Site icon Vistara News

Naa Saami Ranga Trailer: ಆಶಿಕಾ ರಂಗನಾಥ್ -ನಾಗಾರ್ಜುನ ಕಾಂಬಿನೇಶನ್‌ ಸಿನಿಮಾದ `ಟ್ರೈಲರ್‌’ ಬಿಡುಗಡೆ

Naa Saami Ranga trailer Out

ಬೆಂಗಳೂರು: `ನಾ ಸಾಮಿ ರಂಗ’ ನಾಗಾರ್ಜುನ ಅವರ 99ನೇ ಚಿತ್ರ. ಜನವರಿ 9ರಂದು `ನಾ ಸಾಮಿ ರಂಗ’ ಸಿನಿಮಾ ಟ್ರೈಲರ್‌ ಬಿಡುಗಡೆಗೊಂಡಿದೆ. ವಿಜಯ್ ಬಿನ್ನಿ ಅವರ ನಿರ್ದೇಶನದ ಈ ಸಿನಿಮಾಗೆ ಆಶಿಕಾ ರಂಗನಾಥ್ ನಾಯಕಿ. ಸಿನಿಮಾ ಜನವರಿ 14ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ತೆಲುಗು ಸೂಪರ್‌ಸ್ಟಾರ್ ನಾಗಾರ್ಜುನ ಅಕ್ಕಿನೇನಿ ಹಿಂದೆಂದೂ ನೋಡಿರದ ಲುಕ್‌ನಲ್ಲಿ ಕಂಡಿದ್ದಾರೆ.

`ನಾ ಸಾಮಿ ರಂಗ’ ಟ್ರೈಲರ್‌ನಲ್ಲಿ ನಾಗಾರ್ಜುನ ಅವರ ಪಂಚಿಂಗ್‌ ಡೈಲಾಗ್‌ ಸಖತ್‌ ಆಗಿದೆ ಎಂದು ವೀಕ್ಷಕರು ಕಮೆಂಟ್‌ ಮಾಡಿದ್ದಾರೆ. ಫ್ಯಾಮಿಲಿ ಎಂಟರ್‌ಟೇನರ್ ಸಿನಿಮಾ ಇದಾಗಿದೆ. ನಾ ಸಾಮಿ ರಂಗ’ 2019 ರ ಮಲಯಾಳಂ ಚಲನಚಿತ್ರ ‘ಪೊರಿಂಜು ಮರಿಯಂ ಜೋಸ್’ ಸಿನಿಮಾ ರಿಮೇಕ್‌ ಎನ್ನಲಾಗುತ್ತಿದೆ. ರಾಷ್ಟ್ರಪ್ರಶಸ್ತಿ ಹಾಗೂ ಆಸ್ಕರ್ ಪ್ರಶಸ್ತಿ ವಿಜೇತ ಎಂ‌ ಎಂ ಕೀರವಾಣಿ ಸಂಗೀತ ಸಂಯೋಜನೆ ಇದ್ದು, ಪ್ರಸನ್ನ ಕುಮಾರ್ ಬೆಜವಾಡ ಸಂಭಾಷಣೆ ಬರೆದಿದ್ದಾರೆ. ನಾಗಾರ್ಜುನ ಹೊರತಾಗಿ, ಚಿತ್ರದಲ್ಲಿ ಅಲ್ಲರಿ ನರೇಶ್, ಆಶಿಕಾ ರಂಗನಾಥ್, ಮಿರ್ನಾ ಮೆನನ್, ಅಲ್ಲರಿ ನರೇಶ್ ಮತ್ತು ರಾಜ್ ತರುಣ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಸಾಕಷ್ಟು ಸಿನಿಮಾಗಳಲ್ಲಿ ಆಶಿಕಾ ತೊಡಗಿಗೊಂಡಿದ್ದು ಪವನ್‌ ಒಡೆಯರ್‌ ನಿರ್ದೇಶನದ ರೇಮೊ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಇದನ್ನು ಹೊರತುಪಡಿಸಿ ತಮಿಳು ನಟ ಅಥರ್ವ ಜತೆಗಿನ ಚಿತ್ರ, ಸಿಂಪಲ್‌ ಸುನಿ ನಿರ್ದೇಶನದ ಗತವೈಭವ ಚಿತ್ರದಲ್ಲಿ ನಟಿಸಿದ್ದಾರೆ. ಶರಣ್​ ಜತೆ ಅವರು ನಟಿಸಿದ ‘ರ‍್ಯಾಂಬೋ 2’ ಚಿತ್ರದ ‘ಚುಟು ಚುಟು ಅಂತೈತಿ..’ ಹಾಡಿಗೆ ಸಾಕಷ್ಟು ಖ್ಯಾತಿ ಗಳಿಸಿದರು.

ಇದನ್ನೂ ಓದಿ: Ravi Teja: ಸಂಕ್ರಾಂತಿಗೆ ಬಿಡುಗಡೆಯಾಗುತ್ತಿಲ್ಲ ʻಈಗಲ್‌ʼ; ಹೊಸ ದಿನಾಂಕ ಘೋಷಣೆ!

ಸಂಕ್ರಾಂತಿ ಬಂತು ಎಂದರೆ ಟಾಲಿವುಡ್‌, ಕಾಲಿವುಡ್‌ನಲ್ಲಿ ಸಾಲು ಸಾಲು ಸಿನಿಮಾಗಳು ರಿಲೀಸ್‌ ಆಗುತ್ತವೆ. ಮಹೇಶ್ ಬಾಬು ಅವರ ‘ಗುಂಟೂರು ಖಾರಂ’, ತೇಜ ಸಜ್ಜ ಅವರ ‘ಹನುಮಾನ್‌’, ವೆಂಕಟೇಶ್ ದಗ್ಗುಬಾಟಿ ಅವರ ‘ಸೈಂಧವ’ ಕೂಡ ಬಿಡುಗಡೆಯಾಗುತ್ತಿವೆ. ಆದರೆ ರವಿತೇಜ ಅವರ ʻಈಗಲ್‌ʼ ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿದೆ.

Exit mobile version