್ ರೆಕನಿಂಗ್ ಭಾಗ ಒಂದು ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ವರದಿ ಪ್ರಕಾರ ಈ ಸಿನಿಮಾ HD ಗುಣಮಟ್ಟದಲ್ಲಿ ಲಭ್ಯವಾಗಿದೆ.

ಜನರು ಚಿತ್ರಮಂದಿರಗಳಲ್ಲಿ ಬರುವುದಕ್ಕಿಂತ ಮುಂಚೆಯೇ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದ್ದು, ಡೌನ್‌ಲೋಡ್‌ ಮಾಡಿಕೊಂಡು ಜನರ ಸಿನಿಮಾ ನೋಡುತ್ತಿದ್ದಾರೆ. ಈ ರೀತಿ ಪೈರೆಸಿ ಕಾಟಕ್ಕೆ ಹಲವು ಸಿನಿಮಾಗಳು ಬಲಿಯಾಗುತ್ತಲೇ ಇವೆ. ಅಂತಹ ಸೈಟ್‌ಗಳ ವಿರುದ್ಧ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆದರೆ ಅವು ಇನ್ನೂ ತಮ್ಮ ಅಭ್ಯಾಸವನ್ನು ಮುಂದುವರಿಸುತ್ತಲೇ ಇವೆ. MI 7 ಬಿಡುಗಡೆಯಾದ ತಕ್ಷಣ ಟೆಲಿಗ್ರಾಮ್‌ಗಳಲ್ಲಿ ಸೋರಿಕೆಯಾಗಿದೆ. ಆನ್‌ಲೈನ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹುಡುಕಲಾದ ಕೀವರ್ಡ್‌ಗಳಲ್ಲಿ ತಮಿಳು ರಾಕರ್ಸ್, ಪಾಗಲ್‌ ವರ್ಲ್ಡ್, ಫಿಲ್ಮಿಜಿಲ್ಲಾ, ಮೂವೀರುಲ್ಜ್, ಬೋಲಿ4ಯು, ಇತ್ಯಾದಿ ಸೈಟ್‌ಗಳಲ್ಲಿ ಸಿನಿಮಾ ಲೀಕ್‌ ಆಗಿದೆ. ವರದಿ ಪ್ರಕಾರ ಈ ಸಿನಿಮಾ HD ಗುಣಮಟ್ಟದಲ್ಲಿ ಲಭ್ಯವಾಗಿದ್ದು, 1080p, 720p, HDಯಲ್ಲಿ ಸಿನಿಮಾ ಸೋರಿಕೆಯಾಗಿದೆ.

ಇದನ್ನೂ ಓದಿ: Mission Impossible 7: ಮಿಷನ್‌ ಇಂಪಾಸಿಬಲ್‌ 7 ಟ್ರೈಲರ್‌ ಔಟ್;‌ ಹೇಗಿದೆ ನೋಡಿ ಟಾಮ್‌ ಕ್ರೂಸ್‌ ಆ್ಯಕ್ಷನ್

