Site icon Vistara News

Monsoon Raaga | ಸೆನ್ಸಾರ್ ಪಡೆದ ಡಾಲಿ-ರಚಿತಾ ಅಭಿನಯದ ಮಾನ್ಸೂನ್ ರಾಗ, ಬಿಡುಗಡೆಗೆ ರೆಡಿ!

Monsoon Raaga

ಬೆಂಗಳೂರು: ಡಾಲಿ ಧನಂಜಯ ಹಾಗೂ ರಚಿತಾ ರಾಮ್ ನಟನೆಯ ಮಾನ್ಸೂನ್ ರಾಗ ಸಿನಿಮಾ (Monsoon Raaga) ವೀಕ್ಷಿಸಿದ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ನೀಡಿ ಬಿಡುಗಡೆಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಶೀಘ್ರದಲ್ಲೇ ಸಿನಿಮಾ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿದೆ.

ಚಿತ್ರದ ಟ್ರೈಲರ್‌ ನೋಡುವಾಗ ಮಳೆಯ ಹಿನ್ನೆಲೆಯಲ್ಲಿ ಸಾಗಿದ್ದು, ಕೆಟ್ಟ ಜಗತ್ತಿನಲ್ಲಿ ಪ್ರೀತಿ ಅರಳುವ ಕಥಾ ಹಂದರವನ್ನು ಹೊಂದಿರುವಂತೆ ಇದೆ. ಒಂದು ಕಡೆ ಡಾಲಿ ಧನಂಜಯ್‌ ಹಾಗೂ ರಚಿತಾರಾಮ್‌ ಕಾಣಿಸಿಕೊಂಡರೆ ಇನ್ನೊಂದೆಡೆ ಅಚ್ಯುತ್‌ ಕುಮಾರ್‌ ಹಾಗೂ ಸುಹಾಸಿನಿ ಅವರ ಪಾತ್ರ ಅಚ್ಚಳಿಯುವಂತೆ ಇದೆ. ವಿಖ್ಯಾತ್‌ ನಿರ್ಮಿಸಿರುವ ಈ ಚಿತ್ರವನ್ನು ರವೀಂದ್ರನಾಥ್‌ ನಿರ್ದೇಶಿಸಿದ್ದಾರೆ. ಇದೇ ಆಗಸ್ಟ್ 19ಕ್ಕೆ ಚಿತ್ರ ತೆರೆ ಕಾಣಲಿದೆ.

ಇದನ್ನೂ ಓದಿ | Once Upon a Time In Jamaligudda | ಜಮಾಲಿಗುಡ್ಡ ಮೆಲೋಡಿ ಹಾಡಿನ ಪ್ರೋಮೊ ಮಾಡ್ತಿದೆ ಮೋಡಿ!

ಚಿತ್ರದಲ್ಲಿ ರಚಿತಾ ರಾಮ್‌ ಲೈಂಗಿಕ ಕಾರ್ಯಕರ್ತೆಯಾಗಿ ಕಾಣಿಸಿಕೊಂಡಿದ್ದಾರೆ. ಮಾನ್ಸೂನ್‌ ರಾಗ ಸಿನಿಮಾ 80% ಮಳೆಯಲ್ಲಿಯೇ ಚಿತ್ರೀಕರಣವಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಅನೂಪ್ ಸೀಳಿನ್ ಸಂಗೀತ ನಿರ್ದೇಶನವಿದ್ದು, ಕೇಳುಗರಿಗೆ ಮುದ ನೀಡುವಂತಿದೆ. ಇದೀಗ ಟ್ರೈಲರ್ ಗೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿರುವ ಹಿನ್ನೆಲೆಯಲ್ಲಿ ಚಿತ್ರತಂಡ ಪ್ರೇಕ್ಷಕರ ಟ್ರೈಲರ್ ರೆಸ್ಪಾನ್ಸ್‌ ವಿಡಿಯೊವನ್ನು ಬಿಡುಗಡೆ ಮಾಡಿದೆ.

ಇದನ್ನೂ ಓದಿ | Hoysala Movie | ಡಾಲಿ ಧನಂಜಯ ಅಭಿನಯದ ಹೊಯ್ಸಳ ಸೆಟ್‌ಗೆ ಸ್ಯಾಂಡಲ್‌ವುಡ್‌ ಪದ್ಮಾವತಿ ರಮ್ಯಾ ಪ್ರತ್ಯಕ್ಷ

Exit mobile version