ʻಸೀತಾ ರಾಮಂʼ ಸಿನಿಮಾ ಮೂಲಕ ಫೇಮಸ್ ಆದ ನಟಿ ಮೃಣಾಲ್ ಠಾಕೂರ್ (Mrunal Thakur) ಇದೇ ಮೊದಲ ಬಾರಿಗೆ ಕಾನ್ ಚಿತ್ರೋತ್ಸವದಲ್ಲಿ ಭಾಗಿಯಾಗಿದ್ದಾರೆ.
‘ಸೀತಾ ರಾಮಂ’ ಸಿನಿಮಾದಲ್ಲಿ ಸೀತಾ ಮಹಾಲಕ್ಷ್ಮಿ ಅಲಿಯಾಸ್ ಪ್ರಿನ್ಸೆಸ್ ನೂರ್ ಜಹಾನ್ ಪಾತ್ರವನ್ನು ಮೃಣಾಲ್ ಠಾಕೂರ್ ಮಾಡಿದ್ದರು.
ಈ ಫೋಟೊ ವೈರಲ್ ಆಗುತ್ತಿದ್ದಂತೆ ಮೃಣಾಲ್ ಠಾಕೂರ್ಗೆ ‘ನ್ಯಾಶನಲ್ ಕ್ರಶ್’ ಎಂದು ಅವರು ಅಭಿಮಾನಿಗಳು ಕರೆಯಲು ಆರಂಭಿಸಿದ್ದಾರೆ.
ಮೃಣಾಲ್ ಅವರ ನಟ ನಾಗಾರ್ಜುನ ಜತೆ ನಾಯಕಿಯಾಗಿ ನಟಿಸಲಿದ್ದಾರಂತೆ. ಈ ಬಗ್ಗೆ ಅಧಿಕೃತ ಘೋಷಣೆ ಇನ್ನಷ್ಟೇ ಹೊರಬೀಳಬೇಕಿದೆ.
ಕಿರುತೆರೆಯಲ್ಲಿ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಮೃಣಾಲ್ ಠಾಕೂರ್ ಅವರು ಮರಾಠಿ ಚಿತ್ರ ‘ವಿಟ್ಟಿ ದಂಡು’ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟರು.