Site icon Vistara News

Mrunal Thakur: ಕೈ ಕೈ ಹಿಡಿದುಕೊಂಡ ಮೃಣಾಲ್ ಠಾಕೂರ್- ಬಾದ್‌ಶಾ; ಡೇಟಿಂಗ್ ಇರಬಹುದಾ?

Mrunal, Badshah

ಬೆಂಗಳೂರು: ನವೆಂಬರ್ 10ರಂದು ಶಿಲ್ಪಾಶೆಟ್ಟಿಯವರು ದೀಪಾವಳಿ ಪಾರ್ಟಿಯನ್ನು ಆಯೋಜಿಸಿದ್ದರು. ಸಂಭ್ರಮಾಚರಣೆಯಲ್ಲಿ ಭಾಗವಹಿಸಿದವರಲ್ಲಿ ಮೃಣಾಲ್ ಠಾಕೂರ್ (Mrunal Thakur) ಮತ್ತು ಬಾದ್‌ಶಾ ಕೂಡ ಒಬ್ಬರು. ಪಾರ್ಟಿಯಿಂದ ಹೊರಡುವಾಗ ಇಬ್ಬರೂ ಪರಸ್ಪರ ಕೈ ಹಿಡಿದುಕೊಂಡು ಹೊರಡಿದ್ದಾರೆ. ಈ ಕ್ಲಿಪ್ ವೈರಲ್‌ ಆದ ನಂತರ, ಇಬ್ಬರೂ ಡೇಟಿಂಗ್ ಮಾಡುತ್ತಿರಬಹುದು ಎಂಬ ವದಂತಿಗಳು ಹಬ್ಬಿವೆ.

ನಟ ಮೃಣಾಲ್ ಠಾಕೂರ್ ಅವರು ನವೆಂಬರ್ 12ರ ಭಾನುವಾರದಂದು ಗಾಯಕ ಬಾದ್‌ಶಾ ಮತ್ತು ಶಿಲ್ಪಾ ಶೆಟ್ಟಿ ಅವರೊಂದಿಗಿನ ಫೋಟೋವನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದರು. ಬಾದ್‌ಶಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಈ ಪೋಟೊವನ್ನು ರೀ ಪೋಸ್ಟ್‌ ಮಾಡಿದ್ದಾರೆ. ಈಗ, ಪಾರ್ಟಿಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಮೃಣಾಲ್ ಮತ್ತು ಬಾದ್‌ಶಾ ಕೆಲವು ಸೆಕೆಂಡುಗಳ ಕಾಲ ಕೈ ಹಿಡಿದುಕೊಂಡಿದ್ದಾರೆ. ಮೃಣಾಲ್ ಆಲಿವ್ ಹಸಿರು ಬಣ್ಣದ ಲೆಹೆಂಗಾದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ವಿಡಿಯೊ ವೈರಲ್‌ ಆಗುತ್ತಿದ್ದಂತೆ ʻʻನಾನು ಅವರನ್ನು ಜೋಡಿಯಾಗಿ ಒಟ್ಟಿಗೆ ನೋಡುತ್ತೇನೆ ಎಂದು ನಿರೀಕ್ಷಿಸಿರಲಿಲ್ಲʼʼಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: Vijay Devarakonda-Mrunal Thakur: ಶ್ರೀಲೀಲಾ ಬೆನ್ನಲ್ಲೇ ಮೃಣಾಲ್‌ ಠಾಕೂರ್‌ ಜತೆ ವಿಜಯ್ ದೇವರಕೊಂಡ ರೊಮ್ಯಾನ್ಸ್!

