Site icon Vistara News

Mrs Chatterjee Vs Norway: ರಾಣಿ ಮುಖರ್ಜಿ ಅಭಿನಯದ ಮಿಸೆಸ್‌ ಚಟರ್ಜಿ Vs ನಾರ್ವೆ ಟ್ರೈಲರ್‌ ಔಟ್‌!

Mrs Chatterjee Vs Norway Trailer Out

ಬೆಂಗಳೂರು: ಮಿಸೆಸ್‌ ಚಟರ್ಜಿ Vs ನಾರ್ವೆ (Mrs Chatterjee Vs Norway) ಚಿತ್ರದ ಅಧಿಕೃತ ಟ್ರೈಲರ್‌ ಫೆ.23ರಂದು ಬಿಡುಗಡೆಗೊಂಡಿದೆ. ರಾಣಿ ಮುಖರ್ಜಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ತಾಯಿಯ ಪಾತ್ರದಲ್ಲಿ ರಾಣಿ ಮುಖರ್ಜಿ ಕಾಣಿಸಿಕೊಂಡಿದ್ದಾರೆ. ಅಶಿಮಾ ಛಿಬ್ಬರ್ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.

ಮಿಸೆಸ್‌ ಚಟರ್ಜಿ Vs ನಾರ್ವೆ ಸಿನಿಮಾವನ್ನು ನಿಖಿಲ್ ಆಡ್ವಾಣಿ ನಿರ್ಮಿಸಿದ್ದಾರೆ. ನಾರ್ವೆ ದೇಶದಲ್ಲಿ ಭಾರತೀಯ ದಂಪತಿಯ ಮಕ್ಕಳನ್ನು ಸರ್ಕಾರ ವಶಕ್ಕೆ ಪಡೆಯುತ್ತದೆ. ಬಳಿಕ ಭಾರತೀಯ ದಂಪತಿ ಮಕ್ಕಳನ್ನು ವಾಪಸ್ಸು ಪಡೆಯಲು ಹೇಗೆಲ್ಲ ಕಾನೂನು ಹೋರಾಟ ಮಾಡುತ್ತಾರೆ ಎಂಬುದೇ ಚಿತ್ರದ ಒನ್‌ಲೈನ್‌ ಸ್ಟೋರಿ. ಈ ಬಗ್ಗೆ ನಿಖಿಲ್ ಆಡ್ವಾಣಿ ಮಾತನಾಡಿ ʻʻರಾಣಿ ಮುಖರ್ಜಿ ಅವರನ್ನು ಹೊಸ ಅವತಾರದಲ್ಲಿ ತರುವುದು ಪ್ರಮುಖ ಜವಾಬ್ದಾರಿಯಾಗಿತ್ತುʼʼ ಎಂದು ಅವರು ಹೇಳಿದರು. ಮಾರ್ಚ್ 17 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: Bollywood Actress: ಶಿಮ್ಮರ್‌ ಸೀರೆಗಳಲ್ಲಿ ಮಿಂಚಿದ ಬಾಲಿವುಡ್‌ ನಟಿಯರು

ರಾಣಿ ಮುಖರ್ಜಿ ಅವರು ʻಬಂಟಿ ಔರ್‌ ಬಬ್ಲಿ-2ʼ ಸಿನಿಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಮಾರ್ಚ್‌ 21ರಂದು ರಾಣಿ ಮುಖರ್ಜಿ ಅವರ ಬಯೋಗ್ರಫಿ ಕೂಡ ಬಿಡುಗಡೆಯಾಗಲಿದೆ.

Exit mobile version