Site icon Vistara News

Must Watch Movies: ಕಣ್ಣು ಮಿಟುಕಿಸಲೂ ಬಿಡದ ಸಸ್ಪೆನ್ಸ್‌ ಥ್ರಿಲ್ಲರ್‌ ʼಕೀಡಂʼ

keedam movie

ಶಿವರಾಜ್‌ ಡಿ ಎನ್‌ ಎಸ್‌

ಕೆಲವೊಮ್ಮೆ ಹಾಗೇ… ನಾವು (Must Watch Movies) ಏನ್ ಮಾಡ್ಬಾರ್ದು ಅಂತ ಅನ್ಕೊಂಡಿರ್ತಿವೋ ಅದನ್ನೇ ಮಾಡ್ಬೇಕಾದ ಪರಿಸ್ಥಿತಿ ಎದುರಾಗುತ್ತೆ. ಇಲ್ಲ ನಾನು ಯಾವುದೇ ಕಾರಣಕ್ಕೂ ಅದನ್ನ ಮಾಡೋದೇ ಇಲ್ಲ ಅಂದ್ಕೊಂಡಿದ್ರೂ ನಮ್ಮ ಅಸ್ತಿತ್ವಕ್ಕೆ ಧಕ್ಕೆಯುಂಟಾಗುತ್ತಿದೆ ಅಂದಾಗ, ಮಾನಸಿಕವಾಗಿ ನಮ್ಮನ್ನ ಯಾರೋ ಕೆಣಕಿ ಕೆರಳಿಸ್ತಿದಾರೆ ಅನ್ನೋವಾಗ ನಮ್ಮೊಳಗಿನ ಅನಿವಾರ್ಯತೆ ಮತ್ತು ಅವಶ್ಯಕತೆ ಎರಡೂ ಅನೈತಿಕ ಸಂಬಂಧ ಬೆಳೆಸಿ ಮಾಸ್‌ ಹೀರೋಯಿಸಂಗೆ ಜನ್ಮ ಕೊಡುತ್ತವೆ. ಆಮೇಲೆ ನಾವು ಏನ್ಮಾಡ್ಬೇಕು ಮಾಡ್ಬಾರ್ದು ಅನ್ನೋದನ್ನ ಅದೇ ಡಿಸೈಡ್‌ ಮಾಡೋದು ಅಂತಾ ಅಂದುಕೊಳ್ಳುವರಿಗೆಲ್ಲ ಈ ಸಿನಿಮಾ ಸಿಕ್ಕಾಬಟ್ಟೆ ಇಷ್ಟ ಆಗಬಹುದು. ಉತ್ತಮ ಮನರಂಜನೆಯನ್ನಂತೂ ಇದೆ.

ಇನ್ನೂ ಸುಲಭವಾಗಿ ಅರ್ಥವಾಗುವಂತೆ ಹೇಳುವುದಾದರೆ, ದೇವರು ದೇವರಾಗೆ ಇದ್ದರೇ ಈ ದೆವ್ವ, ಭೂತ ಅಂಥವುಗಳನ್ನು ಸದೆಬಡಿಯಲು ಸಾಧ್ಯವಿಲ್ಲ ಎನ್ನುವ ವಾಕ್ಯವನ್ನು ಉದಾಹರಿಸಬಹುದು.

ಈ ‘ಕೀಡಂ’ ಚಿತ್ರ ಈ ಕಾಲಕ್ಕೆ ಹೇಳಿಮಾಡಿಸಿದ ಸಿನಿಮಾ. ನಮ್ಮೀಡೀ ಸರ್ವಸ್ವವೇ ನಮ್ಮ ಮೊಬೈಲಿನಲ್ಲಿ ಗೊತ್ತೊ ಗೊತ್ತಿಲ್ಲದೆಯೊ ಅಡಗಿರುವಂತ ಈ ಕಾಲದಲ್ಲಿ, ನಾವು ಸ್ವಲ್ಪ ಅಜಾಗರೂಕರಾದರೂ ನಮ್ಮ ವೈಯಕ್ತಿಕ ಮಾಹಿತಿಗಳೆಲ್ಲ ಯಾವ ರೀತಿ ಸೋರಿಕೆಯಾಗಬಹುದು ಎನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆ. ʼಕೀಡಂʼ ಅಂದರೆ ಕನ್ನಡದಲ್ಲಿ ಕೀಟ ಎಂದರ್ಥ. ಈ ಚಿತ್ರದಲ್ಲಿ ಕೀಟ ಅನ್ನೋದು ಮಲ್ಟಿಪಲ್ ಮೆಟಫರ್ ಅನ್ಕೊಬಹುದು. ಕಥಾ ನಾಯಕಿ, ಖಳನಾಯಕರು ಅಥವಾ ಇಂಟರ್ನೇಟ್ ಈ ಮೂರರಲ್ಲಿ ನಾವು ಯಾವುದನ್ನಾದರೂ ಕೀಟ ಅನ್ಕೊಬಹುದು.

