ಬೆಂಗಳೂರು: ಯಶ್ ರಾಜ್ ಫಿಲ್ಮ್ಸ್ ಪ್ರಸ್ತುತಪಡಿಸಿದ ಪಠಾಣ್ ಮತ್ತು ಟೈಗರ್ 3 (Upcoming Movies 2024) ಎರಡು ಚಿತ್ರಗಳು ಈ ವರ್ಷ ಕಲೆಕ್ಷನ್‌ನಲ್ಲಿ ಹೊಸ ದಾಖಲೆಗಳನ್ನು ನಿರ್ಮಿಸಿವೆ. ಬಾಲಿವುಡ್‌ನಲ್ಲಿ ಈ ವರ್ಷ ಸಾಲು ಸಾಲು ಸಿನಿಮಾಗಳು ಬಿಡುಗಡೆಗೊಂಡು ಹಿಟ್ ಕಂಡವು. ಇದರಿಂದಾಗಿ 2024ರಲ್ಲಿ ಬಿಡುಗಡೆಯಾಗಲಿರುವ ಸಿನಿಮಾಗಳ ಬಗ್ಗೆ ಪ್ರೇಕ್ಷಕರಿಗೆ ನಿರೀಕ್ಷೆ ಹೆಚ್ಚಾಗಿದೆ. 2024ರ ಬಹು ನಿರೀಕ್ಷಿತ ಬಾಲಿವುಡ್ ಚಲನಚಿತ್ರಗಳ ಪಟ್ಟಿ ಇಲ್ಲಿವೆ.
ಹೌಸ್‌ಫುಲ್ 5
ಹೌಸ್‌ಫುಲ್ 5 ಸಿನಿಮಾ 2024ರಲ್ಲಿ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ತರುಣ್ ಮನ್ಸುಖಾನಿ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ. ಸಾಜಿದ್ ನಾಡಿಯಾಡ್ವಾಲಾ ನಿರ್ಮಿಸಲಿದ್ದಾರೆ. ಇದು 2024ರ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ ಏಕೆಂದರೆ ಇದು ಹೌಸ್‌ಫುಲ್ ಫ್ರ್ಯಾಂಚೈಸ್‌ನ 5ನೇ ಕಂತು. ಅಕ್ಷಯ್ ಮತ್ತು ರಿತೇಶ್ ಮತ್ತೆ ಒಟ್ಟಿಗೆ ತೆರೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ.
ಸಿಂಗಂ ಅಗೇನ್
ʻಸಿಂಗಂ ಅಗೇನ್ʼ ಚಿತ್ರದಲ್ಲಿ ದೀಪಿಕಾ ಪಡುಕೋಣೆ (Deepika Padukone) ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಅವರ ಲುಕ್ ಪೋಸ್ಟರ್ ಔಟ್ ಆಗಿದೆ. ರೋಹಿತ್ ಶೆಟ್ಟಿ ನಿರ್ದೇಶನದ ಈ ಸಿನಿಮಾದಲ್ಲಿ ಎಸಿಪಿ ಸತ್ಯ ಪಾತ್ರದಲ್ಲಿ ಟೈಗರ್ ಶ್ರಾಫ್ ಕಾಣಿಸಿಕೊಳ್ಳುತ್ತಿದ್ದಾರೆ.ಅಜಯ್ ದೇವಗನ್, ಅಕ್ಷಯ್ ಕುಮಾರ್, ರಣವೀರ್ ಸಿಂಗ್, ಟೈಗರ್ ಶ್ರಾಫ್ ಮತ್ತು ದೀಪಿಕಾ ಪಡುಕೋಣೆ,ಕರೀನಾ ಈ ಸಿನಿಮಾದಲ್ಲಿ ನಟಿಸಿದ್ದಾರೆ.ಇದೇ ಸಿನಿಮಾದಲ್ಲಿ ಅರ್ಜುನ್ ಕಪೂರ್ ಕೂಡ ನಟಿಸುತ್ತಿದ್ದಾರೆ. ಹಿಂದಿ ಚಿತ್ರರಂಗದ ಹಲವು ಪ್ರಮುಖ ಕಲಾವಿದರು ಈ ಚಿತ್ರದ ಪಾತ್ರವರ್ಗದಲ್ಲಿ ಇರುವುದರಿಂದ ಸಹಜವಾಗಿಯೇ ಹೈಪ್ ಸೃಷ್ಟಿ ಆಗಿದೆ.
