Site icon Vistara News

Mrunal Thakur: ಅದ್ಧೂರಿಯಾಗಿ ಸೆಟ್ಟೇರಿದ ನಾನಿ ಸಿನಿಮಾ: ಮೃಣಾಲ್ ಠಾಕೂರ್ ನಾಯಕಿ!

Mrunal Thakur Nani Film

ಬೆಂಗಳೂರು: ಹೊಸ ವರ್ಷದ ಆರಂಭದ ದಿನ ನ್ಯಾಚುರಲ್ ಸ್ಟಾರ್ ನಾನಿ ತಮ್ಮ ಮೂವತ್ತನೇ ಸಿನಿಮಾದ ಅಪ್ಡೇಟ್ ಹಂಚಿಕೊಂಡಿದ್ದರು. ವೈರ ಎಂಟರ್ಟೈನ್ಮೆಂಟ್ಸ್‌ ಬ್ಯಾನರ್ ನಡಿ ನಾನಿ ಅವರ ಮೂವತ್ತನೇ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ವೀಡಿಯೊ ಝಲಕ್ ಮೂಲಕ ಗಮನ ಸೆಳೆದಿದ್ದ ಚಿತ್ರತಂಡ ಅದ್ದೂರಿಯಾಗಿ ಮುಹೂರ್ತ ಆಚರಿಸಿಕೊಂಡು ಸಿನಿಮಾಗೆ ಚಾಲನೆ ನೀಡಿದೆ. ನಾನಿ ಜೋಡಿಯಾಗಿ ‘ಸೀತಾ ರಾಮಂ’ ಖ್ಯಾತಿಯ ಮೃಣಾಲ್ ಠಾಕೂರ್ (Mrunal Thakur) ತೆರೆ ಹಂಚಿಕೊಳ್ಳುತ್ತಿದ್ದಾರೆ.

ಮೆಗಾ ಸ್ಟಾರ್ ಚಿರಂಜೀವಿ ಚಿತ್ರಕ್ಕೆ ಕ್ಲ್ಯಾಪ್ ಮಾಡಿದ್ದು, ಅಶ್ವಿನಿ ದತ್ ಕ್ಯಾಮೆರಾ ಚಾಲನೆ ಮಾಡುವ ಮೂಲಕ ಸಿನಿಮಾಗೆ ಅದ್ಧೂರಿಯಾಗಿ ಚಾಲನೆ ನೀಡಲಾಯಿತು. ಬುಚ್ಚಿ ಬಾಬು, ಕಿಶೋರ್ ತಿರುಮಲ, ಹನು ರಾಘವಪುಡಿ, ವಸಿಷ್ಠ ಮತ್ತು ವಿವೇಕ್ ಆತ್ರೇಯ ಚಿತ್ರದ ಮೊದಲ ದೃಶ್ಯಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.ವಿಜೇಂದ್ರ ಪ್ರಸಾದ್ ಚಿತ್ರದ ಸ್ಕ್ರಿಪ್ಟ್ ಚಿತ್ರತಂಡಕ್ಕೆ ಹಸ್ತಾಂತರಿಸಿದರು. ಪಸಲ ಕರುಣ್ ಕುಮಾರ್, ಗಿರೀಶ್ ಅಯ್ಯರ್, ಚೋಟ ಕೆ ನಾಯ್ಡು, ಸುರೇಶ್ ಬಾಬು, ದಿಲ್ ರಾಜು,14 ರೀಲ್ಸ್ ಗೋಪಿ-ರಾಮ್ ಅಚಂತ, ಎಕೆ ಅನಿಲ್ ಸುಂಕರ, ಮೈತ್ರಿ ರವಿ, ಡಿವಿವಿ ದಾನಯ್ಯ, ಶ್ರವತಿ ರವಿ ಕಿಶೋರೆ, ಕೆ.ಎಸ್ ರಾವ್, ಸಾಹು ಗರಪಾಟಿ, ನಿಹಾರಿಕ ಕೊನಿಡೇಲ ಸೇರಿದಂತೆ ಹಲವರು ಚಿತ್ರದ ಮುಹೂರ್ತದಲ್ಲಿ ಭಾಗಿಯಾಗಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಇದನ್ನೂ ಓದಿ: Actor Suriya : ʻಸೂರ್ಯ 42ʼದಲ್ಲಿ ದಿಶಾ ಪಟಾನಿ ಜತೆ ಸ್ಕ್ರೀನ್‌ ಶೇರ್‌ ಮಾಡಲಿದ್ದಾರಾ ಮೃಣಾಲ್ ಠಾಕೂರ್‌?

ನಾನಿ ಮೂವತ್ತನೆ ಚಿತ್ರ ಇದಾಗಿದ್ದು, ಶೌರ್ಯುವ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಿರ್ದೇಶಕನಾಗಿ ಇದು ಇವರ ಮೊದಲ ಸಿನಿಮಾವಾಗಿದೆ. ಎಮೋಶನಲ್ ಫ್ಯಾಮಿಲಿ ಕಥಾಹಂದರ ಒಳಗೊಂಡ ಈ ಚಿತ್ರ ಅಪ್ಪ-ಮಗಳ ಬಾಂಧವ್ಯದ ಸುತ್ತ ಹೆಣೆಯಲಾದ ವಿಭಿನ್ನ ಕಥಾಹಂದರ ಒಳಗೊಂಡಿದೆ. ನಾನಿ ಜೋಡಿಯಾಗಿ ‘ಸೀತಾ ರಾಮಂ’ ಖ್ಯಾತಿಯ ಮೃಣಾಲ್ ಠಾಕೂರ್ ತೆರೆ ಹಂಚಿಕೊಳ್ಳುತ್ತಿದ್ದಾರೆ. ಚಿತ್ರದ ಟೈಟಲ್ ಬಗ್ಗೆ ಸದ್ಯದಲ್ಲೇ ಚಿತ್ರತಂಡ ಮಾಹಿತಿ ಹಂಚಿಕೊಳ್ಳಲಿದೆ.

ಇದನ್ನೂ ಓದಿ: Actor Nani: ನ್ಯಾಚುರಲ್ ಸ್ಟಾರ್ ನಾನಿ ‘ದಸರಾ’ ಟೀಸರ್ ಬಿಡುಗಡೆಗೆ ಡೇಟ್ ಫಿಕ್ಸ್

ವೈರ ಎಂಟರ್ಟೈನ್ಮೆಂಟ್ಸ್‌ ಬ್ಯಾನರ್ ನಡಿ ಮೋಹನ್ ಚೆರುಕುರಿ, ಡಾ.ವಿಜೇಂದ್ರ ರೆಡ್ಡಿ ಹಾಗೂ ಮೂರ್ತಿ ಕಲಗಾರ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಸಾನು ಜಾನ್ ವರ್ಗೀಸ್ ISC ಕ್ಯಾಮೆರಾ ವರ್ಕ್ ಚಿತ್ರಕ್ಕಿರಲಿದ್ದು, ‘ಹೃದಯಂ’ ಸಿನಿಮಾ ಖ್ಯಾತಿಯ ಹೇಶಮ್ ಅಬ್ದುಲ್ ವಹಾಬ್ ಸಂಗೀತ ನಿರ್ದೇಶನ, ಪ್ರವೀಣ್ ಆಂಥೋನಿ ಸಂಕಲನ ಚಿತ್ರಕ್ಕಿರಲಿದೆ.

Exit mobile version