ಬೆಂಗಳೂರು: ‘ಏನಿದು ದಿ ಕಾಶ್ಮೀರಿ ಫೈಲ್ಸ್ (The Kashmir Files)? ಸಮಾಜದ ನಿರ್ದಿಷ್ಟ ವರ್ಗದ ಜನರನ್ನು ಅವಮಾನಿಸಲೆಂದೇ ಮಾಡಿದ ಸಿನಿಮಾ’ ಎಂದು ಹೇಳಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರಿಗೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Filmmaker Vivek Agnihotri) ಅವರು ಲೀಗಲ್ ನೋಟಿಸ್ ಕಳಿಸಿದ್ದಾರೆ. ಇದೀಗ ವಿವೇಕ್ ಅಗ್ನಿಹೋತ್ರಿ ಕಳೆದ ವರ್ಷದಿಂದ ತಾವು ಏನೆಲ್ಲ ದುಃಖದ ಸನ್ನಿವೇಶವನ್ನು ಎದುರಿಸಿದ್ದೆ, ಕೆಲವು ರಾಜಕಾರಣಿಗಳು ಮತ್ತು ಪತ್ರಕರ್ತರು ಹೇಗೆ ತನ್ನನ್ನು ಗುರಿಯಾಗಿಸಿಕೊಂಡಿದ್ದರು ಎಂಬದನ್ನು ಬಹಿರಂಗಪಡಿಸಿದ್ದಾರೆ.
ಅಗ್ನಿಹೋತ್ರಿ ಮಾಧ್ಯಮದ ಮುಂದೆ ಮಾತನಾಡಿ ʻ”ಕಳೆದ ಒಂದು ವರ್ಷದಿಂದ ನಾನು ಹೇಗೆ ಬದುಕುತ್ತಿದ್ದೇನೆ ಎಂದು ಹೇಳಬಲ್ಲೆ. ಕೆಲವು ರಾಜಕಾರಣಿಗಳು, ಪತ್ರಕರ್ತರು ಮತ್ತು ಫ್ಯಾಕ್ಟ್ ಚೆಕರ್ಸ್ಗಳು ಎಂದು ಕರೆಯಲ್ಪಡುವವರು ನನ್ನ ಜೀವನವನ್ನು ಕಷ್ಟಕರವಾಗಿಸುವಂತೆ ಮಾಡಿದರು. ಈಗಲೂ ನನ್ನನ್ನು ಮೌನಗೊಳಿಸಲು ಪ್ರಯತ್ನಿಸುತ್ತಲೇ ಇದ್ದಾರೆ. ಕೆಲವು ಫ್ಯಾಕ್ಟ್ ಚೆಕರ್ಸ್ಗಳು ನನ್ನ ಮಗಳ ಇನ್ಸ್ಟಾಗ್ರಾಮ್ ಪ್ರೊಫೈಲ್ನಿಂದ ಫೋಟೊಗಳನ್ನು ಕದ್ದು ಶೇರ್ ಮಾಡಿಕೊಂಡಿದ್ದು ಇದೆ. ನಾಚಿಕೆಯಿಲ್ಲದ ಕೆಲಸ ಅದು,” ಎಂದು ಹೇಳಿದರು.
‘ದಿ ಕಾಶ್ಮೀರ್ ಫೈಲ್ಸ್’ ಬಿಡುಗಡೆಯಾದ ಮೇಲೆ ಭಾರೀ ರಾಜಕೀಯ ವಿವಾದವನ್ನು ಹುಟ್ಟುಹಾಕಿತು. 1990ರ ದಶಕದಲ್ಲಿ ಆದ ಕಾಶ್ಮೀರಿ ಪಂಡಿತರ ಹತ್ಯೆ, ವಲಸೆಯ ಕಥೆಯನ್ನು ಒಳಗೊಂಡ ಈ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ವಿರೋಧ ಎದುರಿಸಿತ್ತು. ಇಲ್ಲಿ ಮುಸ್ಲಿಂ ಸಮುದಾಯವನ್ನು ಕ್ರೂರವಾಗಿ ಬಿಂಬಿಸಲಾಗಿದೆ ಎಂದು ಅನೇಕರು ವಾದಿಸಿದ್ದರು.
