Site icon Vistara News

Bigg Boss 17: ಗಂಡ- ಹೆಂಡತಿ ಕಿತ್ತಾಟ ನಡುವೆ ಮಾಜಿ ಗರ್ಲ್‌ಫ್ರೆಂಡ್‌! ಬಿಗ್‌ ಬಾಸ್‌ನಲ್ಲಿ ಡ್ರಾಮಾ!

Munawar Faruqui ex Ayesha Khan wild card entry

ಬೆಂಗಳೂರು: ಸುಶಾಂತ್ ಸಿಂಗ್ ರಜಪೂತ್ (Bigg Boss 17) ಮಾಜಿ ಲವರ್, ನಟಿ ಅಂಕಿತಾ ಲೋಖಂಡೆ ಹಾಗೂ ಅವರ ಪತಿ ವಿಕ್ಕಿ ಜೈನ್ ‘ಬಿಗ್ ಬಾಸ್ 17’ ಮೂಲಕ ಗಮನ ಸೆಳೆಯುತ್ತಿದ್ದಾರೆ. ಮಾತ್ರವಲ್ಲ ಆಗಾಗ ಈ ಜೋಡಿ ಗಲಾಟೆ ಕೂಡ ಮಾಡಿಕೊಳ್ಳುತ್ತಲೇ ಇರುತ್ತದೆ. ಅಂಕಿತಾ ಅವರು ಇತರ ಮನೆಯ ಸದಸ್ಯರ ಮುಂದೆ ಪತಿ ವಿಕ್ಕಿ ಮೇಲೆ ಚಪ್ಪಲಿ ಬಿಸಾಡಿ ಸಖತ್‌ ಸುದ್ದಿಯಾಗಿದ್ದರು. ಆದರೀಗ ಮತ್ತೊಂದು ಟ್ವೀಸ್ಟ್‌ ನೋಡುಗರಿಗೆ ಎದುರಾಗಿದೆ. ಕಾಮಿಡಿಯನ್ ಮುನಾವರ್ ಫಾರುಕಿ ಅವರ ‘ಮಾಜಿ ಗೆಳತಿ’ ಎಂದು ಹೇಳಿಕೊಂಡಿರುವ ಆಯೇಶಾ ಖಾನ್ ಈ ವಾರ ವೈಲ್ಡ್ ಕಾರ್ಡ್ ಎಂಟ್ರಿ ಕೊಡಲು ಸಜ್ಜಾಗುತ್ತಿದ್ದಾರೆ. ಕಲರ್ಸ್‌ ಇದೀಗ ಹೊಸ ಪ್ರೋಮೊ ಹಂಚಿಕೊಂಡಿದೆ.

ಆಯೇಶಾ ಖಾನ್ ಈ ಕಾರ್ಯಕ್ರಮಕ್ಕೆ ಬರುತ್ತಿರುವ ನಾಲ್ಕನೇ ವೈಲ್ಡ್ ಕಾರ್ಡ್ ಸ್ಪರ್ಧಿ. ಮುನಾವರ್ ಫಾರುಕಿ ಬಗ್ಗೆ ಈಗಾಗಲೇ ಹಲವು ಸಂದರ್ಶನಗಳಲ್ಲಿ ಮಾತನಾಡಿರುವ ಅವರು, ತಾನು ಅವರ ಮಾಜಿ ಗರ್ಲ್‌ಫ್ರೆಂಡ್ ಎಂದು ಹೇಳಿಕೊಂಡಿದ್ದಾರೆ. ಮುನಾವರ್ ಮುಖವಾಡ ಕಳಚಲು ಬಿಗ್ ಬಾಸ್ ಮನೆಗೆ ಹೋಗುತ್ತಿದ್ದೇನೆ ಎಂದಿದ್ದಾರೆ.

“ನೀವೆಲ್ಲರೂ ನನ್ನನ್ನು ಆಯೇಶಾ ಖಾನ್ ಎಂದು ತಿಳಿದಿದ್ದೀರಿ. ಈ ಮನೆಯಲ್ಲಿ ಒಬ್ಬ ಸ್ಪರ್ಧಿ ಇದ್ದಾರೆ. ಮುನಾವರ್ ಫಾರುಕಿ. ಮನಯಲ್ಲಿ ಕಾಣಿಸುವ ಹಾಗೆ ಆತ ಹೊರಗೆ ಇಲ್ಲ. ಅವರು ಹುಡುಗಿಯರನ್ನು ಅಪ್ರೋಚ್ ಮಾಡುವುದು ಹೀಗೆ, ಯಾಮಾರಿಸಿ. ಶೋಗೆ ಹೋಗೋ ಮೊದಲು ಅವರು ನನಗೆ ಐ ಲವ್​ ಯೂ, ನಾನು ನಿನ್ನ ಮದುವೆ ಆಗುತ್ತೇನೆ ಎನ್ನುತ್ತಿದ್ದರು. ಅವರು ಹುಡುಗಿಯರನ್ನು ಅಪ್ರೋಚ್ ಮಾಡೋದೆ ಹೀಗೆ. ನನಗೆ ಅವರಿಂದ ಕ್ಷಮೆ ಬೇಕು.” ಎಂದಿದ್ದಾರೆ. ಮುನಾವರ್ ಅವರು ಬಿಗ್ ಬಾಸ್​ಗೆ ತೆರಳಿ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದಾರೆ. ಅವರಿಗೆ ಬೇಡಿಕೆ ಹೆಚ್ಚಿದೆ.

ಇದನ್ನೂ ಓದಿ: Bigg Boss 17: ಬಿಗ್‌ ಬಾಸ್‌ಗೆ ಬರುತ್ತಿದ್ದಾರೆ ಈ ಸೂಪರ್‌ ಸ್ಟಾರ್‌! ಯಾವಾಗ?

ಅಕ್ಟೋಬರ್ 15 ರಂದು ಬಿಗ್‌ ಬಾಸ್‌ ಸೀಸನ್‌ 17 ಶುರುವಾಯ್ತು. ಜಿಯೋ ಸಿನಿಮಾದಲ್ಲಿ ಸ್ಟ್ರೀಮ್ ಆಗುತ್ತಿದೆ. ಪರ್ಯಾಯವಾಗಿ, ಕಾರ್ಯಕ್ರಮವು ಕಲರ್ಸ್ ಟಿವಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರ ಕಾಣುತ್ತಿದೆ. ಈ ಬಾರಿಯ ಬಿಗ್‌ ಬಾಸ್‌ ಹಲವಾರು ಹೊಸ ಮತ್ತು ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ.

Exit mobile version