ಬೆಂಗಳೂರು: ಕೆಲವು ಸಿನಿಮಾಗಳು (YEAR ENDER 2023) ಉತ್ತಮ ಸಂದೇಶವನ್ನು ನೀಡಲು ಮುಂದಾಗಿದ್ದರೂ ಕೂಡ ಬಿಡುಗಡೆಯಾಗುವ ಮುಂಚೆಯೇ ವಿವಾದಕ್ಕೆ ಗುರಿಯಾಗುತ್ತವೆ. ಕೆಲವು ಚಲನಚಿತ್ರ ನಿರ್ಮಾಪಕರು ಸಿನಿಮಾ ಯಶಸ್ಸು ಆಗಬೇಕೆಂದು ವಿವಾದವನ್ನು ಬೇಕಂತಲೇ ಹುಟ್ಟು ಹಾಕುತ್ತಾರೆ. ಎಷ್ಟೇ ವಿವಾದ ಸುತ್ತುವರಿದರೂ ಹಲವು ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಕೆಲವೇ ಕೆಲವು ಸಿನಿಮಾಗಳು ಸೋತಿವೆ. ಇಲ್ಲಿವೆ 2023ರ ಅತ್ಯಂತ ವಿವಾದಾತ್ಮಕ ಸಿನಿಮಾಗಳ ಪಟ್ಟಿ.
ಆದಿಪುರುಷ್
ʻಆದಿಪುರುಷ್ʼ ಸಿನಿಮಾ ಜೂನ್ 16ರಂದು ವಿಶ್ವಾದ್ಯಂತ ತೆರೆಗೆ ಅಪ್ಪಳಿಸಿತ್ತು. ಚಿತ್ರದಲ್ಲಿ ಪ್ರಭಾಸ್ ರಾಮನಾಗಿ, ಕೃತಿ ಸನೂನ್ ಜಾನಕಿಯಾಗಿ ಮತ್ತು ಸೈಫ್ ಅಲಿ ಖಾನ್ ರಾವಣನಾಗಿ ನಟಿಸಿದ್ದಾರೆ. ಓಂ ರಾವುತ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಸಿನಿಮಾ ನೋಡಿದ ಅನೇಕಾನೇಕರು ʼಆದಿಪುರುಷ್ʼ ಚಿತ್ರವನ್ನು ಟೀಕಿಸಿದ್ದರು. ಇಡೀ ರಾಮಾಯಣ ಮಹಾಕಾವ್ಯಕ್ಕೆ ಸಿನಿಮಾದಲ್ಲಿ ಅಪಮಾನ ಮಾಡಲಾಗಿದೆ. ಇಂಥ ಸಿನಿಮಾ ನೋಡಲೇಬಾರದು ಎಂದು ಹೇಳಿದ್ದರು. ಮನೋಜ್ ಮುಂಟಶೀರ್ ‘ಆಂಜನೇಯ ದೇವರಲ್ಲ. ಅವನು ಮಹಾನ್ ಭಕ್ತ’ ಎಂದು ಹೇಳಿದ್ದರು. ‘ಭಗವಂತ ಹನುಮಾನ್ನನ್ನು ನಾವೆಲ್ಲ ಶಕ್ತಿ, ಬುದ್ಧಿವಂತಿಕೆ ಮತ್ತು ಜ್ಞಾನದ ದೇವರೆಂದು ಪೂಜಿಸುತ್ತೇವೆ. ಆದರೆ ವಾಸ್ತವದಲ್ಲಿ ಬಜರಂಗ ಬಲಿ ದೇವರಲ್ಲ. ಹನುಮಂತ ಎಂದಿಗೂ ತತ್ವಶಾಸ್ತ್ರಗಳನ್ನು ಮಾತನಾಡಿಲ್ಲ. ಅವನೊಬ್ಬ ಮಹಾನ್ ಭಕ್ತ. ಅವನ ಭಕ್ತಿಯ ಪರಾಕಾಷ್ಠೆಯ ಕಾರಣಕ್ಕೆ ನಾವು ಅವನನ್ನು ದೇವರ ಸ್ಥಾನದಲ್ಲಿ ಇಟ್ಟು ಪೂಜಿಸುತ್ತೇವೆ’ ಎಂದು ತಮ್ಮ ಅಭಿಪ್ರಾಯ ಹೇಳಿದ್ದರು. ಆಂಜನೇಯ ದೇವರಲ್ಲ ಎಂದು ಮನೋಜ್ ಮುಂಟಶೀರ್ ಹೇಳಿದ್ದು ಆಗ ದೊಡ್ಡಮಟ್ಟದ ವಿವಾದಕ್ಕೆ ಕಾರಣವಾಗಿತ್ತು.
