Site icon Vistara News

Actress Malashree: ಬೆಳಕಿನ ಹಬ್ಬಕ್ಕೆ ಅಮ್ಮ- ಮಗಳ ಭರ್ಜರಿ ಫೋಟೊಶೂಟ್‌!

malashree aradhanaa

ಬೆಂಗಳೂರು: ನಾಡಿನೆಲ್ಲೆಡೆ ದೀಪಾವಳಿ ಸಂಭ್ರಮ. ಬೆಳಕಿನ ಹಬ್ಬದ ಸಂಭ್ರಮ ಹಿರಿಯ ಟಿ ಮಾಲಾಶ್ರೀ (Actress Malashree) ಅವರ ಮನೆಯಲ್ಲಿ ಈ ಬಾರಿ ಕೊಂಚ ಹೆಚ್ಚು ಎನ್ನಬಹುದು. ಹಬ್ಬದ ಸಂಭ್ರಮವನ್ನು ಸಂಭ್ರಮಿಸಲು ಮಾಲಾಶ್ರೀ ಅವರು ಮಗಳು ಆರಾಧನಾ ಜತೆ ಹೊಸ ಲುಕ್ ನಲ್ಲಿ ಮಿಂಚಿದ್ದಾರೆ. ಅಮ್ಮ – ಮಗಳು ನೂತನ ರೀತಿಯಲ್ಲಿ ಫೋಟೊ ಶೂಟ್ ಮಾಡಿಸಿಕೊಂಡಿದ್ದಾರೆ.

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಈ ಫೋಟೊ ಶೂಟ್ ಮಾಡಿಸಿಕೊಂಡಿದ್ದೇವೆ. ನಾಡಿನ ಸಮಸ್ತ ಜನತೆಗೆ ದೀಪಾವಳಿ ಶುಭಾಶಯ ತಿಳಿಸುತ್ತೇನೆ. ಬಹಳ ವರ್ಷಗಳ ನಂತರ ನಾನು ಫೋಟೊ ಶೂಟ್ ಮಾಡಿಸಿಕೊಂಡಿದ್ದೀನಿ. ಮಗಳ ಜತೆಗೆ ಫೋಟೊ ಶೂಟ್ ಮಾಡಿಸಿಕೊಂಡಿರುವುದು ಹೆಚ್ಚು ಖುಷಿಯಾಗಿದೆ. ಈ ವರ್ಷ ನನ್ನ ಮಗಳು “ಕಾಟೇರ” ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದಾಳೆ. ನನಗೆ ತಾವು ನೀಡಿರುವ ಪ್ರೋತ್ಸಾಹ ನನ್ನ ಮಗಳಿಗೂ ನೀಡಿ ಎನ್ನುತ್ತಾರೆ ನಟಿ ಮಾಲಾಶ್ರೀ.

‘ಕಾಟೇರ’ (Kaatera) ಸಿನಿಮಾಗೆ ಖ್ಯಾತ ನಿರ್ದೇಶಕ ತರುಣ್​ ಸುಧೀರ್​ ಅವರು ಆ್ಯಕ್ಷನ್​-ಕಟ್​ ಹೇಳುತ್ತಿದ್ದು, ರಾಕ್​ಲೈನ್​ ವೆಂಕಟೇಶ್​ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಫಸ್ಟ್‌ನಿಂದ ಲಾಸ್ಟ್ ವರೆಗೆ ಆಶ್ಲೀಲತೆ ಇಲ್ಲ . ಸಭ್ಯವಾದ ಸಂಭಾಷಣೆ ಇದೆ. ಅದ್ಭುತವಾದ ನಿರ್ಮಾಪಕರಿದ್ದಾರೆ. ಸೆಟ್ ಗೆ ಬರ್ತಾ ಇರಲಿಲ್ಲ.. ಎಲ್ಲವನ್ನೂ ಒದಗಿಸಿದ್ದಾರೆ. ಇದು ಇಂಡಿವಿಶ್ಯುವಲ್ ಶೋ ಅಲ್ಲ. ಪ್ಲೇಟ್ ತೊಳೆಯೋನಿಂದ ಹಿಡಿದು ಎಲ್ಲರಿಗೂ ಈ ಸಿನಿಮಾ ಸೇರಲಿದೆ. ನಟ ಬಿರಾದಾರ್, ಪದ್ಮಾ ವಸಂತಿ ಮೇಡಂ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ಹಿಂದಿರೋದು ದಾರಿ.. ಮುಂದಿರೋದು ಜವಾಬ್ದಾರಿ.. ಇದು ಸಿನಿಮಾ ಲೈನ್ ಎಂದು ಹೇಳುವ ಮೂಲಕ ಕಾಟೇರ ಬಗ್ಗೆ ದರ್ಶನ್ ಈ ಹಿಂದೆ ಸುಳಿವು ನೀಡಿದ್ದರು.

ಇದನ್ನೂ ಓದಿ: Narendra Modi: ಯೋಧರ ಜತೆ ಮೋದಿ ದೀಪಾವಳಿ ಸಂಭ್ರಮ ಹೇಗಿತ್ತು? ಹೀಗಿವೆ ಫೋಟೊಗಳು

ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ‘ಕಾಟೇರ’ ಚಿತ್ರಕ್ಕೆ ವಿ. ಹರಿಕೃಷ್ಣ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ. ಸುಧಾಕರ್ ಸಿನಿಮಾಟೋಗ್ರಫಿ ಚಿತ್ರಕ್ಕಿದೆ. 70ರ ದಶಕದಲ್ಲಿ ನಡೆದ ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ ಜಡೇಶ್ ಹಂಪಿ ಹಾಗೂ ತರುಣ್ ಸುಧೀರ್ ‘ಕಾಟೇರ’ ಚಿತ್ರಕ್ಕೆ ಕಥೆ ಸಿದ್ಧಪಡಿಸಿದ್ದಾರೆ. ಮಾಸ್ತಿ ಸಂಭಾಷಣೆ ಚಿತ್ರಕ್ಕಿದೆ.

Exit mobile version