ಇದನ್ನೂ ಓದಿ: Year Ender 2023: ಈ ವರ್ಷ ಸುದ್ದಿಯಲ್ಲಿದ್ದ ಟಿವಿ ಸ್ಟಾರ್‌ಗಳಿವರು!
ಫೈಟರ್
ದೀಪಿಕಾ ಪಡುಕೋಣೆ (Deepika Padukone) ಮತ್ತು ಹೃತಿಕ್ ರೋಷನ್ (Hrithik Roshan) ಒಟ್ಟಿಗೆ ತೆರೆ ಹಂಚಿಕೊಂಡಿರುವ ʻಫೈಟರ್ʼ 2024ರಲ್ಲಿ ತೆರೆಗೆ ಬರುವ ಚಿತ್ರ. ಈ ಸಿನಿಮಾ 2024ರ ಜನವರಿ 26ರ ಗಣರಾಜ್ಯೋತ್ಸವದ ಪ್ರಯುಕ್ತ ಬಿಡುಗಡೆಯಾಗಲಿದೆ.ಫೈಟರ್ ಟೀಸರ್‌ನಲ್ಲಿ, ಜೆಟ್ ವಿಮಾನವೇರಿ ಸಾಹಸ ಪ್ರದರ್ಶಿಸಿದ್ದಾರೆ. ಹೃತಿಕ್ ಮತ್ತು ದೀಪಿಕಾ. ವರದಿಯ ಪ್ರಕಾರ, ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಸಿನಿಮಾ 3D ನಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಪಠಾಣ್ ಮೂಲಕ 1000 ಕೋಟಿಯ ಹಿಟ್ ಸಿನಿಮಾ ನೀಡಿರುವ ಸಿದ್ಧಾರ್ಥ್ ಆನಂದ್, ಫೈಟರ್ ಮೂಲಕ ಮತ್ತೊಂದು ಹಿಟ್ ಸಿನಿಮಾ ನೀಡಲಿದ್ದಾರೆ. ನಿರ್ದೇಶಕ ಸಿದ್ಧಾರ್ಥ್ ಆನಂದ್ ಒಂದು ನಿಮಿಷ 10 ಸೆಕೆಂಡ್‌ನ ಟೀಸರ್ ಮೂಲಕ ಸಿನಿಮಾದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದ್ದಾರೆ. ಪ್ಯಾಟಿ, ಮಿನ್ನಿ ಮತ್ತು ರಾಕಿ ಸ್ಕ್ವಾಡ್ರನ್ ಕೂಡ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರು ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ನಟಿಸಿದ ಪಠಾಣ್ ಸಿನಿಮಾ ನಂತರ ಈ ಸಿನಿಮಾ ಮೂಲಕ ಮತ್ತೆ ಕಮ್ ಬ್ಯಾಕ್ ಆಗಿದ್ದಾರೆ.