ನೇಪಾಳಿ ರ್ಯಾಪರ್ ಬಾಲೆನ್ ಶಾ ಅವರು ‘ಆದಿಪುರುಷ್’ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಸಿನಿಮಾದಲ್ಲಿ ‘ಜಾನಕಿ(ಸೀತಾಮಾತೆ) ಭಾರತದ ಪುತ್ರಿ’ ಎಂಬ ಒಂದು ಡೈಲಾಗ್ ಇದೆ. ಆದರೆ ಸೀತಾ ನಿಜಕ್ಕೂ ಜನಿಸಿದ್ದು ಈಗಿನ ನೇಪಾಳದಲ್ಲಿ. ಸಿನಿಮಾದಲ್ಲಿರುವ ಈ ಸಂಭಾಷಣೆಯನ್ನು ತೆಗೆಯದ ಹೊರತು ಆದಿಪುರುಷ್ ಸಿನಿಮಾವನ್ನು ನೇಪಾಳದಲ್ಲಿ ಬಿಡುಗಡೆ ಮಾಡಲು ಅವಕಾಶ ಕೊಡುವುದಿಲ್ಲ ಎಂದು ಹೇಳಿದ್ದರು. ‘ಈ ಅನಗತ್ಯ ಡೈಲಾಗ್ ತೆಗೆಯುವವರೆಗೂ ಭಾರತದ ಯಾವುದೇ ಹಿಂದಿ ಸಿನಿಮಾಗಳನ್ನೂ ನೇಪಾಳದಲ್ಲಿ ರಿಲೀಸ್ ಮಾಡಲು ಬಿಡುವುದಿಲ್ಲ ಎಂದೂ ತಿಳಿಸಿದ್ದರು. ಹಾಗೇ, ಆದಿಪುರುಷ್ ಬಿಡುಗಡೆಗೆ ನೀಡಿದ್ದ ಒಪ್ಪಿಗೆಯನ್ನು ನೇಪಾಳ ಸೆನ್ಸಾರ್ ಬೋರ್ಡ್ ತಡೆ ಹಿಡಿದಿತ್ತು. ಇಷ್ಟೆಲ್ಲ ಆದಮೇಲೆ ಈಗ ಸಿನಿಮಾದಲ್ಲಿದ್ದ ‘ಜಾನಕಿ ಭಾರತದ ಮಗಳು’ ಎಂಬ ಡೈಲಾಗ್ನ್ನು ತೆಗೆದು ಹಾಕಲಾಗಿತ್ತು.
