Site icon Vistara News

Actor Mohanlal | ಮೋಹನ್‌ಲಾಲ್‌ ಅಭಿನಯದ ʻಅಲೋನ್‌ʼ ಸಿನಿಮಾ ಟ್ರೈಲರ್‌ ಔಟ್‌: ರಿಲೀಸ್‌ ಡೇಟ್‌ ಅನೌನ್ಸ್‌!

Mohanlal

ಬೆಂಗಳೂರು: ಮಾಲಿವುಡ್‌ ಸೂಪರ್‌ ಸ್ಟಾರ್‌ ಮೋಹನ್‌ಲಾಲ್‌ (Mohanlal) ಅಭಿನಯದ ʻಅಲೋನ್‌ʼ ಸಿನಿಮಾದ ಟ್ರೈಲರ್‌ ಬಿಡುಗಡೆಗೊಂಡಿದೆ. ಈ ಮೂಲಕ ಹೊಸ ವರ್ಷಕ್ಕೆ ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಶಾಜಿ ಕೈಲಾಸ್ ನಿರ್ದೇಶನದ ಥ್ರಿಲ್ಲರ್ ಸಿನಿಮಾ ಇದಾಗಿದ್ದು, ಕಾಳಿದಾಸ್ ಎಂಬ ಪಾತ್ರದ ಮೂಲಕ ಕಾಣಿಸಿಕೊಳ್ಳುತ್ತಿದ್ದಾರೆ ನಟ ಮೋಹನ್‌ಲಾಲ್‌.

ಇಡೀ ಚಿತ್ರದಲ್ಲಿ ಒಂದೇ ಪಾತ್ರ!
ಇಡೀ ಚಿತ್ರದಲ್ಲಿ ಒಂದೇ ಒಂದು ಪಾತ್ರವನ್ನು ಹೊಂದಿರುವುದು ಇನ್ನೂ ವಿಶೇಷ. ಸಪೋರ್ಟಿಂಗ್‌ ಪಾತ್ರಗಳು ಕೇವಲ ಧ್ವನಿ ಮೂಲಕ ಗುರುತಿಸಿಕೊಳ್ಳುತ್ತವೆ. ʻಅಲೋನ್ʼ ಜನವರಿ 26 ರಂದು ಥಿಯೇಟರ್‌ಗಳಲ್ಲಿ ಗ್ರ್ಯಾಂಡ್ ರಿಲೀಸ್‌ ಆಗಲಿದೆ.

ಇತ್ತೀಚೆಗೆ ನಟ ಮೋಹನ್ ಲಾಲ್ ʻಮಾನ್‌ಸ್ಟರ್‌ʼ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಅಷ್ಟೇನೂ ಯಶಸ್ವಿಯಾಗಲಿಲ್ಲ ಈ ಸಿನಿಮಾ. ಇದೀಗ ʻಅಲೋನ್‌ʼ ಸಿನಿಮಾದ ಟ್ರೈಲರ್‌ ನೋಡಿ ಮೋಹನ್‌ ಲಾಲ್‌ ಅಭಿಮಾನಿಗಳು ಥ್ರಿಲ್‌ ಆಗಿದ್ದಾರೆ. ಒಂದು ನಿಮಿಷ 55 ಸೆಕೆಂಡುಗಳನ್ನು ಹೊಂದಿರುವ ಟ್ರೈಲರ್‌ ಅನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ನಟ.

ಇದನ್ನೂ ಓದಿ | Mohanlal New Film | ಮಲಯಾಳಂ ಸೂಪರ್‌ಸ್ಟಾರ್‌ ಮೋಹನ್‌ಲಾಲ್‌ ಹೊಸ ಸಿನಿಮಾ ವೃಷಭ, ಇದು ಅಪ್ಪ-ಮಗನ ಕಥೆ

ಟ್ರೈಲರ್‌ ನೋಡುವಾಗ ಕಾಳಿದಾಸ್‌ ಪಾತ್ರಧಾರಿ ಕೋಣೆಯಲ್ಲಿ ಸಿಲುಕಿಕೊಂಡು, ಕೆಲವು ಚಟುವಟಿಕೆಗಳು ನಡೆಸುತ್ತಾರೆ. ಆತ್ಮಗಳೊಂದಿಗೆ ಮಾತನಾಡಿದಂತೆ ಮತ್ತು ಪರಿಸ್ಥಿತಿಯಿಂದ ಹೊರಬರಲು ಪ್ರಯತ್ನಿಸುತ್ತಿದ್ದಾರೆಂದು ತೋರಿಸಲಾಗಿದೆ. ಚಿತ್ರದಲ್ಲಿ ಮೋಹನ್ ಲಾಲ್ ಪ್ರಮುಖ ಪಾತ್ರ ನಿರ್ವಹಿದ್ದರೆ, ಪೃಥ್ವಿರಾಜ್, ಮಂಜು ವಾರಿಯರ್, ಸಿದ್ಧಿಕ್‌ ಮತ್ತು ಮಲ್ಲಿಕಾ ಸುಕುಮಾರನ್ ಅವರ ಧ್ವನಿಗಳು ಈ ಚಿತ್ರಕ್ಕಿದೆ.

ನಿರ್ದೇಶಕ ಶಾಜಿ ಕೈಲಾಸ್ ಮತ್ತು ಮೋಹನ್ ಲಾಲ್ 12 ವರ್ಷಗಳ ನಂತರ ಈ ಚಿತ್ರದ ಮೂಲಕ ಮತ್ತೆ ಕೈಜೋಡಿಸುತ್ತಿದ್ದಾರೆ. ಚಿತ್ರದ ಕಥೆಯನ್ನು ರಾಜೇಶ್ ಜಯರಾಮನ್ ಬರೆದಿದ್ದಾರೆ ಮತ್ತು ಆಶೀರ್ವಾದ್ ಸಿನಿಮಾಸ್ ಅಡಿಯಲ್ಲಿ ಆಂಟೋನಿ ಪೆರುಂಬವೂರ್ ನಿರ್ಮಿಸಿದ್ದಾರೆ. ಅಭಿನಂದನ್ ರಾಮಾನುಜಂ ಮತ್ತು ಪ್ರಮದ್ ಕೆ ಪಿಲ್ಲರ್ ಛಾಯಾಗ್ರಹಣವನ್ನು ನಿರ್ವಹಿಸಿದರೆ, ಡಾನ್ ಮ್ಯಾಕ್ಸ್ ಮತ್ತು 4 ಮ್ಯೂಸಿಕ್ಸ್ ಚಿತ್ರದ ಸಂಕಲನ ಮತ್ತು ಸಂಗೀತವನ್ನು ನಿಭಾಯಿಸುತ್ತಿದ್ದಾರೆ.

ಇದನ್ನೂ ಓದಿ | Christmas 2022 | ಸೆಲೆಬ್ರಿಟಿಗಳ ಕ್ರಿಸ್ಮಸ್ ಸಂತಸದ ಕ್ಷಣ ಹೇಗಿತ್ತು? ಇಲ್ಲಿದೆ ಚಿತ್ರ ಸಹಿತ ಮಾಹಿತಿ

Exit mobile version