ಬೆಂಗಳೂರು: ನಟಿ ಮೌನಿ ರಾಯ್ (Mouni Roy) ಆಗಾಗ ತಮ್ಮ ಫ್ಯಾಶನ್ ಸೆನ್ಸ್‌ನಿಂದ ನೋಡುಗರನ್ನು ಬೆರಗುಗೊಳಿಸುತ್ತಲೇ ಇರುತ್ತಾರೆ. ನಟಿ ಡಿ. 14ರ ರಾತ್ರಿ, ಮುಂಬೈನಲ್ಲಿ ಪಾರ್ಟಿವೊಂದರಲ್ಲಿ ಕಾಣಿಸಿಕೊಂಡರು. ಅತಿ ಚಿಕ್ಕ ಉಡುಪನ್ನು ಧರಿಸಿ, ಬ್ಯಾಕಲೆಸ್ ಆಗಿ ಹಾಟ್ ಆಗಿ ಕಂಡಿದ್ದಾರೆ. ಇದೀಗ ಮೌನಿ ರಾಯ್ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ʻʻನಾವು ಭಾರತೀಯರುʼʼಎಂದು ಕಮೆಂಟ್ ಮೂಲಕ ನಟಿಯ ಬಗ್ಗೆ ಆಕ್ರೋಶ ಹೊರ ಹಾಕುತ್ತಿದ್ದಾರೆ.
ನಟಿ ಮೌನಿ ರಾಯ್ ಪಾರ್ಟಿಗೆ ಹೋಗುತ್ತಿರುವ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನೆಟ್ಟಿಗರೊಬ್ಬರು “ನಾವು ಭಾರತೀಯರು. ಪಾಶ್ಚಿಮಾತ್ಯ ಉಡುಗೆಯನ್ನು ಏಕೆ ನಾವು ಧರಿಸಬೇಕು?. ನಾವು ನಮ್ಮದೇ ಆದ ಸುಂದರವಾದ ಬಟ್ಟೆಗಳನ್ನು ಹೊಂದಿದ್ದೇವೆʼʼಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ನಟಿಯನ್ನು ಉರ್ಫಿ ಅವರಿಗೆ ಹೋಲಿಸಿದ್ದಾರೆ. ಮತ್ತೊಬ್ಬರು ʻʻಇಷ್ಟು ಬಟ್ಟೆ ಆದ್ರೂ ಏಕೆ ಧರಿಸಬೇಕು?ʼʼ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು “ಭಾರತೀಯರು ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅನುಸರಿಸುತ್ತಾರೆ. ಆದರೆ ವಿದೇಶಿಯರು ಭಾರತೀಯ ಸಂಸ್ಕೃತಿಯನ್ನು ಅನುಸರಿಸುತ್ತಾರೆ” ಎಂದು ಕಮೆಂಟ್ ಮಾಡಿದ್ದಾರೆ.
ಜನಪ್ರಿಯ ಶೋ ನಾಗಿನ್ ಧಾರಾವಾಹಿಗೆ ಹೆಸರುವಾಸಿಯಾದ ನಟಿ, ಅಕ್ಷಯ್ ಕುಮಾರ್ ಅವರ ಗೋಲ್ಡ್ (2018) ಸಿನಿಮಾಗೆ ನಾಯಕಿಯಾಗಿ ಪದಾರ್ಪಣೆ ಮಾಡಿದರು. ಮೇಡ್ ಇನ್ ಚೀನಾ, ರೋಮಿಯೋ ಅಕ್ಬರ್ ವಾಲ್ಟರ್ ಚಲನಚಿತ್ರಗಳಲ್ಲಿ ನಟಿಸಿದ ನಂತರ, ರಣಬೀರ್ ಕಪೂರ್-ಆಲಿಯಾ ಭಟ್ ಅವರ ಬ್ರಹ್ಮಾಸ್ತ್ರದಲ್ಲಿಯೂ ಕಾಣಿಸಿಕೊಂಡರು. ಬಾಲಿವುಡ್‌ನಲ್ಲಿ ತನಗೆ ಗೌರವ ಮತ್ತು ಮೆಚ್ಚುಗೆಯನ್ನು ನೀಡಿದ ಸಿನಿಮಾ ಬ್ರಹ್ಮಾಸ್ತ್ರ ಎಂದು ಮೌನಿ ಬಹಿರಂಗಪಡಿಸಿದ್ದರು.
ಇದನ್ನೂ ಓದಿ: Mouni Roy: ಇಲ್ಲಿವೆ ಬೋಲ್ಡ್ ಲುಕ್‌ನಿಂದ ನೆಟ್ಟಿಗರ ಮನ ಸೆಳೆಯುತ್ತಿರುವ ಮೌನಿ ರಾಯ್ ಫೋಟೊಗಳು
ವೈರಲ್ ವಿಡಿಯೊ
‘ಕೆಜಿಎಫ್: ಚಾಪ್ಟರ್ 1’ ಸಿನಿಮಾದ ಹಿಂದಿ ವರ್ಷನ್ನ ‘ಗಲಿ ಗಲಿ ಮೇ..’ ಹಾಡಿನಲ್ಲಿ ಯಶ್ ಜತೆ ಅವರು ಡ್ಯಾನ್ಸ್ ಮಾಡಿದ್ದರು.ಇನ್ಸ್ಟಾಗ್ರಾಮ್ನಲ್ಲಿ ಅವರನ್ನು ಬರೋಬ್ಬರಿ 2.8 ಕೋಟಿ ಮಂದಿ ಫಾಲೋ ಮಾಡುತ್ತಿದ್ದಾರೆ. ಮೌನಿ ರಾಯ್ ಅವರಿಗೆ ಈಗ 38 ವರ್ಷ ವಯಸ್ಸು. ದುಬೈನಲ್ಲಿ ಸೆಟ್ಲ್ ಆಗಿರುವ ಉದ್ಯಮಿ ಸೂರಜ್ ನಂಬಿಯಾರ್ ಜತೆ ಅವರು ಮದುವೆ ಆಗಿದ್ದಾರೆ.