ಇದನ್ನೂ ಓದಿ: Year Ender 2023: ಈ ವರ್ಷ ಕ್ರೀಡಾ ಕ್ಷೇತ್ರದಲ್ಲಿ ಭಾರತ ಸಾಧಿಸಿದ ಅಭೂತಪೂರ್ವ ಸಾಧನೆ
ಪಠಾಣ್
ದೀಪಿಕಾ ಪಡುಕೋಣೆ (Deepika Padukone) ಹಾಗೂ ಶಾರುಖ್ ಖಾನ್ ಕಾಂಬಿನೇಶನ್‌ನ ‘ಪಠಾಣ್’ ಸಿನಿಮಾದ ʻಬೇಷರಮ್ ರಂಗ್’ ಹಾಡಿನಲ್ಲಿ ದೀಪಿಕಾ ಕೇಸರಿ ಬಟ್ಟೆ ತೊಟ್ಟು ಕುಣಿದಿದ್ದಕ್ಕೆ ಆಕ್ರೋಶ ವ್ಯಕ್ತವಾಗಿತ್ತು. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾ ಬಾಯ್ಕಾಟ್ ಮಾಡಬೇಕು ಎಂಬ ಅಭಿಯಾನ ಶುರುವಾಗಿತ್ತು. ಅಕ್ಷಯ್ ಕುಮಾರ್ ಮತ್ತು ಕತ್ರೀನಾ ಕಾಂಬಿನೇಶನ್‌ನ ‘ದೆ ಧನಾ ಧನ್’ ಸಿನಿಮಾದಲ್ಲೂ ಕತ್ರೀನಾ ಕೇಸರಿ ಬಣ್ಣದ ಬಟ್ಟೆ ತೊಟ್ಟು ಸೆಕ್ಸಿಯಾಗಿ ಡಾನ್ಸ್ ಮಾಡಿದ್ದಾರೆ. ಆಗ ಮೌನ ವಹಿಸಿದವರು ಈಗೇಕೆ ಕೂಗಾಡುತ್ತಿದ್ದಾರೆ ಎಂದು ಹಲವರು ಕಮೆಂಟ್ ಕೂಡ ಮಾಡಿದ್ದರು. ‘ಬೇಷರಮ್ ರಂಗ್’ ಅಂದರೆ ಕನ್ನಡದಲ್ಲಿ ನಾಚಿಕೆ ಇಲ್ಲದ ಬಣ್ಣ ಎಂದಾಗುತ್ತದೆ. ಕೇಸರಿ ಬಣ್ಣಕ್ಕೆ ನಾಚಿಕೆ ಇಲ್ಲದ ಬಣ್ಣ ಎಂದು ಜರಿದಿದ್ದಾರೆ ಎಂದು ಹೋಲಿಕೆ ಮಾಡಿಕೊಂಡು ಹಲವರು ಗರಂ ಆಗಿದ್ದರು.
इस गाने के रंग हमारी संस्कृति को जोड़ कर रखते है 😍 🔥 @akshaykumar #KatrinaKaif one of my favourite song ❤️ #Gerua #Bhagwa #PathaanFirstDayFirstShow #Pathaan pic.twitter.com/P5Xg5lSptI
— Ishu Samar (The Dollywood Reporter) (@IshuSamarLive) December 14, 2022
‘ಓಪನ್‌ಹೈಮರ್’ ಸಿನಿಮಾ
ಅಣು ಬಾಂಬ್‌ನ ಪಿತಾಮಹ ಎನಿಸಿಕೊಂಡಿರುವ ಓಪನ್‌ಹೈಮರ್ ಅವರ ಜೀವನ ಕಥೆ ಕುರಿತಾಗಿ ಈ ಸಿನಿಮಾ ಮಾಡಲಾಗಿತ್ತು. ಸಿನಿಮಾದಲ್ಲಿ ನಟ ಸಿಲಿಯನ್ ಮರ್ಫಿ ಅವರು ಓಪನ್‌ಹೈಮರ್ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಅವರು ಪತ್ರಕರ್ತೆಯೊಬ್ಬರ ಜತೆ ಲೈಂಗಿಕವಾಗಿ ತೊಡಗಿಸಿಕೊಳ್ಳುತ್ತಾರೆ. ಆ ಸಮಯದಲ್ಲಿ ಆ ಪತ್ರಕರ್ತೆ ಸಂಸ್ಕೃತ ಪುಸ್ತಕವೊಂದನ್ನು ತೋರಿಸಿ ಅದನ್ನು ಓದುವುದಕ್ಕೆ ಕೇಳುತ್ತಾಳೆ. ಆಗ ಓಪನ್‌ಹೈಮರ್ ಸಂಸ್ಕೃತದ ಸಾಲನ್ನು ಓದುತ್ತಾರೆ.
ಈ ರೀತಿ ಓದಲಾಗಿರುವ ಸಾಲು ಭಗವದ್ಗೀತೆಯ ಸಾಲು ಎಂದು ಆಗ ವಾದ ಶುರುವಾಗಿತ್ತು. ಈ ಬಗ್ಗೆ ಟ್ವಿಟರ್‌ನಲ್ಲಿ ಅನೇಕರು ಟ್ವೀಟ್‌ಗಳನ್ನು ಮಾಡಿದ್ದು, #BoycottOppenheimer #RespectHinduCulture ಎನ್ನುವಂತಹ ಹ್ಯಾಶ್‌ಟ್ಯಾಗ್‌ಗಳು ಟ್ರೆಂಡ್ ಆಗಿದ್ದವು.
