Site icon Vistara News

Drishyam 3 | ಸೆಟ್ಟೇರಲಿದೆ ದೃಶ್ಯಂ 3: ಮೂರನೇ ಭಾಗದಲ್ಲಿ ಕತೆಯ ಅಂತ್ಯ?

Drishyam 3

ಬೆಂಗಳೂರು: ಒಂಬತ್ತು ವರ್ಷಗಳ ಹಿಂದೆ ಬಿಡುಗಡೆಗೊಂಡಿದ್ದ ನಟ ಮೋಹನ್‌ ಲಾಲ್‌ ಅಭಿನಯದ ಚಿತ್ರ ದೃಶ್ಯಂ (Drishyam 3) ಪ್ರೇಕ್ಷಕರ ಮನ ಗೆದ್ದಿತ್ತು. ಕ್ರೈಂ ಥ್ರಿಲರ್‌ ಚಿತ್ರ ಇದಾಗಿದ್ದು, ದೃಶ್ಯಂ 3 ಯಾವಾಗ ಬರುತ್ತೋ ಎಂದು ಸಿನಿರಸಿಕರು ಕಾಯುತ್ತಿದ್ದರು. ಈ ಬಗ್ಗೆ ನಿರ್ದೇಶಕ ಜಿತು ಜೋಸೆಫ್‌ ಅವರು ಭಾಗ 2 ಕ್ಲೈ ಮ್ಯಾಕ್ಸ್‌ನಲ್ಲಿ ಸುಳಿವು ನೀಡಿದ್ದರು. ಇದೀಗ ದೃಶ್ಯ 3 ಬರುವುದು ಫಿಕ್ಸ್‌ ಆಗಿದೆ.

ನಿರ್ಮಾಪಕ ಆಂಟೋನಿ ಪೆರುಂಬಾವೂರ್ ಅವರು ಮಜವಿಲ್ ಎಂಟರ್‌ಟೈನ್‌ಮೆಂಟ್ ಅವಾರ್ಡ್ಸ್‌ನಲ್ಲಿ ದೃಶ್ಯಂ ಭಾಗ 3 ಸಿನಿಮಾ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗಿದೆ.

ದೃಶ್ಯಂ ಸಿನಿಮಾ ಬಾಕ್ಸ್‌ ಆಪೀಸ್‌ನಲ್ಲಿ ಸಖತ್‌ ಸದ್ದು ಮಾಡಿತ್ತು. ಯಶಸ್ವಿ ಪ್ರದರ್ಶನ ಕಂಡಿತ್ತು. ನಂತರ ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಸೇರಿದಂತೆ ಇತರ ನಾಲ್ಕು ಭಾಷೆಗಳಲ್ಲಿ ರೀಮೇಕ್ ಆಗಿತ್ತು.

ದೃಶ್ಯಂ 3 ಪೋಸ್ಟರ್‌ನಲ್ಲಿ ಮೋಹನ್‌ ಲಾಲ್‌ ಅವರ ಕೈಯಲ್ಲಿ ಕೋಳವಿದೆ. ಪೋಸ್ಟರ್‌ನಲ್ಲಿ ಕನ್‌ಕ್ಲೂಸನ್‌ ಎಂದು ಬರೆದ ಹಿನ್ನೆಲೆಯಲ್ಲಿ ಮೂರನೇ ಭಾಗದಲ್ಲಿ ಮೂಲ ಕತೆಗೆ ಅಂತ್ಯ ಹಾಡುವ ಸಾಧ್ಯತೆಯಿದೆ.

ಕನ್ನಡದಲ್ಲಿಯೂ ದೃಶ್ಯಂ ಸಿನಿಮಾ ಭಾರಿ ಯಶಸ್ಸು ಕಂಡಿತ್ತು. ಕ್ರೇಜಿ ಸ್ಟಾರ್‌ ರವಿಚಂದ್ರನ್‌ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಪಿ. ವಾಸು ನಿರ್ದೇಶಿಸಿದ್ದ ಈ ಸಿನಿಮಾದಲ್ಲಿ ರವಿಚಂದ್ರನ್​, ನವ್ಯಾ ನಾಯರ್, ಆರೋಹಿ ನಾರಾಯಣ್, ಉನ್ನತಿ, ಅಚ್ಯುತ್ ಕುಮಾರ್ ಇನ್ನಿತರರು ನಟಿಸಿದ್ದರು. 

ಇದನ್ನೂ ಓದಿ | Mohanlal New Film | ಮಲಯಾಳಂ ಸೂಪರ್‌ಸ್ಟಾರ್‌ ಮೋಹನ್‌ಲಾಲ್‌ ಹೊಸ ಸಿನಿಮಾ ವೃಷಭ, ಇದು ಅಪ್ಪ-ಮಗನ ಕಥೆ

Exit mobile version