ಬೆಂಗಳೂರು: ಅಮ್ಮ ಅಮ್ಮ ಅನ್ನೋ ಮಾತು ಬಂತು ಎಲ್ಲಿಂದ..? ಭೂಮಿಗೆ ಬಂದ (Mother’s Day 2024) ಮೊದಲನೆ ಕಂದನ ಅಳುವ ದನಿಯಿಂದ ʼಈ ಸಾಲುಗಳು ಯಾವಾಗಲೂ ನಮ್ಮನ್ನ ಬಿಡದೇ ಕಾಡುತ್ತವೆ. ʼಅಮ್ಮʼ ಅನ್ನೋ ಶಬ್ದಕ್ಕೆ ಅರ್ಥ ನಿಡುವುದು ಕೂಸೇ ಆದ್ರೂ ಆ ಕೂಸಿಗೆ ರೆಕ್ಕೆ ಕಟ್ಟಿ ಹಾರೋ ಹಾಗೇ ಮಾಡೋಳು ತಾಯಿ. ಪ್ರತಿವರ್ಷ ಮೇ ತಿಂಗಳ 2ನೇ ಭಾನುವಾರ ಮದರ್ಸ್ ಡೇ. ತಾಯಂದಿರ ದಿನದ ಹಿನ್ನೆಲೆಯಲ್ಲಿ ಜಗ್ಗೇಶ್, ದುನಿಯಾ ವಿಜಯ್ ಸೇರಿದಂತೆ ಹಲವರು ತಮ್ಮ ತಾಯಿಯನ್ನು ಸ್ಮರಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ.
ನವರಸ ನಾಯಕ ಜಗ್ಗೇಶ್ ಅವರು ಇನ್‌ಸ್ಟಾದಲ್ಲಿ ಅಮ್ಮನ ತೊಡೆ ಮೇಲೆ ಮಲಗಿರುವ ಫೋಟೊ ಜತೆಗೆ ಹೀಗೆ ಬರೆದಿದ್ದಾರೆ. ಧನ್ಯವಾದ ಜೀ ಕನ್ನಡ. ನನ್ನ ಪ್ರೀತಿಯ ಅಮ್ಮನ ಈ ರೀತಿ ನೆನೆಯುವಂತ ಕಾಣಿಕೆಗಾಗಿ.
ನಾನು ಇಂದು 61 ವರ್ಷವಾದರು ಅಮ್ಮನ ನೆನೆದಾಗ ಮಗುವಾಗುವೆ. ಅಂತಹ ಶಕ್ತಿಯಿದೆ ಅಮ್ಮನ ಎರಡಕ್ಷರಕ್ಕೆ.
ಕಾರುಣ್ಯ ಸೆಲೆಯ ಓ ಅಮ್ಮಂದಿರೆ…ನೀವುಗಳು ಇರಬೇಕು ಶಾಶ್ವತ. ದೃವನಕ್ಷತ್ರದಂತೆ..! ಮರೆಯಾಗದೆ ಮಕ್ಕಳ ಮುಂದೆ..ʼʼಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Viral News: ಇಂತಹ ಅಮ್ಮಂದಿರೂ ಇರ್ತಾರಾ? ಈ ಶಾಕಿಂಗ್ ವಿಡಿಯೊ ನೋಡಿದರೆ ನಿಮ್ಮ ರಕ್ತ ಕುದಿಯುವುದು ಖಚಿತ
ದುನಿಯಾ ವಿಜಯ್ ಅವರು ಅಮ್ಮನ ಜತೆ ಇರುವ ಫೋಟೊ ಶೇರ್ ಮಾಡಿ ʻʻಈ ಉಸಿರು ಕೊಟ್ಟ ನಿನಗೆ
ನನ್ನ ಉಸಿರಿರೊವರೆಗೂ. ಪ್ರತಿ ದಿನ ಆಚರಣೆಯೇ ಅಮ್ಮʼʼ ಎಂದು ಬರೆದುಕೊಂಡಿದ್ದಾರೆ.