ಈ ಬಗ್ಗೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರೂ ಖಂಡನೆ ವ್ಯಕ್ತಪಡಿಸಿದ್ದರು. ಸಚಿವರು ಸೆನ್ಸಾರ್ ಮಂಡಳಿಯ ಎದುರು ಈ ಬಗ್ಗೆ ಪ್ರಶ್ನೆಯನ್ನಿಟ್ಟಿದ್ದರು.
ಇದನ್ನೂ ಓದಿ: Year Ender 2023: ಈ ವರ್ಷ ಗೆದ್ದು ಬೀಗಿದ ಸ್ಟಾರ್ ನಟರ ಚಿತ್ರಗಳಿವು
EL ARTE DEL CINE/RUMBO A LA ESTATUILLA: Nominaciones Internacionales de la Academia Australiana
— Ernesto Pastrana (@PastranaTweet) December 15, 2023
https://t.co/UlMfBSbSqa #FilmTwitter #RumboALaEstatuilla15 #AACTA #Oppenheimer #KillersOfTheFlowerMoon #Barbie pic.twitter.com/LEta2OMEnq
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ
ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ನಟಿಸಿರುವ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ (Rani Kii Prem Kahaani) ಸಿನಿಮಾ ಉತ್ತಮವಾಗಿ ಕಲೆಕ್ಷನ್ ಮಾಡಿದೆ. ಈ ಸಿನಿಮಾದಲ್ಲಿ ಶಬಾನಾ ಅಜ್ಮಿ-ಧರ್ಮೇಂದ್ರ ಅವರ ಲಿಪ್ ಲಾಕ್ ಸೀನ್ ಕೂಡ ಇದೆ. ಈ ಬಗ್ಗೆ ಹಲವು ಚರ್ಚೆಗಳು ನಡೆದವು. ಧರ್ಮೇಂದ್ರ ಅವರಿಗೆ ಈಗ 87 ವರ್ಷ ಹಾಗೂ ನಟಿ ಶಬಾನಾ ಅಜ್ಮಿ ಅವರಿಗೆ 72 ವರ್ಷ ವಯಸ್ಸು. ಈ ವಯಸ್ಸಿನಲ್ಲಿ ಈ ಸೀನ್ ಬೇಕಾ ಎಂದು ಹಲವರು ಚರ್ಚೆಗಳನ್ನು ಮಾಡಿದ್ದರು. ಇತ್ತೀಚಿನ ಸಂದರ್ಶನವೊಂದರಲ್ಲಿ, ಧರ್ಮೇಂದ್ರ ಅವರು ಚಿತ್ರದಲ್ಲಿನ ತಮ್ಮ ಲಿಪ್‌ಲಾಕ್ ದೃಶ್ಯದ ಕುರಿತು ಮಾತನಾಡಿದ್ದರು. “ಶಬಾನಾ ಮತ್ತು ನಾನು ಲಿಪ್ ಲಾಕ್ ದೃಶ್ಯದಿಂದ ಪ್ರೇಕ್ಷಕರನ್ನು ಆಶ್ಚರ್ಯಗೊಳಿಸಿದ್ದೇವೆ ಎಂದು ನಾನು ಕೇಳಲ್ಪಟ್ಟೆ. ಪ್ರೇಕ್ಷಕರು ಈ ಬಗ್ಗೆ ಹೊಗಳಿದ್ದಾರೆ. ಆದರೆ ನಾನು ಜನರಿಂದ ಇಷ್ಟರ ಮಟ್ಟಿಗೆ ಮೆಚ್ಚುಗೆಯನ್ನು ನಿರೀಕ್ಷಿಸಿರಲಿಲ್ಲ. ನಾನು ಕೊನೆಯ ಬಾರಿ ನಫೀಸಾ ಅಲಿಯೊಂದಿಗೆ ʻಲೈಫ್ ಇನ್ ಎ ಮೆಟ್ರೋʼದಲ್ಲಿ ಲಿಪ್ ಲಾಕ್ ದೃಶ್ಯವನ್ನು ಮಾಡಿದೆ. ಅದಕ್ಕೂ ಕೂಡ ಇದೇ ರೀತಿ ಜನರಿಂದ ಪ್ರಶಂಸೆಗೆ ಒಳಪಟ್ಟಿತ್ತುʼʼಎಂದು ಹೇಳಿದ್ದರು.
