ಬೆಂಗಳೂರು: ಸಿನಿಮಾ, ಟಿವಿ ಶೋ ಹಾಗೂ ಸಿನಿಮಾ ತಾರೆಯರ ಅಧಿಕೃತ ಮಾಹಿತಿ ಮೂಲವೆನಿಸಿಕೊಂಡಿರುವ ವಿಶ್ವ ಪ್ರಸಿದ್ಧ ತಾಣ ಐಎಂಡಿಬಿ (IMDb) ಜನವರಿ 9ರಂದು 2024ರ ಬಹುನಿರೀಕ್ಷಿತ ಭಾರತೀಯ ಸಿನಿಮಾಗಳ ಪಟ್ಟಿಯನ್ನು ಘೋಷಿಸಿದೆ. ಐಎಂಡಿಬಿ ತಾಣಕ್ಕೆ ಭೇಟಿ ನೀಡುವ ಲಕ್ಷಾಂತರ ಬಳಕೆದಾರರ ಮಾಸಿಕ ಪೇಜ್ ವೀಕ್ಷಣೆಯನ್ನು ಆಧರಿಸಿ ಈ ಪಟ್ಟಿ ಸಿದ್ಧಪಡಿಸಲಾಗಿದೆ. ವಿಶೇಷ ಎಂದರೆ ಈ ಪಟ್ಟಿಯಲ್ಲಿ ಕನ್ನಡದ ಬಹು ನಿರೀಕ್ಷಿತ ಚಿತ್ರ ಶ್ರೀಮುರಳಿ-ರುಕ್ಮಿಣಿ ವಸಂತ್ ಅಭಿನಯದ ‘ಬಘೀರ’ (Bagheera) ಸ್ಥಾನ ಪಡೆದುಕೊಂಡಿದೆ.
ಮೊದಲ ಸ್ಥಾನದಲ್ಲಿ ʼಫೈಟರ್ʼ (Fighter)
2024ರ ಬಹು ನಿರೀಕ್ಷಿತ ಚಿತ್ರಗಳ ಪಟ್ಟಿಯ ಮೊದಲ ಸ್ಥಾನದಲ್ಲಿ ಬಾಲಿವುಡ್ ಚಿತ್ರ ʼಫೈಟರ್ʼ ಇದೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಚಿತ್ರದಲ್ಲಿ ಮೊದಲ ಬಾರಿಗೆ ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಹೃತಿಕ್ ರೋಷನ್, “ಇದು ನಂಬಲಾಗದ ಪಾಸಿಟಿವ್ ಅಪ್‌ಡೇಟ್. ʼಫೈಟರ್ʼ ಟೀಸರ್, ಹಾಡುಗಳಿಗೆ ಲಭಿಸಿರುವ ಪ್ರತಿಕ್ರಿಯೆ ಅದ್ಭುತವಾಗಿದ್ದು, ಸಮಗ್ರವಾದ ಸಿನಿಮಾ ಅನುಭವವನ್ನು ವೀಕ್ಷಕರಿಗೆ ನೀಡಲಿದ್ದೇವೆ. ಜನವರಿ 25, 2024ರಂದು ಚಿತ್ರ ತೆರೆ ಕಾಣಲಿದೆ” ಎಂದು ಹೇಳಿದ್ದಾರೆ.
2024ರ ಐಎಂಡಿಬಿಯ ಬಹುನಿರೀಕ್ಷಿತ ಭಾರತೀಯ ಚಿತ್ರಗಳ ಪಟ್ಟಿ
- ಫೈಟರ್
- ಫುಷ್ಪ: ದಿ ರೂಲ್ ಪಾರ್ಟ್-2
- ವೆಲ್‌ಕಮ್ ಟು ದಿ ಜಂಗಲ್
- ಸಿಂಗಂ ಅಗೇನ್
- ಕಲ್ಕಿ 2898ಎಡಿ
- ಬಘೀರ
- ಹನುಮಾನ್
- ಬಡೆ ಮಿಯಾ ಛೋಟೆ ಮಿಯಾ
- ಕಂಗುವಾ
- ದೇವರ ಪಾರ್ಟ್-1
- ಛಾವಾ
- ಗುಂಟೂರು ಕಾರಂ
- ಮಲೈಕೊಟ್ಟೈ ವಾಲಿಬನ್
- ಮೆರ‍್ರಿ ಕ್ರಿಸ್‌ಮಸ್
- ಕ್ಯಾಪ್ಟನ್ ಮಿಲ್ಲರ್
- ತಂಗಲಾನ್
- ಇಂಡಿಯನ್ 2
- ಯೋಧ
- ಮೈ ಅಟಲ್ ಹೂಂ
- ಜಿಗ್ರ
ಐಎಂಡಿಬಿ ಪಟ್ಟಿಯಲ್ಲಿರುವ 20 ಚಿತ್ರಗಳ ಪೈಕಿ ಬಾಲಿವುಡ್ ಸಿನಿಮಾಗಳದ್ದೇ ಸಿಂಹಪಾಲು. ಒಂಬತ್ತು ಹಿಂದಿ ಸಿನಿಮಾ, ಐದು ತೆಲುಗು, ನಾಲ್ಕು ತಮಿಳು, ತಲಾ ಒಂದು ಮಲಯಾಳಂ ಮತ್ತು ಕನ್ನಡ ಸಿನಿಮಾ ಸ್ಥಾನ ಪಡೆದಿದೆ. ಪಟ್ಟಿಯಲ್ಲಿರುವ ಮೊದಲ ಐದು ಸಿನಿಮಾಗಳ ಪೈಕಿ ಮೂರರಲ್ಲಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ʼಫೈಟರ್ʼ (1), ʼಸಿಂಗಂ ಎಗೈನ್ʼ (4) ಮತ್ತು ʼಕಲ್ಕಿ 2898 ಎಡಿʼ(5) ದೀಪಿಕಾ ಅಭಿನಯದ ಚಿತ್ರಗಳು. ಇತ್ತೀಚೆಗೆ ಐಎಂಡಿಬಿ ಘೋಷಿಸಿದ 2023ರ ಅತ್ಯಂತ ಜನಪ್ರಿಯ ಭಾರತೀಯ ತಾರೆಯರ ಪಟ್ಟಿಯಲ್ಲಿ ಅವರು 3ನೇ ಸ್ಥಾನವನ್ನು ಪಡೆದಿದ್ದರು. ಇನ್ನು ಪಟ್ಟಿಯಲ್ಲಿರುವ ನಾಲ್ಕು ಚಿತ್ರಗಳು ಜನಪ್ರಿಯ ಸಿನಿಮಾಗಳ ಮುಂದುವರಿದ ಭಾಗಗಳಾಗಿವೆ. ʼಪುಷ್ಪಾ: ದಿ ರೂಲ್ ಪಾರ್ಟ್- 2ʼ (2), ʼವೆಲ್‌ಕಮ್ ಟು ದಿ ಜಂಗಲ್ʼ (3), ʼಸಿಂಗಂ ಎಗೇನ್ʼ (4) ಮತ್ತು ʼಇಂಡಿಯನ್ 2ʼ (17) ಆ ಚಿತ್ರಗಳು.
ಇದನ್ನೂ ಓದಿ: Actor Sriimurali: ಅಬ್ಬರಿಸಿದ ರೋರಿಂಗ್ ಸ್ಟಾರ್; ಆ್ಯಕ್ಷನ್ ಪ್ಯಾಕ್ಡ್ ‘ಬಘೀರ’ ಟೀಸರ್ ಔಟ್!