Site icon Vistara News

Monsoon Raaga | ಡಾಲಿ- ರಚಿತಾ ಅಭಿನಯದ ಮಾನ್ಸೂನ್ ರಾಗ ಒಟಿಟಿಗೆ: ಡೇಟ್‌ ರಿವೀಲ್‌!

Monsoon Raaga (OTT)

ಬೆಂಗಳೂರು: ನಟ ಡಾಲಿ ಧನಂಜಯ್‌ ಹಾಗೂ ನಟಿ ರಚಿತಾ ರಾಮ್‌ ಕಾಂಬಿನೇಷನ್‌ ಚಿತ್ರ ಮಾನ್ಸೂನ್‌ ರಾಗ (Monsoon Raaga) ಸೆ. 16ರಂದು ತೆರೆ ಕಂಡಿತ್ತು. ಇದೀಗ ಒಟಿಟಿಗೆ ಬರಲು ಸಜ್ಜಾಗಿದೆ. ಜೀ 5 ಒಟಿಟಿಯಲ್ಲಿ ಡಿಸೆಂಬರ್‌ 9ರಿಂದ ಪ್ರಸಾರವಾಗಲಿದೆ. ಜೀ 5 ಟ್ವೀಟ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದೆ.

ಒಂದು ಕಡೆ ಡಾಲಿ ಧನಂಜಯ್‌ ಹಾಗೂ ರಚಿತಾ ರಾಮ್‌ ಕಾಣಿಸಿಕೊಂಡರೆ ಇನ್ನೊಂದೆಡೆ ಅಚ್ಯುತ್‌ ಕುಮಾರ್‌ ಹಾಗೂ ಸುಹಾಸಿನಿ ಪಾತ್ರ ಸಹ ಚಿತ್ರದ ಇನ್ನೊಂದು ಹೈಲೈಟ್‌ ಆಗಿದೆ. ವಿಖ್ಯಾತ್‌ ನಿರ್ಮಿಸಿರುವ ಈ ಚಿತ್ರವನ್ನು ರವೀಂದ್ರನಾಥ್‌ ನಿರ್ದೇಶಿಸಿದ್ದಾರೆ

ಇದನ್ನೂ ಓದಿ | Kannada Movie | ಮಾನ್ಸೂನ್‌ ರಾಗ, ಗುರು ಶಿಷ್ಯರು, ತೋತಾಪುರಿ ಒಟಿಟಿ ರಿಲೀಸ್‌ ಡೇಟ್‌ ಫಿಕ್ಸ್

ಚಿತ್ರದಲ್ಲಿ ರಚಿತಾ ರಾಮ್‌ ಲೈಂಗಿಕ ಕಾರ್ಯಕರ್ತೆಯಾಗಿ ಕಾಣಿಸಿಕೊಂಡಿದ್ದಾರೆ. ಮಾನ್ಸೂನ್‌ ರಾಗ ಸಿನಿಮಾ 80% ಮಳೆಯಲ್ಲಿಯೇ ಚಿತ್ರೀಕರಣವಾಗಿದೆ. ಅನೂಪ್ ಸಿಳೀನ್ ಸಂಗೀತ ನಿರ್ದೇಶನವಿದ್ದು, ಕೇಳುಗರಿಗೆ ಮುದ ನೀಡುವಂತಿದೆ. ಚಿತ್ರಗಳ ಹಾಡುಗಳು ಹಿಟ್‌ ಕಂಡಿದ್ದವು. ಇದರ ಜತೆಗೆ ಎಸ್‌.ಕೆ ರಾವ್‌ ಅವರ ಛಾಯಾಗ್ರಹಣವಿದೆ.

ನಟಿ ಯಶಾ ಶಿವಕುಮಾರ್‌ ಅವರು ಈ ಸಿನಿಮಾದಲ್ಲಿ ರಾಗ ಸುಧಾ ಎಂಬ ಪಾತ್ರದಲ್ಲಿ ನಟಿಸಿದ್ದರು. ಯಶ ಅವರ ಡ್ಯಾನ್ಸ್‌ ಮತ್ತು ಸಿನಿಮಾಟೋಗ್ರಾಫಿ ಸಿನರಸಿಕರನ್ನು ಸೆಳೆದಿತ್ತು. ಧನಂಜಯ್ ಮತ್ತು ರಚಿತಾ ರಾಮ್ ಜತೆಗೆ ಇನ್ನೂ ಹಲವು ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಮುಖ್ಯ ಪಾತ್ರದಲ್ಲಿ ಸುಹಾಸಿನಿ ಮತ್ತು ಅಚ್ಯುತ್ ಕುಮಾರ್ ಇದ್ದಾರೆ. ಶೋಭರಾಜ್, ರಘು ಗೌಡ, ಬ್ರೋ ಗೌಡ ಸೇರಿದಂತೆ ಅನೇಕರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.

ಇದನ್ನೂ ಓದಿ | Monsoon Raaga | ಸೆನ್ಸಾರ್ ಪಡೆದ ಡಾಲಿ-ರಚಿತಾ ಅಭಿನಯದ ಮಾನ್ಸೂನ್ ರಾಗ, ಬಿಡುಗಡೆಗೆ ರೆಡಿ!

Exit mobile version