Ninne timepass agtidilla anta, ee movie nodhde
— Rohan (@VikrantRohan) September 17, 2023
What a Bad decision it turned out be
Aa Chakka Director Dharmendra and Shabana Azmi ibbrannu Kiss madsbittavne 😭😭 pic.twitter.com/UfJGI9W84d
ಓ ಮೈ ಗಾಡ್
2012ರಲ್ಲಿ ಬಿಡುಗಡೆಯಾಗಿದ್ದ ಒಎಂಜಿ: ಓ ಮೈ ಗಾಡ್ (OMG Oh My God) ಸಿನಿಮಾದಲ್ಲಿ ಶ್ರೀಕೃಷ್ಣನ ಪಾತ್ರ ನಿಭಾಯಿಸಿದ್ದ ನಟ ಅಕ್ಷಯ್ಕುಮಾರ್ (Akshay Kumar) ಈಗ OMG 2 ಸಿನಿಮಾದಲ್ಲಿ ಶಿವನ ಪಾತ್ರದಲ್ಲಿ ನಟಿಸಿದ್ದರು. ದೃಶ್ಯಗಳು ಮತ್ತು ಸಂಭಾಷಣೆಗಳು ವಿವಾದಕ್ಕೆ ಕಾರಣವಾಗಿತ್ತು. ಬಾಲಿವುಡ್ ಹಂಗಾಮ’ ವರದಿ ಮಾಡಿರುವ ಪ್ರಕಾರ, ದೃಶ್ಯ ಹಾಗೂ ಸಂಭಾಷಣೆ ಮ್ಯೂಟ್ ಸೇರಿ 20 ಕಡೆಗಳಲ್ಲಿ ಬದಲಾವಣೆ ಮಾಡಲು ಸೂಚನೆ ನೀಡಲಾಗಿತ್ತು. ‘ಶಿವನ ದೂತ’ನಾಗಿ ಅಕ್ಷಯ್ ಕುಮಾರ್ ನಟಿಸಿರುವ ಈ ಚಿತ್ರವು ತನ್ನ ಮಗನ ಶಿಕ್ಷಣದ ಹಕ್ಕಿಗಾಗಿ ವ್ಯಕ್ತಿಯೊಬ್ಬನ ಹೋರಾಟದ ಕಥೆಯಾಗಿದೆ. ವ್ಯಕ್ತಿಯ ಪಾತ್ರವನ್ನು ಪಂಕಜ್ ತ್ರಿಪಾಠಿ ಮಾಡಿದ್ದಾರೆ. ಈ ಚಿತ್ರ ಲೈಂಗಿಕ ಶಿಕ್ಷಣದ ಬಗ್ಗೆ ಇತ್ತು.
