Site icon Vistara News

Kichcha Sudeep: ಸಂಧಾನಕ್ಕೆ ನಾನು ರೆಡಿ ಎಂದು ಸುದೀಪ್ ವಿರುದ್ಧ ಬೀದಿಗಿಳಿದ ನಿರ್ಮಾಪಕ ಕುಮಾರ್‌!

MN Kumar strike

ಬೆಂಗಳೂರು; ಕಿಚ್ಚ ಸುದೀಪ್ (Kichcha Sudeep) ಹಾಗೂ ನಿರ್ಮಾಪಕ ಎಂಎನ್​ ಕುಮಾರ್ ಜಟಾಪಟಿ ಮುಂದುವರಿದಿದೆ. ಕಾಲ್​ಶೀಟ್ ನೀಡಿಲ್ಲ ಎಂದು ಕುಮಾರ್ ಆರೋಪಿಸಿದ್ದರು. ಆದರೆ, ಸುದೀಪ್ ಅವರು ಇದನ್ನು ತಳ್ಳಿ ಹಾಕಿದ್ದರು. ಈಗ ಅವರು ಕುಮಾರ್ ವಿರುದ್ಧ ಕೋರ್ಟ್​ ಮೆಟ್ಟಿಲೇರಿದ್ದಾರೆ. ಈ ಬೆನ್ನಲ್ಲೇ ಕುಮಾರ್ ಅವರು ಸುದೀಪ್ ವಿರುದ್ಧ ಫಿಲ್ಮ್ ಚೇಂಬರ್ ಮುಂದೆ ಪ್ರತಿಭಟನೆ ಆರಂಭಿಸಿದ್ದಾರೆ.ನಿರ್ಮಾಪಕರ ಸಂಘದ ಮಾಜಿ ಅಧ್ಯಕ್ಷ ಪ್ರವೀಣ್ ಕುಮಾರ್ ಮೊದಲಾದವರು ಸಾಥ್‌ ಕೊಟ್ಟಿದ್ದಾರೆ. ʻʻನಾನು ಸುದೀಪ್ ಅವರ ಬಗ್ಗೆ ಕೆಟ್ಟದಾಗಿ ಮಾತಾಡಿಲ್ಲ. ನನಗೆ ಸರಿಯಾದ ಸ್ಪಂದನೆ ಸಿಕ್ಕಿಲ್ಲʼʼ ಎಂದು ನಿರ್ಮಾಪಕ ಕುಮಾರ್ ಮನವಿ ಮಾಡಿದ್ದಾರೆ.

ನಿರ್ಮಾಪಕ ಕುಮಾರ್ ಈ ಬಗ್ಗೆ ಮಾತನಾಡಿ ʻʻನಾನು ಯಾವ ಕಲಾವಿದರ ಬಳಿ ಸಹಾಯ ಕೇಳಿಲ್ಲ. ಸಾಲ ಮಾಡಿಲ್ಲ. ನನ್ನ ಹಣವನ್ನು ನಾನು ಕೇಳುತ್ತಿದ್ದೇನೆ. ಸುದೀಪ್ ಅವರ ಬಗ್ಗೆ ನಾನು ಎಲ್ಲಿಯೂ ಕೆಟ್ಟದಾಗಿ ‌ಮಾತನಾಡಿಲ್ಲ. ನಮಗೆ ಸರಿಯಾದ ಸ್ಪಂದನೆ‌ ಸಿಗುತ್ತಿಲ್ಲ ಎಂದಷ್ಟೇ ಹೇಳಿದ್ದೇನೆ. ಸಮಸ್ಯೆ ಬಗೆಹರಿಸಿಕೊಳ್ಳುವ ತನಕ ಇಲ್ಲಿಯೇ ಧರಣಿ ಮಾಡುತ್ತೇನೆ’ ಎಂದು ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: Kichcha Sudeep : ನಿರ್ಮಾಪಕರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಕಿಚ್ಚ ಸುದೀಪ್; ನಟನ ಫಸ್ಟ್‌ ರಿಯಾಕ್ಷನ್‌!

ʻʻವಾಣಿಜ್ಯ ಮಂಡಳಿಯಿಂದ ಕೆಲಸ ಆಗಿಲ್ಲ ಕೋರ್ಟ್‌ಗೆ ಹೋಗಬೇಕು. ಸಮಸ್ಯೆ ಬಗೆಹರಿಸಿಕೊಳ್ಳುವ ತನಕ ಇಲ್ಲಿಯೇ ಧರಣಿ ಕುಳಿತುಕೊಳ್ಳುತ್ತೇನೆ. ನಾವೂ ನಿರ್ಮಾಪಕರು, ಸಾಕಷ್ಟು‌ ಜನರನ್ನು ಬೆಳೆಸಿದ್ದೇವೆ. ಯಾರಿಗೂ ಅಗೌರವ ಆಗಬಾರದು, ಗೌರವ ಉಳಿಯಬೇಕು. ನನಗೆ ತೊಂದರೆಯಾದಾಗ ನಾನು ಯಾರ ಮುಖಾಂತರ ಕೇಳಬೇಕು. ಮಾಧ್ಯಮದವರ ಮುಂದೆಯೇ ಕೇಳಬೇಕು. ದಾಖಲೆಗಳು ಖಂಡಿತ ಇವೆ, ಕೊಡುತ್ತೇನೆ. ರಾಜಿ ಸಂಧಾನಕ್ಕೆ ನಾವೂ ತಯಾರಿದ್ದೇವೆʼʼ ಎಂದರು.

ʻʻಪ್ರೀತಿಯಿಂದ ನಡೆದರೆ ಮಾತ್ರ ವ್ಯವಹಾರ. ಯಾರನ್ನು, ಯಾವುದಕ್ಕೂ ಬಲವಂತ ಮಾಡುವುದಕ್ಕೆ ಆಗಲ್ಲ. ನಮ್ಮಲ್ಲಿರುವ ಹಿರಿಯರು ಅವರಿಗೆ ಮಾರ್ಗದರ್ಶನ ನೀಡಬೇಕು. ಶಿವಣ್ಣ ಭೇಟಿಗೆ ನಮ್ಮ ಅಧ್ಯಕ್ಷರು ಬಂದ ಮೇಲೆ ನಿರ್ಧಾರ ಮಾಡುತ್ತೇವೆ, ಸೂರಪ್ಪ ಬಾಬು ಹಿಂದೆ ನಿಂತು ಮಾಡಿಸುತ್ತಿರುವ ವಿಚಾರ ಸುಳ್ಳು. ಬಡ್ಡಿ ಕಟ್ಟೋದು ನಿರ್ಮಾಪಕರೆ. ನಮ್ಮ ಹಣಕ್ಕೆ ನಾವೇ ಬಡ್ಡಿ ಕಟ್ಟುವುದಕ್ಕೆ ಇಷ್ಟ ಪಡುತ್ತೇವಾ. ಕಾರಣಾಂತರದಿಂದ ತಡ ಆಗಿರುತ್ತದೆʼʼಎಂದರು.

Exit mobile version