ಇದನ್ನೂ ಓದಿ: Vivek Agnihotri | ವಿವೇಕ್ ಅಗ್ನಿಹೋತ್ರಿಯ ʻದಿ ವ್ಯಾಕ್ಸಿನ್ ವಾರ್ʼ ಸಿನಿಮಾ ಸೆಟ್ನಲ್ಲಿ ಅನುಪಮ್ ಖೇರ್
ಮಮತಾ ಬ್ಯಾನರ್ಜಿಗೆ ಲೀಗಲ್ ನೋಟಿಸ್ ಕಳಿಸಿದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ
ವಿವೇಕ್ ಅಗ್ನಿಹೋತ್ರಿ ಅವರು ‘ಮಮತಾ ಬ್ಯಾನರ್ಜಿ ಅವರು ನಮ್ಮನ್ನು ಮತ್ತು ನಮ್ಮ ದಿ ಕಾಶ್ಮೀರಿ ಫೈಲ್ಸ್ ಸಿನಿಮಾವನ್ನು ಅಪಮಾನ ಮಾಡಲು ದುರುದ್ದೇಶ ಪೂರಿತ ಹೇಳಿಕೆಗಳನ್ನು ಕೊಡುತ್ತಿದ್ದಾರೆ. 2024ರಲ್ಲಿ ಹೊರಬರಲಿರುವ ದಿ ದೆಹಲಿ ಫೈಲ್ಸ್ ಬಗ್ಗೆಯೂ ಕೆಟ್ಟದಾಗಿ ಮಾತಾಡಿದ್ದಾರೆ. ಹೀಗಾಗಿ ನಾನು, ನಿರ್ಮಾಪಕ ಅಭಿಷೇಕ್ ಅಗರ್ವಾಲ್ ಮತ್ತು ಪಲ್ಲವಿ ಜೋಶಿ (ವಿವೇಕ್ ಅಗ್ನಿಹೋತ್ರಿ ಪತ್ನಿ) ಸೇರಿ ಅವರ ವಿರುದ್ಧ ಕಾನೂನು ಹೋರಾಟ ಶುರು ಮಾಡಿದ್ದು, ಈಗಾಗಲೇ ಲೀಗಲ್ ನೋಟಿಸ್ ಕಳಿಸಿದ್ದೇವೆ ಎಂದು ತಿಳಿಸಿದ್ದಾರೆ.
ಕೇರಳ ಸ್ಟೋರಿ ಬಿಡುಗಡೆಯಾದಾಗಲೂ ಅದೇ ಆರೋಪ ಕೇಳಿಬರುತ್ತಿದೆ. ಕೇರಳದ ಹಿಂದು/ಕ್ರಿಶ್ಚಿಯನ್ ಯುವತಿಯರನ್ನು ಅಫ್ಘಾನ್ -ಸಿರಿಯಾಕ್ಕೆ ಕರೆದೊಯ್ದು, ಐಸಿಸ್ ಉಗ್ರ ಸಂಘಟನೆ ಸೇರಿಸುವ, ಲವ್ ಜಿಹಾದ್ಗೆ ಅವರನ್ನು ಒಳಪಡಿಸುವ ಕಥೆಯನ್ನು ದಿ ಕೇರಳ ಸ್ಟೋರಿ ಒಳಗೊಂಡಿದೆ. ಈಗಲೂ ಮುಸ್ಲಿಂ ಸಮುದಾಯವನ್ನು ಕೆಟ್ಟದಾಗಿ ಬಿಂಬಿಸಲಾಗುತ್ತಿದೆ ಎಂಬ ಆರೋಪವನ್ನು ಕಾಂಗ್ರೆಸ್, ಟಿಎಂಸಿ ಮತ್ತು ಇತರ ಪಕ್ಷಗಳು ಮಾಡುತ್ತಿವೆ. ದಿ ಕಾಶ್ಮೀರಿ ಫೈಲ್ಸ್ನ್ನು ಬಿಜೆಪಿ ಬೆಂಬಲಿಸಿತ್ತು. ಹಾಗೇ, ಕೇರಳ ಸ್ಟೋರಿಯನ್ನೂ ಈ ಪಕ್ಷ ಬೆಂಬಲಿಸುತ್ತಿದೆ.