21 ವರ್ಷದ ಅವನೀತ್‌ಗೆ 49ರ ನವಾಜುದ್ದೀನ್ ಮುತ್ತು
ನಟ ನವಾಜುದ್ದೀನ್ ಸಿದ್ದಿಕಿ (Nawazuddin Siddiqui) ಮತ್ತು ನಟಿ ಅವನೀತ್ ಕೌರ್ ನಟನೆಯ ʼಟೀಕು ವೆಡ್ಸ್ ಶೇರುʼ ಸಿನಿಮಾಗೆ ನಟಿ ಕಂಗನಾ ರಣಾವತ್ ಬಂಡವಾಳ ಹೂಡಿದ್ದರು. ಈ ಸಿನಿಮಾದಲ್ಲಿ ನವಾಜುದ್ದೀನ್ ಅವರು ಅವನೀತ್‌ರೊಂದಿಗೆ ರೊಮ್ಯಾನ್ಸ್ ಮಾಡುತ್ತಾರೆ, ಮುತ್ತು ಕೊಡುತ್ತಾರೆ. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. “ಈಗಿನ್ನೂ 21 ವರ್ಷದವರಾಗಿರುವ ಅವನೀತ್ ತನಗಿಂತ 28 ವರ್ಷ ಹಿರಿಯ ವ್ಯಕ್ತಿಯಿಂದ ಮುತ್ತನ್ನಿಕ್ಕಿಸಿಕೊಳ್ಳಬೇಕೇ? ಕಂಗನಾ ಆದರೂ ಈ ಬಗ್ಗೆ ಯೋಚನೆ ಮಾಡಬಾರದಿತ್ತೇ?” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗಿತ್ತು. ರೊಮ್ಯಾನ್ಸ್‌ಗೆ ವಯಸ್ಸಿನ ಹಂಗಿಲ್ಲ. ಸಮಸ್ಯೆ ಏನೆಂದರೆ ಈಗಿನ ಯುವ ಸಮಾಜದಲ್ಲಿ ರೊಮ್ಯಾನ್ಸ್ ಉಳಿದುಕೊಂಡೇ ಇಲ್ಲ. ರೊಮ್ಯಾನ್ಸ್‌ಗೆ ಅತಿ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿದ್ದ ಕಾಲದವರು ನಾವು. ನಾವು ಪ್ರೀತಿಯಲ್ಲಿ ವರ್ಷಗಳ ಕಾಲ ಇರುತ್ತಿದ್ದೆವು. ಈಗಲೂ ಶಾರುಖ್ ಖಾನ್ ರೊಮ್ಯಾಂಟಿಕ್ ಪಾತ್ರಗಳಲ್ಲಿ ನಟಿಸುತ್ತಾರೆ. ಏಕೆಂದರೆ ಈಗಿನವರಿಗೆ ರೊಮ್ಯಾನ್ಸ್ ಬರುವುದೇ ಇಲ್ಲ” ಎಂದು ನವಾಜುದ್ದೀನ್ ವಾದಿಸಿದ್ದರು.
ದಿ ಕೇರಳ ಸ್ಟೋರಿ
ಕೇರಳದ ಹಿಂದು/ಕ್ರಿಶ್ಚಿಯನ್ ಯುವತಿಯರನ್ನು ಸಿರಿಯಾ/ಅಫ್ಘಾನಿಸ್ತಾನಕ್ಕೆ ಕಳಿಸಿ ಇಸ್ಲಾಮ್ಗೆ ಮತಾಂತರ ಮಾಡುವ/ಲವ್ ಜಿಹಾದ್ಗೆ ಗುರಿಪಡಿಸುವ ಕಥೆಯನ್ನು ಒಳಗೊಂಡ ದಿ ಕೇರಳ ಸ್ಟೋರಿ ಸಿನಿಮಾ ಒಳಗೊಂಡಿದೆ. ಈ ಚಿತ್ರದ ಬಿಡುಗಡೆಗೆ ಕಾಂಗ್ರೆಸ್, ಇತರ ಕಮ್ಯೂನಿಸ್ಟ್ ಪಕ್ಷಗಳು ವಿರೋಧಿಸಿದ್ದವು. ಇದರಲ್ಲಿ ಇಸ್ಲಾಮ್ನ್ನು ಕೆಟ್ಟದಾಗಿ ಬಿಂಬಿಸಲಾಗಿದೆ ಎಂದು ಆರೋಪಿಸಿದ್ದರು. ಬಿಡುಗಡೆಗೂ ಮುನ್ನವೇ ಮದ್ರಾಸ್, ಕೇರಳ ಹೈಕೋರ್ಟ್ಗಳಿಗೆ, ಸುಪ್ರೀಂಕೋರ್ಟ್ಗೆ ಹಲವರು ಅರ್ಜಿ ಸಲ್ಲಿಸಿದ್ದರು. ಆದರೆ ಯಾವುದೇ ಕೋರ್ಟ್ಗಳೂ ಪ್ರದರ್ಶನಕ್ಕೆ ತಡೆ ನೀಡಿರಲಿಲ್ಲ. ಮೇ 5ರಂದು ಬಿಡುಗಡೆಯಾಗಿತ್ತು.