Site icon Vistara News

Mission Majnu | `ಮಿಷನ್‌ ಮಜ್ನು’ ಸಿನಿಮಾಗೆ ಭಾರಿ ಮೆಚ್ಚುಗೆ : ಸಿದ್ಧಾರ್ಥ್ ಮಲ್ಹೋತ್ರಾ ನಟನೆಗೆ ಫ್ಯಾನ್ಸ್‌ ಫಿದಾ!

H D Devegowda

ಬೆಂಗಳೂರು : ನ್ಯಾಶನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ಹಾಗೂ ನಟ ಸಿದ್ಧಾರ್ಥ್ ಮಲ್ಹೋತ್ರಾ ಅಭಿನಯದ ʻಮಿಷನ್‌ ಮಜ್ನುʼ ಸಿನಿಮಾ (Mission Majnu) ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ಸಿನಿಮಾಗೆ ಪ್ರೇಕ್ಷಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಟ್ವಿಟರ್‌ನಲ್ಲಿ ಸಿನಿಮಾ ಬಗ್ಗೆ ವೀಕ್ಷಕರು ಶ್ಲಾಘಿಸಿದ್ದಾರೆ. ಸ್ಪೈ ಥ್ರಿಲರ್‌ ಕಥಾಹಂದರ ಹೊಂದಿರುವ ಈ ಸಿನಿಮಾದ ವಿಮರ್ಶೆ ಇಲ್ಲಿದೆ.

ʻʻಸಿನಿಮಾದಲ್ಲಿ ಸಿದ್ಧಾರ್ಥ ನಟನೆ ನೋಡಿ ಹೆಮ್ಮೆಪಡುವಂತಾಗಿದೆ. ಸಿದ್ಧಾರ್ಥ್ ಮಲ್ಹೋತ್ರಾ ನಿರ್ವಹಿಸಿದ ಪಾತ್ರ ಅಮೋಘʼʼಎಂದು ಬರೆದಿದ್ದಾರೆ.

ಇನ್ನೊಬ್ಬರು ʻʻಸಿನಿಮಾ ಥಿಯೇಟರ್‌ನಲ್ಲಿ ಬಿಡುಗಡೆಯಾಗಿದ್ದರೆ ಕತೆ ಬೇರೆಯಾಗುತ್ತಿತ್ತು! ಇದುವರೆಗಿನ ವೃತ್ತಿಜೀವನದ ಅತ್ಯುತ್ತಮ ಅಭಿನಯ ಸಿದ್ಧಾರ್ಥ್‌ ಅವರದ್ದುʼʼಎಂದಿದ್ದಾರೆ.

“ಅಮನ್‌ದೀಪ್ ಸಿಂಗ್ ಅವರ ಅದ್ಭುತ ಅಭಿನಯ, ಹಾಡುಗಳು, ಸಂಭಾಷಣೆಗಳು ಮತ್ತು ಕಥೆ ಎಲ್ಲವೂ ಚೆನ್ನಾಗಿದೆ. ಪ್ರತಿ ದೃಶ್ಯವನ್ನು ಚಿತ್ರಿಸಿದ ರೀತಿ, ಅಮೋಘʼʼಎಂದಿದ್ದಾರೆ.

ಇದನ್ನೂ ಓದಿ | Rashmika Mandanna | ಸವಾಲಿನ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ, ʻಮಿಷನ್‌ ಮಜ್ನು’ ತಯಾರಿ ಬಗ್ಗೆ ಬಾಯ್ಬಿಟ್ಟ ನಟಿ!

ʻʻಹೆಚ್ಚಿನ ಚಲನಚಿತ್ರಗಳಿಗಿಂತ ಭಿನ್ನವಾಗಿದೆ ಕ್ಲೈಮ್ಯಾಕ್ಸ್ ಭಾಗ ಇಷ್ಟವಾಯಿತು, ಕಣ್ಣೀರು ಬರಬಹುದು.ʼʼಎಂದಿದ್ದಾರೆ

ನೈಜ ಘಟನೆಗಳನ್ನು ಆಧರಿಸಿ ‘ಮಿಷನ್​ ಮಜ್ನು’ ಚಿತ್ರ ಮೂಡಿಬಂದಿದೆ. ರೆಟ್ರೋ ಶೈಲಿಯ ಮೇಕಿಂಗ್​ ಈ ಸಿನಿಮಾದಲ್ಲಿದೆ. ಸಿದ್ದಾರ್ಥ್​ ಮಲ್ಹೋತ್ರ ಅವರ ಅಭಿನಯಕ್ಕೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ಅನೇಕರು ಇದನ್ನು ಮಾಸ್ಟರ್​ ಪೀಸ್​ ಎಂದು ಕರೆದಿದ್ದಾರೆ.

ಈ ಸಿನಿಮಾದಲ್ಲಿ ನಟಿಸಿದ ಎಲ್ಲ ಕಲಾವಿದರ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಂಧ ಹುಡುಗಿಯ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಅವರ ನಟನೆಯನ್ನು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ. 

1970ರ ನಿಜ ಸಂಗತಿಗಳನ್ನು ಇಟ್ಟುಕೊಂಡು ನಿರ್ದೇಶಕ ಶಂತನು ಭಾಗ್ಚಿ ಸಿನಿಮಾ ಮಾಡಿದ್ದಾರೆ. ಭಾರತದ ಗುಪ್ತಚರ ಸಂಸ್ಥೆ ರಿಸರ್ಚ್‌ ಆ್ಯಂಡ್‌ ಅನಾಲಿಸಿಸ್‌ ವಿಂಗ್‌ (RAW)ನ ಗೂಢಚಾರಿಯು (ಸಿದ್ಧಾರ್ಥ್‌ ಮಲ್ಹೋತ್ರಾ) ಪಾಕಿಸ್ತಾನಕ್ಕೆ ತೆರಳಿ, ಅಲ್ಲಿ ಪಾಕಿಸ್ತಾನದ ಅಣ್ವಸ್ತ್ರ ತಯಾರಿಕೆ ಕುರಿತು ಮಾಹಿತಿ ಒದಗಿಸುತ್ತಾನೆ. ಇದೇ ವೇಳೆ ಆತ ಯುವತಿಯೊಬ್ಬಳ (ರಶ್ಮಿಕಾ) ಪ್ರೀತಿಯ ಬಲೆಗೆ ಬಿದ್ದು, ಆಕೆಯನ್ನು ಮದುವೆಯಾಗುತ್ತಾನೆ.

ಇದನ್ನೂ ಓದಿ | Mission Majnu Trailer | ರಶ್ಮಿಕಾ ಮಂದಣ್ಣ ಅಭಿನಯದ ಮಿಷನ್‌ ಮಜ್ನು ಚಿತ್ರದ ಟ್ರೈಲರ್‌ ಔಟ್, ರಾಜಿ ಸಿನಿಮಾ ನೆನೆದ ಜನ

Exit mobile version