Site icon Vistara News

Monsoon Raaga | ಮೇಘರಾಜನ ಮೆಲೋಡಿ ಹಾಡಿಗೆ ಮನಸೋತ ಫ್ಯಾನ್ಸ್: ಲಿರಿಕಲ್‌ ವಿಡಿಯೊ ಔಟ್‌!

Monsoon Raaga

ಬೆಂಗಳೂರು: ಡಾಲಿ ಧನಂಜಯ ಹಾಗೂ ರಚಿತಾ ರಾಮ್ ನಟನೆಯ ಮಾನ್ಸೂನ್ ರಾಗ (Monsoon Raaga) ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗಿರುವ ಬೆನ್ನಲ್ಲೇ ‘ಮೇಘರಾಜನ ರಾಗ’ ಹಾಡಿನ ಲಿರಿಕಲ್‌ ವಿಡಿಯೊ ಬಿಡುಗಡೆ ಮಾಡಿದೆ. ʻʻಮೇಘರಾಜನ ರಾಗ ಹನಿಗಳಾದಂತೆ, ಧಮನಿ ಧಮನಿಯೂ ಸೇರಿ ದನಿಗಳಾದಂತೆʼʼ ಹಾಡು ಪ್ರೇಕ್ಷಕರ ಮನ ಗೆದ್ದಿದೆ.

ಈ ಗೀತೆಯನ್ನು ಕೆ. ಕಲ್ಯಾಣ್‌ ಬರೆದಿದ್ದು, ಅನೂಪ್‌ ಸಿಳೀನ್‌ ಸಂಗೀತ ನಿರ್ದೇಶನ ಹಾಗೂ ಅರವಿಂದ್‌ ವೇಣುಗೋಪಾಲ್‌ ಅವರ ಕಂಠಸಿರಿಯಲ್ಲಿ ಮೂಡಿಬಂದಿದೆ. ಇಡೀ ಗೀತೆಯಲ್ಲಿ ಹೊಸ ಭಾವ ತುಂಬಿಕೊಂಡಿದೆ ಎಂದು ಹೇಳಲಾಗಿದೆ. ಈ ಹಾಡಿನಲ್ಲಿ ಅನೂಪ್‌ ಸಿಳೀನ್‌ ರೆಟ್ರೋ ಸ್ಟೈಲ್‌ ಟಚ್‌ ನೀಡಿದ್ದು, ಇಡೀ ಹಾಡಿನಲ್ಲಿ ಲೈವ್‌ ಇನ್ಸ್ಟ್ರುಮೆಂಟ್‌ ಅನ್ನು ಬಳಸಿಕೊಂಡಿದ್ದಾರೆ.

ಸಿನಿಮಾ (Monsoon Raaga) ವೀಕ್ಷಿಸಿದ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ನೀಡಿ ಬಿಡುಗಡೆಗೆ ಗ್ರೀನ್ ಸಿಗ್ನಲ್ ಕೊಟ್ಟಿತ್ತು. ಇದರ ಬೆನ್ನಲ್ಲೆ ಸಿನಿಮಾ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಘೋಷಿಸಿದೆ. ಸೆಪ್ಟೆಂಬರ್ 16ಕ್ಕೆ ಸಿನಿಮಾ ರಿಲೀಸ್‌ ಆಗಲಿದೆ.

ಈ ಹಿಂದೆ ಚಿತ್ರದ ಟ್ರೈಲರ್‌ ಸಖತ್‌ ಸೌಂಡ್‌ ಮಾಡಿತ್ತು. ಟ್ರೈಲರ್‌ ನೋಡುವಾಗ ಚಿತ್ರ ಮಳೆಯ ಹಿನ್ನೆಲೆಯಲ್ಲಿ ಸಾಗುವ ಕಥೆಯನ್ನು ಹೊಂದಿರುವಂತೆ ಕಂಡುಬರುತ್ತಿದೆ. ಕೆಟ್ಟ ಜಗತ್ತಿನಲ್ಲಿ ಪ್ರೀತಿ ಅರಳುವ ಕಥಾ ಹಂದರವಿದೆ. ಒಂದು ಕಡೆ ಡಾಲಿ ಧನಂಜಯ್‌ ಹಾಗೂ ರಚಿತಾರಾಮ್‌ ಕಾಣಿಸಿಕೊಂಡರೆ ಇನ್ನೊಂದೆಡೆ ಅಚ್ಯುತ್‌ ಕುಮಾರ್‌ ಹಾಗೂ ಸುಹಾಸಿನಿ ಅವರ ಪಾತ್ರ ಕಾಡುತ್ತದೆ. ವಿಖ್ಯಾತ್‌ ನಿರ್ಮಿಸಿರುವ ಈ ಚಿತ್ರವನ್ನು ರವೀಂದ್ರನಾಥ್‌ ನಿರ್ದೇಶಿಸಿದ್ದಾರೆ.

ಇದನ್ನೂ ಓದಿ | Monsoon Raaga | ಸೆನ್ಸಾರ್ ಪಡೆದ ಡಾಲಿ-ರಚಿತಾ ಅಭಿನಯದ ಮಾನ್ಸೂನ್ ರಾಗ, ಬಿಡುಗಡೆಗೆ ರೆಡಿ!

ಚಿತ್ರದಲ್ಲಿ ರಚಿತಾ ರಾಮ್‌ ಲೈಂಗಿಕ ಕಾರ್ಯಕರ್ತೆಯಾಗಿ ಕಾಣಿಸಿಕೊಂಡಿದ್ದಾರೆ. ಮಾನ್ಸೂನ್‌ ರಾಗ ಸಿನಿಮಾ ಶೇ. 80ರಷ್ಟು ಮಳೆಯಲ್ಲಿಯೇ ಚಿತ್ರೀಕರಣವಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಇದನ್ನೂ ಓದಿ | Monsoon Raaga | ಡಾಲಿ-ರಚಿತಾ ಅಭಿನಯದ ಮಾನ್ಸೂನ್ ರಾಗ ಸಿನಿಮಾ ಟ್ರೈಲರ್‌ಗೆ ಭಾರಿ ಮೆಚ್ಚುಗೆ

Exit mobile version