ಕ್ರೈಂ ಕಹಾನಿ

ಮೊದಲ ದೃಶ್ಯದಲ್ಲಿ ಇದೊಂದು ಕ್ರೈಂ ಕಹಾನಿ ಎನ್ನುವಂತೆ ತೆರೆದುಕೊಂಡರೂ ಎರಡನೇ ದೃಶ್ಯಕ್ಕೆ ಇದು ಸೈಬರ್ ಕ್ರೈಂ ಸಿನಿಮಾ ಅನ್ನುವುದು ಅರ್ಥವಾಗುತ್ತದೆ. ಮೂರನೇ ದೃಶ್ಯದಿಂದಾಚೆಗೆ ನೂರ ನಲವತ್ತೆರಡು ನಿಮಿಷವಿರುವ ಈ ಚಿತ್ರ ಒಂದು ನಿಮಿಷವನ್ನೂ ವ್ಯಯಿಸದಂತೆ ತನ್ನ ಕುತೂಹಲಭರಿತ ಕತೆ, ಬಿಗಿ ನಿರೂಪಣೆಯಿಂದ ಪ್ರೇಕ್ಷಕರು ಏಕಾಗ್ರತೆಯಿಂದ ಚಿತ್ರವನ್ನು ಸಂಪೂರ್ಣವಾಗಿ ನೋಡುವಂತೆ ಮಾಡುತ್ತದೆ.

ಇದನ್ನೂ ಓದಿ: Mahila Satyagraha Smaraka: ಧೀರ ಮಹಿಳೆಯರ ಹೋರಾಟ ನೆನಪಿಸುವ ಮಾವಿನಗುಂಡಿಯ ಮಹಿಳಾ ಸತ್ಯಾಗ್ರಹ ಸ್ಮಾರಕ

ರಾಂಗ್‌ ನಂಬರ್

ನಿವೃತ್ತ ಲಾಯರ್ ಬಾಲನ್ ಮಗಳಾದ ರಾಧಿಕಾ ಸಾಮಾನ್ಯಳಾದರೂ ಅಸಾಮಾನ್ಯ ಟೆಕ್ ಎಕ್ಸ್‌ಪರ್ಟ್. ಪರಿಣಿತ ತಂತ್ರಜ್ಞೆಯಾಗಿರುವ ರಾಧಿಕಾ ಸೈಬರ್ ಸೆಕ್ಯೂರಿಟಿ ಪ್ರಾಜೆಕ್ಟ್ ಆರಂಭಿಸುವ ಕೆಲಸದಲ್ಲಿದ್ದಾಳೆ. ಕೆಲಸದ ಒತ್ತಡದ ನಡುವೆ ಒಮ್ಮೆ ಫ್ರಿಡ್ಜ್ ಸರ್ವಿಸ್ ನವರ ಸಂಪರ್ಕಿಸುವಲ್ಲಿ ಮೊಬೈಲ್ ನಲ್ಲಿ ಮಾತನಾಡುತ್ತ ಧ್ವನಿ ಸರಿಯಾಗಿ ಕೇಳಿಸದ ಹಿನ್ನೆಲೆಯಲ್ಲಿ ತಪ್ಪು ಸಂಖ್ಯೆಯ ನಂಬರ್ ಒಂದಕ್ಕೆ ಕರೆಮಾಡಿ ಆಗುವ ಸಣ್ಣ ತಪ್ಪಿನಿಂದ ದೊಡ್ಡ ಸಮಸ್ಯೆಗೆ ಸಿಲುಕಿಕೊಳ್ಳುತ್ತಾಳೆ. ಹೆಣ್ಣು ಮಕ್ಕಳ ಸಂಖ್ಯೆಯನ್ನ ಹುಡುಕಿ ಕರೆ ಮಾಡುವಂತ ಅಪಾಪೋಲಿ, ಪೊರ್ಕಿಯೊಬ್ಬನಿಗೆ ರಾಧಿಕಾಳ ನಂಬರ್ ತಾನಾಗೆ ಹೋಗಿ ಸಿಲುಕಿ ಕೊಂಡಂತಾಗುತ್ತದೆ, ಅಲ್ಲಿಂದಾಚೆಗೆ ಏನಾಗುತ್ತದೆ ಈ ಕ್ರೈಂ ಕಥೆಯೊಳಗೆ ಸೈಬರ್ ಕ್ರೈಮ್ ಎಳೆಯನ್ನ ಹೇಗೆ ಎಣೆದಿದ್ದಾರೆ ಅನ್ನೋದನ್ನ ಸಿನಿಮಾ ನೋಡಿ ತಿಳಿಯುವದರಿಂದಲೇ ಎಚ್ಚು ರೋಚಕ ಅನುಭವ ಉಂಟಾಗಬಹುದು.