ಕೆಲವು ದಿನಗಳ ಹಿಂದೆ, ಮೃಣಾಲ್ ಠಾಕೂರ್ ತೆಲುಗು ಹುಡುಗನನ್ನು ಮದುವೆಯಾಗಲು ಸಿದ್ಧರಾಗಿದ್ದಾರೆ ಎಂಬ ವದಂತಿ ಹರಡಿತ್ತು. ನಟಿ ಕೊನೆಯ ಬಾರಿಗೆ ಇಶಾನ್ ಖಟ್ಟರ್ ಅವರೊಂದಿಗೆ ‘ಪಿಪ್ಪಾ’ದಲ್ಲಿ ನಟಿಸಿದ್ದರು. ಮುಂದೆ ನಾನಿ ಜತೆ ‘ಹಾಯ್ ನಾನ್ನʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಹಾಯ್ ನಾನ್ನ ಸಿನಿಮಾಗೆ ಯುವ ನಿರ್ದೇಶಕ ಶೌರ್ಯುವ್ ಆಕ್ಷನ್ ಕಟ್ ಹೇಳಿದ್ದು, ನಿರ್ದೇಶಕನಾಗಿ ಇದು ಇವರ ಮೊದಲ ಚಿತ್ರವಾಗಿದೆ. ಎಮೋಶನಲ್ ಫ್ಯಾಮಿಲಿ ಎಂಟರ್‌ಟೇನ್‌ಮೆಂಟ್ ಸಬ್ಜೆಕ್ಟ್ ಒಳಗೊಂಡ ಈ ಚಿತ್ರ ಅಪ್ಪ-ಮಗಳ ಬಾಂಧವ್ಯದ ಸುತ್ತ ಹೆಣೆಯಲಾದ ವಿಭಿನ್ನ ಕಥಾಹಂದರವನ್ನು ಒಳಗೊಂಡಿದೆ. ನಾನಿ ಜೋಡಿಯಾಗಿ ‘ಸೀತಾ ರಾಮಂ’ ಖ್ಯಾತಿಯ ಮೃಣಾಲ್ ಠಾಕೂರ್ ತೆರೆ ಹಂಚಿಕೊಳ್ಳುತ್ತಿದ್ದಾರೆ. ಅಪ್ಪನಾಗಿ ನಾನಿ ಹಾಗೂ ಮಗಳಾಗಿ ಬೇಬಿ ಕಿಯಾರಾ ಖಾನ್ ನಟಿಸಿದ್ದಾರೆ.

ತಂದೆ ಮತ್ತು ಮಗಳ ಬಾಂಧವ್ಯದ ಜತೆಗೆ ಪ್ರೀತಿ ಕಥಾಹಂದರವೇ ಟೀಸರ್ ಹೈಲೆಟ್. ತಾಯಿ ಇಲ್ಲದ ಮಗಳಿಗೆ ಅಪ್ಪನೇ ಸರ್ವಸ್ವ. ಅಪ್ಪನಿಗೆ ಮಗಳ ಜೀವ. ಈ ಚೆಂದದ ಕುಟುಂಬಕ್ಕೆ ಎಂಟ್ರಿಯಾಗುವ ನಾಯಕಿ. ಆ ನಂತರ ಏನಾಗುತ್ತದೆ ಎನ್ನುವುದೇ ಒನ್‌ ಲೈನ್‌ ಸ್ಟೋರಿ.

ಮೋಹನ್ ಚೆರುಕುರಿ, ಮೂರ್ತಿ ಕಲಗಾರ, ಡಾ. ವಿಜೇಂದ್ರ ರೆಡ್ಡಿ ಅವರು ‘ವೈರ ಎಂಟರ್ಟೇನ್ಮೆಂಟ್’ ಬ್ಯಾನರ್ ಮೂಲಕ ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಸಾನೂ ಜಾನ್ ವರ್ಗೀಸ್ ಅವರ ಛಾಯಾಗ್ರಹಣ ಈ ಚಿತ್ರಕ್ಕೆ ಇರಲಿದೆ. ‘ಹೃದಯಂ’ ಖ್ಯಾತಿಯ ಹೇಶಮ್ ಅಬ್ದುಲ್ ವಹಾಬ್ ಅವರು ಸಂಗೀತ ನಿರ್ದೇಶನ ಮಾಡುತ್ತಿರುವುದು ವಿಶೇಷ. ಸಂಕಲನದ ಜವಾಬ್ದಾರಿಯನ್ನು ಪ್ರವೀಣ್ ಆಂಥೋನಿ ಅವರು ನಿಭಾಯಿಸುತ್ತಿದ್ದಾರೆ. ಡಿಸೆಂಬರ್ 7ಕ್ಕೆ ಪಂಚ ಭಾಷೆಯಲ್ಲಿ ಚಿತ್ರ ಬಿಡುಗಡೆಯಾಗಲಿದೆ.

Exit mobile version