ಮೆರ್ರಿ ಕ್ರಿಸ್‌ಮಸ್
ಸಿದ್ಧಾರ್ಥ್ ಮಲ್ಹೋತ್ರಾ ನಟನೆಯ ʼಯೋಧʼ ಕೂಡ ಬಿಡುಗಡೆಯಾಗುತ್ತಿರುವುದರಿಂದ ʻಮೆರ‍್ರಿ ಕ್ರಿಸ್‌ಮಸ್ʼ ಅನ್ನು ಒಂದು ವಾರ ಮೊದಲೇ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ರೂಪಿಸಿತ್ತು. ಇದೀಗ 2024ರ ಜನವರಿ 12ರಂದು ಸಿನಿಮಾ ತೆರೆಗೆ ಬರಲಿದೆ ಎಂದು ಚಿತ್ರತಂಡ ಘೋಷಣೆ ಮಾಡಿದೆ.ವಿಜಯ್ ಸೇತುಪತಿ ಮತ್ತು ಕತ್ರಿನಾ ಕೈಫ್ ಅವರ ಡೈನಾಮಿಕ್ ಜೋಡಿಯನ್ನು ಒಳಗೊಂಡ ಶ್ರೀರಾಮ್ ರಾಘವನ್ ನಿರ್ದೇಶನದ ಈ ಸಿನಿಮಾ ಬಗ್ಗೆ ಪ್ರೇಕ್ಷಕರಿಗೆ ನಿರೀಕ್ಷೆ ಹೆಚ್ಚಿದೆ. ಮೊದಲ ಬಾರಿ ಕತ್ರಿನಾ ಕೈಫ್ ಮತ್ತು ವಿಜಯ್ ಸೇತುಪತಿ ಒಂದಾಗುತ್ತಿದ್ದು, ಹಿಂದಿ ಮತ್ತು ತಮಿಳು ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರೀಕರಣ ನಡೆದಿದೆ. ಈ ಹಿಂದೆ ʼಅಂಧಾಧುನ್ʼ, ʼಬದ್ಲಾಪುರ್ʼ ಮುಂತಾದ ಚಿತ್ರಗಳ ಮೂಲಕ ಖ್ಯಾತಿ ಗಳಿಸಿದ ನಿರ್ದೇಶಕ ಶ್ರೀರಾಮ್ ರಾಘವನ್ ʻಮೆರ‍್ರಿ ಕ್ರಿಸ್‌ಮಸ್ʼ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಹಿಂದಿ ಮತ್ತು ತಮಿಳಿನ ವಿವಿಧ ಕಲಾವಿದರ ನಟನೆಯ ಜತೆಗೆ ಎರಡು ಭಾಷೆಗಳಲ್ಲಿ ಚಿತ್ರ ತಯಾರಾಗಲಿದೆ. ಕತ್ರಿನಾ ಕೈಫ್ ಮತ್ತು ಶ್ರೀರಾಮ್ ರಾಘವನ್ ಅವರ ಮೊದಲ ತಮಿಳು ಚಿತ್ರ ಇದಾಗಿರಲಿದೆ.
ಇದನ್ನೂ ಓದಿ: New Year Shopping: ವಾರದ ಆರಂಭದಲ್ಲೇ ಶುರುವಾಯ್ತು ನ್ಯೂ ಇಯರ್ ಪಾರ್ಟಿವೇರ್ಸ್ ಶಾಪಿಂಗ್
ವೆಲ್‌ಕಮ್ ಟು ದಿ ಜಂಗಲ್
ವೆಲ್‌ಕಮ್ ಟು ದಿ ಜಂಗಲ್ ಸಿನಿಮಾ ಟೀಸರ್ ಈಗಾಗಲೆ ಔಟ್ ಆಗಿದೆ. ಅಕ್ಷಯ್ ಕುಮಾರ್, ದಿಶಾ ಪಟಾನಿ, ಸಂಜಯ್ ದತ್, ಜಾಕ್ವೆಲಿನ್ ಫರ್ನಾಂಡೀಸ್ ಸೇರಿದಂತೆ ಇನ್ನು ಪ್ರಮುಖ ತಾರೆಯರು ನಟಿಸಿದ್ದಾರೆ. ಸುನೀಲ್ ಶೆಟ್ಟಿ, ರಾಜ್‌ಪಾಲ್ ನೌರಂಗ್ ಯಾದವ್, ಅರ್ಷದ್ ವಾರ್ಸಿ, ಪರೇಶ್ ರಾವಲ್, ರವೀನಾ ಟಂಡನ್, ಲಾರಾ ದತ್ತಾ, ಜಾನಿ ಲಿವರ್, ತುಷಾರ್ ಕಪೂರ್, ಮುಖೇಶ್ ತಿವಾರಿ, ಇನಾಮುಲ್ಹಾಕ್, ಷರೀಬ್ ಹಶ್ಮಿ, ಯಶಪಾಲ್ ಶರ್ಮಾ, ಶ್ರೇಯಸ್ ತಲ್ಪಡೆ, ರಾಹುಲ್ ದೇವ್, ಕಿಕು ಶರದಾ , ದಲೇರ್ ಮೆಹಂದಿ ಮತ್ತು ಮಿಕಾ ಸಿಂಗ್ ಕೂಡ ಇದ್ದಾರೆ. ಅಹ್ಮದ್ ಖಾನ್ ನಿರ್ದೇಶಿಸಿದ್ದಾರೆ, ಫರ್ಹಾದ್ ಸಾಮ್ಜಿ ಬರೆದಿದ್ದಾರೆ. ಜ್ಯೋತಿ ದೇಶಪಾಂಡೆ ಮತ್ತು ಫಿರೋಜ್ ನಾಡಿಯಾಡ್ವಾಲಾ ನಿರ್ಮಿಸಿದ್ದಾರೆ.