2500 ಸ್ಕ್ರೀನ್​ಗಳಲ್ಲಿ ತೆರೆಗೆ

ಮಿಷನ್ ಇಂಪಾಸಿಬಲ್ 7 ಅಥವಾ ಮಿಷನ್ ಇಂಪಾಸಿಬಲ್ ಡೆಡ್ ರಕೂನ್ ಪಾರ್ಟ್ 1 ಸಿನಿಮಾ ಜುಲೈ 12ರಂದು ವಿಶ್ವದ ಹಲವು ರಾಷ್ಟ್ರಗಳಲ್ಲಿ ಬಿಡುಗಡೆ ಆಗಿದ್ದು, ಅಂತೆಯೇ ಭಾರತದಲ್ಲಿಯೂ ಪ್ರದರ್ಶನ ಆರಂಭಿಸಿದೆ. ಭಾರತದ ಪ್ರಮುಖ ಮೆಟ್ರೋ ಸಿಟಿಗಳನ್ನು ಸೇರಿದಂತೆ ಹಲವು ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿಯೂ ಮಿಷನ್ ಇಂಪಾಸಿಬಲ್ 7 ಸಿನಿಮಾ ಬಿಡುಗಡೆಯಾಗಿದೆ. ಈ ಚಲನಚಿತ್ರವು ಭಾರತದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದೆ. ಭಾರತದಲ್ಲಿ ಚಿತ್ರವು ಥಿಯೇಟರ್‌ಗಳಿಗೆ ಪ್ರವೇಶಿಸುತ್ತಿದ್ದಂತೆ, ಸಿನಿಮಾ ಪೈರಸಿಗೆ ಒಳಗಾಗಿದೆ. ಸಿನಿಮಾದಲ್ಲಿ ಟಾಪ್ ಕ್ರೂಸ್ ಜತೆಗೆ ಹೇಲಿ ಅಟ್ವೆಲ್ (Hayley Atwell), ವಿಂಗ್ ರೇಮ್ಸ್‌ (Ving Rhames), ಸೈಮನ್ ಪೆಗ್ (Simon Pegg) ಇತರರು ನಟಿಸಿದ್ದಾರೆ.

ಮಿಷನ್ ಇಂಪಾಸಿಬಲ್ 7 ಸಿನಿಮಾವು ಭಾರತದಲ್ಲಿ ಸುಮಾರು 2500 ಸ್ಕ್ರೀನ್​ಗಳಲ್ಲಿ ತೆರೆಗೆ ಬಂದಿದೆ. ಬೆಂಗಳೂರು ಸೇರಿದಂತೆ ಹಲವು ಮೆಟ್ರೊಪಾಲಟಿನ್ ನಗರಗಳಲ್ಲಿ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಜೋರಾಗಿತ್ತು. ಬೆಂಗಳೂರಿನ ಹಲವು ಮಲ್ಟಿಪ್ಲೆಕ್ಸ್​ಗಳಲ್ಲಿ ಬೆಳಿಗ್ಗೆ 7, 8 ಗಂಟೆಗೆ ಶೋಗಳನ್ನು ಪ್ರಾರಂಭಿಸಲಾಗುತ್ತಿದ್ದು, ಹಲವು ಶೋಗಳು ಈಗಾಗಲೇ ಬುಕ್ ಆಗಿವೆ.

ಮಿಷನ್ ಇಂಪಾಸಿಬಲ್ ಸಿನಿಮಾ 2390 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣ ಮಾಡಲಾಗಿದೆ. ಸಿನಿಮಾವನ್ನು ಕ್ರಿಸ್ಟೊಫರ್ ಮೆಕ್ವೀರಿ ನಿರ್ದೇಶನ ಮಾಡಿದ್ದು ಇದು ಇವರ ಮೂರನೇ ಮಿಷನ್ ಇಂಪಾಸಿಬಲ್ ಸರಣಿ ಸಿನಿಮಾ. ಈ ಸಿನಿಮಾದ ಪಾರ್ಟ್ 2 ಸಹ ಬರಲಿದ್ದು ಅದನ್ನೂ ಮಾಡಿದ್ದಾರೆ. ಮಿಷನ್‌ ಇಂಪಾಸಿಬಲ್‌ ಸರಣಿಯ ಮೊದಲ ಸಿನಿಮಾ 1996ರಲ್ಲಿ ಬಿಡುಗಡೆಯಾಗಿ, ಜಗತ್ತಿನಾದ್ಯಂತ ಹಿಟ್‌ ಆಗಿತ್ತು. ಇದೇ ಸರಣಿಯ ನಂತರದ ಸಿನಿಮಾಗಳು ಕೂಡ ಮೆಚ್ಚಗೆಗೆ ಪಾತ್ರವಾಗಿವೆ.

Exit mobile version