ತಂದೆ-ಮಗಳ ವಾತ್ಸಲ್ಯ

ಚಿತ್ರದಲ್ಲಿ ಮುಖ್ಯ ವಿಷಯದಿಂದಾಚೆಗೂ ಶುರುವಿನಲ್ಲಿನ ತಂದೆ- ಮಗಳ ವಾತ್ಸಲ್ಯ ಒಡನಾಟ ಸಂಭಾಷಣೆ ಇಷ್ಟವಾಗುತ್ತದೆ. ಸಾಮಾಜಿಕವಾಗಿ ಒಂದು ಅಪರಾಧವನ್ನು ನಾವು ಸಣ್ಣದು ಎಂದು ಪರಿಗಣಿಸಿ ಸುಮ್ಮನಾಗುವುದರಿಂದ ಆರೋಪಿಗಳು ತಮ್ಮ ಅಪರಾಧ ಕೃತ್ಯವನ್ನು ಆರಾಮವಾಗಿ ಮುಂದುವರಿಸುತ್ತಾರೆ, ನಮಗಾದ ಹಿಂಸೆ ಮತ್ತೊಬ್ಬರಿಗೂ ಆಗಬಹುದು ಎನ್ನುವ ನಿಲುವಿನಿಂದ ಕಾನೂನು ಹೋರಾಟಕ್ಕೆ ಮುಂದಾಗುವುದು ಮತ್ತು ಕಾನೂನಾತ್ಮಕವಾಗಿ ಸಮಸ್ಯೆ ಬಗೆಹರಿಯದಿದ್ದಾಗ ತನ್ನ ಸಮರ್ಥ್ಯವನ್ನು ಬಳಸಿ ವೈರಿಗಳಿಗೆ ಪೆಟ್ಟು ಕೊಡಲು ನಿರ್ಧರಿಸುವ ರಾಧಿಕಾಳ ನಿಲುವು ಇಷ್ಟವಾಗಬಹುದು.

ಇದನ್ನೂ ಓದಿ: ರಾಜ ಮಾರ್ಗ ಅಂಕಣ : ನಮಗೆ ಸ್ವಾತಂತ್ರ್ಯ ಸುಲಭದಲ್ಲಿ ದೊರಕಿದ್ದು ಅಂತೀರಾ? ಈ ಲೇಖನ ಓದಿದ ಮೇಲೆ ಹೇಳಿ!

ನೈಜತೆಗೆ ಹತ್ತಿರ

ಈ ‘ಕೀಡಂ’ ಗಂಭೀರ ಸಮಸ್ಯೆಯೊಂದನ್ನು ಗಂಭೀರವಾಗಿ ಹೇಳುವುದರ ಜೊತೆಗೆ ಕುತೂಹಲಭರಿತ ನೈಜ ಎನಿಸುವಂತ ಹೊಡೆದಾಟದ ಸಾಹಸ ದೃಶ್ಯವನ್ನೂ ಸೇರಿಸಿ ಚಿತ್ರದ ಕೊನೆಯ ದೃಶ್ಯದ ತನಕವೂ ಕುತೂಹಲ ಕೆರಳಿಸುತ್ತಲೇ ನೋಡಿಸಿಕೊಳ್ಳುತ್ತದೆ. ಕರ್ಣನ್ ಚಿತ್ರದಲ್ಲಿ ನಾಯಕಿಯಾಗಿದ್ದ Rajisha Vijayan ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ರಾಧಿಕಾ ಪಾತ್ರವನ್ನು ಉತ್ತಮವಾಗಿ ನಿಭಾಯಿಸಿದ್ದಾರೆ, ಮಲಯಾಳಂ ಚಿತ್ರರಂಗದ ಹಿರಿಯ ನಟ Sreenivasan ರಾಧಿಕಾಳ ತಂದೆ ಬಾಲನ್ ಪಾತ್ರದಲ್ಲಿ ತಮ್ಮ ನೈಜಾಭಿನಯ ನೀಡಿದ್ದಾರೆ. Rahul Riji Nair, Renjit Shekar, Mahesh Nair, Vijay Babu, Manikandan Pattambi ಮುಂತಾದರವರ ತಾರಗಣವಿದೆ. ರಾಹುಲ್ ರಾಜಿ ನಾಯರ್ ನಿರ್ದೇಶನ ಮಾಡುವುದಲ್ಲದೆ ಸಹ ನಿರ್ಮಾಪಕರೂ ಆಗಿದ್ದಾರೆ. Rakesh dharan ಅವರ ಛಾಯಗ್ರಹಣವಿರುವ ಈ ಚಿತ್ರಕ್ಕೆ Sidhartha Pradeep ಸಂಗೀತ ನೀಡಿದ್ದಾರೆ. 20 May 2022ರಂದು ತೆರೆ ಕಂಡಿದ್ದ ಚಿತ್ರವನ್ನು ನೀವು ZEE5 ನಲ್ಲಿ ನೋಡಬಹುದು. ಸಸ್ಪೆನ್ಸ್, ಕ್ರೈಮ್ ಕಂ ಸೈಬರ್ ಕ್ರೈಮ್ ಥ್ರಿಲ್ಲರ್ ಸಿನಿಮಾ ನೋಡುವ ಆಸಕ್ತರಿಗೆ ಈ ಚಿತ್ರ ಖುಷಿ ಕೊಡುತ್ತದೆ.

Exit mobile version