ಮಹಾಮಾರಿ ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾಗಿದ್ದ ದುನಿಯಾ ವಿಜಯ್ ಅಮ್ಮ ನಾರಾಯಣಮ್ಮ ಅವರಿಗೆ ಬ್ರೇನ್ ಸ್ಟ್ರೋಕ್ ಆಗಿತ್ತು. ದುನಿಯಾ ವಿಜಯ್ ಅವರ ತಂದೆ ರುದ್ರಪ್ಪ ಹಾಗೂ ತಾಯಿ ನಾರಾಯಣಮ್ಮ ಅವರಿಗೆ ಕೋವಿಡ್ 19 ಪಾಸಿಟಿವ್ ಕಂಡುಬಂದಿತ್ತು. ಮನೆಯಲ್ಲೇ ಚಿಕಿತ್ಸೆಗೆ ವ್ಯವಸ್ಥೆ ಮಾಡಿಸಿ, ತಂದೆ-ತಾಯಿಯನ್ನು ದುನಿಯಾ ವಿಜಯ್ ಆರೈಕೆ ಮಾಡಿದ್ದರು. ಮಾರಣಾಂತಿಕ ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾಗಿದ್ದ ನಾರಾಯಣಮ್ಮ ಅವರಿಗೆ ಬ್ರೇನ್ ಸ್ಟ್ರೋಕ್ ಆಗಿತ್ತು. 3 ವರ್ಷಗಳ ಹಿಂದೆ ನಟ ದುನಿಯಾ ವಿಜಯ್ ನಾರಾಯಣಮ್ಮ ನಿಧನರಾದರು.
ಸ್ಯಾಂಡಲ್‌ವುಡ್ ನಟಿ ಮಾನ್ವಿತಾ ಕಾಮತ್ (Manvita Kamath) ಅವರ ತಾಯಿ ಸುಜಾತಾ ಕಾಮತ್ ಕಿಡ್ನಿ ವೈಫಲ್ಯದಿಂದಾಗಿ ಕೊನೆಯುಸಿರೆಳೆದಿದ್ದರು. ಈ ದಿನ ನಟಿ ತಮ್ಮ ತಾಯಿಯನ್ನು ನೆನಪಿಸಿಕೊಂಡು, ಮಿಸ್ ಯೂ ಅಮ್ಮ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.
ಸ್ಯಾಂಡಲ್‌ವುಡ್ ನಟ ದುನಿಯಾ ವಿಜಯ್ (Duniya Vijay) ಅವರ ಹೊಸ ಸಿನಿಮಾ ಘೋಷಣೆ ಆಗಿದೆ. ವಿಶೇಷ ಅಂದರೆ ಈ ಸಿನಿಮಾ ಮೂಲಕ ದುನಿಯಾ ವಿಜಯ್ ಅವರ ಮಗಳು ಮೋನಿಕಾ ಸಿನಿರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ‘ಕಾಟೇರ’ ಚಿತ್ರಕ್ಕೆ ಕಥೆ ಬರೆದಿದ್ದ ಜಡೇಶ್ ಹಂಪಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಮೋನಿಕಾ ಈಗ ಹೆಸರು ಬದಲಾಯಿಸಿಕೊಂಡಿದ್ದಾರೆ. ಸಿನಿಮಾಗಾಗಿ ರಿತಾನ್ಯಾ ಎಂದು ಹೆಸರು ಇಟ್ಟುಕೊಂಡಿದ್ದಾರೆ.
ಸದ್ಯಕ್ಕೆ ಪ್ರೊಡಕ್ಷನ್ ನಂ 2. ಟೈಟಲ್ ಮೂಲಕ ಸಿನಿಮಾ ಚಿತ್ರೀಕರಣ ಚಾಲನೆ ದೊರೆತಿದೆ. ಸತ್ಯ ಪ್ರಕಾಶ್ ನಿರ್ಮಾಪಕರಾಗಿ, ಸಹ ನಿರ್ಮಾಪಕರಾಗಿ ಸೂರಜ್ ಗೌಡ ಇದ್ದಾರೆ. ಕೋಲಾರ ಸುತ್ತಮುತ್ತ ಸಿನಿಮಾದ ಕಥೆ ನಡೆಯಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ನೈಜ್ಯ ಕಥೆಯನ್ನು ಆಧರಿಸಿದ ಸಿನಿಮಾ ಎಂದು ಹೇಳಿಕೊಂಡಿದೆ. ಕೋಲಾರ ಭಾಷೆಯಲ್ಲಿ ಚಿತ್ರದ ಡೈಲಾಗ್ ಇರಲಿದೆ.