ಬೆಂಗಳೂರು: ಬಾಲಿವುಡ್ ಡ್ಯಾನ್ಸಿಂಗ್ ಸ್ಟಾರ್ ನಟ ಮಿಥುನ್ ಚಕ್ರವರ್ತಿ (Mithun Chakraborty) ಅವರು ಸಾಮಾನ್ಯ ಜನರೊಂದಿಗೆ ನೇರವಾಗಿ ಸಂಪರ್ಕ ಸಾಧಿಸುತ್ತಾರೆ. ಈ ಕಾರಣದಿಂದಲೇ ಇವರಿಗೆ ಸ್ಟಾರ್ ಆಗಿದ್ದಾಗ ಸಿಗುತ್ತಿದ್ದ ಗೌರವ ಇಂದಿಗೂ ಸಿಗುತ್ತಿದೆ. ಇತ್ತೀಚೆಗೆ ಬಂಗಾಳಿ ಸಿನಿಮಾ ಪ್ರಜಾಪೋತಿ (Prajapoti) ಚಿತ್ರೀಕರಣಕ್ಕಾಗಿ ವಾರಣಾಸಿಯಲ್ಲಿ ಢಿಫರೆಂಟ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಅವಿಜಿತ್ ಸೇನ್ ನಿರ್ದೇಶನದ ಈ ಚಿತ್ರದ ಶೂಟಿಂಗ್ ವಾರಾಣಾಸಿಯಲ್ಲಿನ ವಿವಿಧ ನಗರಗಳ ಪ್ರದೇಶಗಳಲ್ಲಿ ನಡೆದಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ನಗರದಲ್ಲಿ ಚಿತ್ರೀಕರಿಸಲಾದ ಕೆಲವು ದೃಶ್ಯಗಳಲ್ಲಿ ನಟ ದೇವ್ ಅಧಿಕಾರಿ ಸಹ ಕಾಣಿಸಿಕೊಂಡಿದ್ದಾರೆ. ಗಂಗಾ ನದಿಯಲ್ಲಿ ಪವಿತ್ರ ಸ್ನಾನ, ದೋಣಿ ವಿಹಾರ ಹೀಗೆ ಚಿತ್ರಕ್ಕಾಗಿ ತೆಗೆದ ಕೆಲವು ಸನ್ನಿವೇಶಗಳ ಪೋಟೋಗಳು ಹರಿದಾಡುತ್ತಿವೆ.
ಇದನ್ನೂ ಓದಿ | ಪಶ್ಚಿಮ ಬಂಗಾಳ ಸರ್ಕಾರ ಸಂಕಷ್ಟದಲ್ಲಿ?; 38 ಶಾಸಕರ ಬಗ್ಗೆ ಬ್ರೇಕಿಂಗ್ ಸುದ್ದಿ ಕೊಟ್ಟ ಮಿಥುನ್ ಚಕ್ರವರ್ತಿ
ನಿರ್ಮಾಪಕರಾದ ರತಿ ಶಂಕರ್ ತ್ರಿಪಾಠಿ ಮಾತನಾಡಿ “ಮಿಥುನ್ ಚಕ್ರವರ್ತಿ ಅವರು ಈ ಸಿನಿಮಾದಲ್ಲಿ ತಮ್ಮ ಮಗನನ್ನು ವಾರಣಾಸಿಗೆ ಕರೆತರುವ ಪಾತ್ರದ ಮೂಲಕ ಆಧ್ಯಾತ್ಮಿಕ ವ್ಯಕ್ತಿಯಾಗಿ ನಟಿಸಿದ್ದಾರೆ” ಎಂದು ಕಥೆಯ ಬಗ್ಗೆ ಹೇಳಿಕೊಂಡಿದ್ದಾರೆ.
ಡಿಸ್ಕೋ ಡ್ಯಾನ್ಸರ್ ಖ್ಯಾತಿಯ ನಟ ಇದೀಗ ಸಾಂಪ್ರದಾಯಿಕ ಕುರ್ತಾ-ಪೈಜಾಮಾವನ್ನು ಧರಿಸಿ ಹೊಸ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಅಭಿಮಾನಿಗಳು ಕಮೆಂಟ್ ಮೂಲಕ ಬೇಗ ಸಿನಿಮಾ ರಿಲೀಸ್ ಮಾಡಿ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಸ್ಸಿ ಘಾಟ್ನಲ್ಲಿ ಕೆಲವು ದೃಶ್ಯಗಳನ್ನು ಹಾಗೂ ಗಂಗಾ ಸ್ನಾನದ ಕೆಲವು ಸೀನ್ಗಳನ್ನು ಶೂಟ್ ಮಾಡಲಾಗಿದೆ. ಚಿತ್ರೀಕರಣದ ವೇಳೆ ನಟ ಬೋಟ್ ರೈಡ್ ಕೂಡ ಎಂಜಾಯ್ ಮಾಡಿದ್ದಾರೆ.
ವಾರಣಾಸಿ ನಂತರ ಲಂಕಾ ಪ್ರದೇಶದ ಪ್ರಸಿದ್ಧ ಬನಾರಸಿ ಪಾನ್ ಅಂಗಡಿ ಮತ್ತು ಲಸ್ಸಿ ಅಂಗಡಿಗೆ ಶಿಫ್ಟ್ ಮಾಡಲಾಗಿದೆ. ವಾರಣಾಸಿ ಸಿಟಿ ರೈಲ್ವೇ ನಿಲ್ದಾಣದಲ್ಲಿ ಮಿಥುನ್ ಚಕ್ರವರ್ತಿ ಮತ್ತು ದೇವ್ ಅಧಿಕಾರಿಯನ್ನು ಒಳಗೊಂಡ ದೃಶ್ಯವನ್ನು ಶೂಟಿಂಗ್ ಮಾಡಲಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.
ಇದನ್ನೂ ಓದಿ | Mithilesh Chaturvedi | ಬಾಲಿವುಡ್ ಖ್ಯಾತ ನಟ ಮಿಥಿಲೇಶ್ ಚತುರ್ವೇದಿ ನಿಧನ