ಬೆಂಗಳೂರು: ಮಲಯಾಳಂ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ಪಿ ಚಂದ್ರಕುಮಾರ್ ಅವರು ʻಮದರ್ ಥೆರೆಸಾʼ ಸಿರೀಸ್ (Mother Teresa Series) ಮಾಡಲು ಮುಂದಾಗಿದ್ದಾರೆ. ಹಿಂದಿ, ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ತಯಾರಾಗಲಿರುವ ಈ ಪ್ಯಾನ್ ಇಂಡಿಯಾ ವೆಬ್ ಸೀರೀಸ್ ಸುಮಾರು 30 ಕೋಟಿ ರೂ.ಗಳ ಬಿಗ್ ಬಜೆಟ್‌ನಲ್ಲಿ ಚಿತ್ರತಂಡ ನಿರ್ಮಾಣ ಮಾಡುತ್ತಿದೆ ಎಂದು ವರದಿಯಾಗಿದೆ. ವಿಶೇಷವಾಗಿ ಈ ವೆಬ್ ಸರಣಿಯಲ್ಲಿ ಹಿರಿಯ ನಟ ಮಿಥುನ್ ಚಕ್ರವರ್ತಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಮದರ್ ಥೆರೆಸಾ ಬಗ್ಗೆ ಮೂರು ವರ್ಷಗಳಿಂದ ಪಿ. ಚಂದ್ರಕುಮಾರ್ ಮಾಹಿತಿ ಹಲೆ ಹಾಕಿದ್ದರು.
ಮದರ್ ಥೆರೆಸಾ ಅವರ ಬಾಲ್ಯ, ಹರೆಯದ ಜೀವನ ಹೇಗಿತ್ತು. ಹಾಗೂ ಅವರ ಹಿರಿಯ ವಯಸಿನಲ್ಲಿ ನಡೆದ ಘಟನೆಗಳು, ಸಮಾಜಸೇವೆ ಇದನ್ನೆಲ್ಲ ಈ ಪ್ಯಾನ್ ಇಂಡಿಯಾ ವೆಬ್ ಸೀರೀಸ್ ಮೂಲಕ ನಿರ್ದೇಶಕ ಚಂದ್ರಶೇಖರ್ ಹೇಳ ಹೊರಟಿದ್ದಾರೆ. ರೋಮ್, ಜೆರುಸಲೆನಿಯಂ, ಟೆಥ್‌ಲೆಹೆಮ್, ಮ್ಯಾಸಿಡೋನಿಯಾ, ಇಟಲಿಯಂತಹ ಸ್ಥಳಗಳ ಜತೆಗೆ ಮದರ್ ಥೆರೆಸಾ ಅವರ ಜೀವನದ ಮೇಲೆ ಪ್ರಭಾವ ಬೀರಿದ ಪಶ್ಚಿಮ ಬಾಂಗಾಳ, ಬಾಂಗ್ಲಾದೇಶ, ಮುಂಬೈ, ಕೇರಳ. ಬಿಹಾರ. ಕರ್ನಾಟಕ ಮುಂತಾದ ಪ್ರಮುಖ ಸ್ಥಳಗಳಲ್ಲೆ ಚಿತ್ರೀಕರಣ ನಡೆಯಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.
ಇದನ್ನೂ ಓದಿ: Jr NTR: ಜ್ಯೂ. ಎನ್‌ಟಿಆರ್-ಪ್ರಶಾಂತ್ ನೀಲ್ ಸಿನಿಮಾ ಟೈಟಲ್ ಏನು? ಮೇ 20ಕ್ಕೆ ಸಿಗಲಿದ್ಯಾ ಅಪ್‌ಡೇಟ್?
ನಿರ್ಮಾಪಕ ಚಂದ್ರಶೇಖರ್ ಈ ಬಗ್ಗೆ ಮಾತನಾಡಿ ʻʻಮಲಯಾಳಂ, ತಮಿಳು, ತೆಲುಗು, ಹಿಂದಿಯಲ್ಲಿ ಹಲವಾರು ಸಿನಿಮಾಗಳನ್ನು ನಿರ್ಮಿಸಿದ್ದೆ. ಈ ಸಿರೀಸ್ ಕನ್ನಡದಲ್ಲಿಯೂ ಬರುತ್ತಿದೆ. ಯಂಗ್ ಥೆರೆಸಾ ಪಾತ್ರಕ್ಕಾಗಿ ಹುಡಕಾಟ ನಡೆದಿದೆ. ನಾಲ್ಕು ವರ್ಷದ ಹಿಂದೆಯೇ ಇದರ ಪ್ಲ್ಯಾನ್ ಮಾಡಿದ್ದೆವು. ಮೂರು ಸೀಜನ್‌ನಲ್ಲಿ ಒಟ್ಟು 30 ಎಪಿಸೋಡ್ ಗಳಲ್ಲಿ ಮದರ್ ಥೆರೆಸಾ ಅವರ ಕಥೆ ಮೂಡಿಬರಲಿದೆ. ಮುಂದಿನ ತಿಂಗಳು ಚಿತ್ರೀಕರಣ ಪ್ರಾರಂಭಿಸುತ್ತಿದ್ದೇವೆ. ಒಟಿಟಿ ಪ್ಲಾಟ್ ಫಾರ್ಮ್‌ನಲ್ಲಿ ಈ ಸೀರೀಸ್ ರಿಲೀಸಾಗಲಿದ್ದು, ಈ ಬಗ್ಗೆ ಮಾತುಕತೆ ಕೂಡ ನಡೆಯುತ್ತಿದೆʼʼಎಂದರು.
ಪಿ.ಸುಕುಮಾರ್ ಅವರ ಛಾಯಾಗ್ರಹಣ, ಜರೀ ಅಮರದೇವ ಅವರ ಸಂಗೀತ ಇದ್ದು, ಅನಿತಾ ಮೆನ್ನನ್, ತನಿಮಾ ಮೆನ್ನನ್, ಸಾಪಿಕೌರ್, ಜೋಷಿ ಜೋಸೆಫ್ ಪ್ರಮುಖ ತಾರಾಗಣದಲ್ಲಿದ್ದಾರೆ.