ಯೋಧ
ಸಾಗರ್ ಅಂಬ್ರೆ ಮತ್ತು ಪುಷ್ಕರ್ ಓಜಾ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಚಲನಚಿತ್ರವಾಗಿದೆ. ಚಿತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ, ರಾಶಿ ಖನ್ನಾ, ಮತ್ತು ದಿಶಾ ಪಟಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜೊತೆಗೆ ಸ್ಯಾಮಿ ಜೋನಾಸ್ ಹೀನಿ, ಶಾರಿಕ್ ಖಾನ್ ಮತ್ತು ಅನೇಕರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರದ ಛಾಯಾಗ್ರಹಣವನ್ನು ಜಿಷ್ಣು ಭಟ್ಟಾಚಾರ್ಯ ನಿರ್ವಹಿಸಿದ್ದು, ಆರಿಫ್ ಶೇಖ್ ಸಂಕಲನ ಮಾಡಿದ್ದಾರೆ. ಶಂತನು ಮೊಯಿತ್ರಾ, ಸನ್ನಿ ಬಾವ್ರಾ ಮತ್ತು ಇಂದರ್ ಬಾವ್ರಾ ಸಂಗೀತ ಇದೆ.
ಧರ್ಮ ಪ್ರೊಡಕ್ಷನ್ಸ್ ಮತ್ತು ಮೆಂಟರ್ ಡಿಸ್ಸಿಪಲ್ ಫಿಲ್ಮ್ಸ್ ಬ್ಯಾನರ್‌ಗಳ ಅಡಿಯಲ್ಲಿ ಯಶ್ ಜೋಹರ್, ಕರಣ್ ಜೋಹರ್ ಮತ್ತು ಶಶಾಂಕ್ ಖೈತಾನ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಚಂದು ಚಾಂಪಿಯನ್
ಕ್ರೀಡೆಗೆ ಸಂಬಂಧಪಟ್ಟ ಸಿನಿಮಾ ಇದು. ಚಂದು ಚಾಂಪಿಯನ್‌ನ ಕಥೆ ಮತ್ತು ಚಿತ್ರಕಥೆಯನ್ನು ಕಬೀರ್ ಖಾನ್ ಮತ್ತು ಸುಮಿತ್ ಅರೋರಾ ಬರೆದಿದ್ದಾರೆ. ರೋಹಿತ್ ಶುಕ್ರೆ ಚಿತ್ರದ ಸಂಭಾಷಣೆಯನ್ನು ಬರೆದಿದ್ದಾರೆ. ಕಬೀರ್ ಖಾನ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ಕಾರ್ತಿಕ್ ಆರ್ಯನ್, ಶ್ರದ್ಧಾ ಕಪೂರ್, ಮತ್ತು ಕತ್ರಿನಾ ಕೈಫ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜೊತೆಗೆ ಅಡೋನಿಸ್ ಕಪ್ಸಾಲಿಸ್, ಭುವನ್ ಅರೋರಾ, ಪಾಲಕ್ ಲಾಲ್ವಾನಿ ಮತ್ತು ಇತರರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಕಬೀರ್ ಖಾನ್ ಫಿಲ್ಮ್ಸ್, ನಾಡಿಯಾಡ್ವಾಲಾ ಗ್ರ್ಯಾಂಡ್ಸನ್ ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ ಮತ್ತು ಸ್ಟಾರ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ. ಕ್ರೀಡಾಪಟುವಿನ ನಿಜ ಜೀವನದ ಅನುಭವವನ್ನು ತೋರಿಸಲಿದೆ ಈ ಸಿನಿಮಾ.